ಯಾದಗಿರಿ ನಗರಸಭೆಯಲ್ಲಿ ಬೆಂಕಿ, ೩ ಲ.ರೂ.ನಷ್ಟ

ನಗರದ ಹೃದಯ ಭಾಗದಲ್ಲಿರುವ ನಗರಸಭೆ ಕಾರ್ಯಾಲಯ ಹಿಂದಿ ನ ಆವರಣದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿ ಕೊಂಡು ಸುಮಾರು ಮೂರು ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳು ಭಸ್ಮ ಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ. ನಗರಸಭೆಯ ಕಾರ್ಯಾಲ ಯದ ಕಾಂಪೌಂಡ್‌ ಒಳಗಡೆ ಸಂಗ್ರ ಹಿಸಿದ ಕಸದ ತೊಟ್ಟಿಗಳು ಹಾಗೂ ಹಳೆಯ ಯಂತ್ರೋಪಕರಣಗಳಿಗೆ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಕೆಲವೇ ಕ್ಷಣದಲ್ಲಿ ನೂತನ ಪ್ಲಾಸ್ಟೀಕ್‌ ಕಸದ ತೊಟ್ಟಿಗಳು ಭಸ್ಮ ಗೊಂಡಿವೆ. ಸುದ್ದಿಯನ್ನು ಅರಿತು ಅಗ್ನಿಶಾ ಮಕ ದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ನಗರಸಭೆ ಕಾರ್ಯಾಲ ಯಕ್ಕೆ ಬೆಂಕಿ ತಗುಲುವ ಮುನ್ನಾ ಬೆಂಕಿ ನಂದಿಸಿ, ಅನಾಹುತ ತಪ್ಪಿ ಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

No Comments to “ಯಾದಗಿರಿ ನಗರಸಭೆಯಲ್ಲಿ ಬೆಂಕಿ, ೩ ಲ.ರೂ.ನಷ್ಟ”

add a comment.

Leave a Reply