ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕ

ಯಾದಗಿರಿ ನಗರಸಭೆಯಲ್ಲಿ ಶೇಕಡಾ ೫೦ರಷ್ಟು ಪೌರ ಕಾರ್ಮಿಕರ ಕೊರತೆ ಇರುವುದರಿಂದ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸರ್ವ ಸದಸ್ಯರು ನಿರ್ಣಯ ಕೈಗೊಂಡು, ನಗರದ ಪ್ರಮುಖ ರಸ್ತೆಗಳು ಸೇರಿದಂತೆ ವಾರ್ಡ್‌ಗಳ ಸ್ವಚ್ಛತೆಗೆ ಅಗತ್ಯ ಕ್ರಮ ತೆಗೆದು ಕೊಳ್ಳುವ ಕುರಿತು ನಗರ ಸಭೆಯ ವಿಶೇಷ ತುರ್ತು ಸಾಮಾನ್ಯ ಸಭೆಯಲ್ಲಿ ಬುಧವಾರ ನಿರ್ಣಯ ಕೈಗೊಳ್ಳಲಾಯಿತು. ನಗರದ ನೇತಾಜಿ ಸುಭಾಶ್ಚಂದ್ರ ವೃತ್ತದಿಂದ ಸರ್ಕಾರಿ ಪದವಿ ಮಹಾ ವಿದ್ಯಾಲಯ ವರೆಗೆ ಹಾಗೂ ಜಿಲ್ಲಾಧಿ ಕಾರಿಗಳ ಕಚೇರಿವರೆಗೆ ರಸ್ತೆಯ ಎರಡು ಬದಿಗಳಲ್ಲಿ ತಗ್ಗುಗಳನ್ನು ಮುಚ್ಚಿಹಾಕಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಯಾದಗಿರಿ ಜಿಲ್ಲಾ ಕೇಂದ್ರವಾಗಿ ರುವುದರಿಂದ ಹೆಚ್ಚು ಅಭಿವೃದಿಟಛಿ ಆಗಬೇಕು. ಅದರೊಂದಿಗೆ ರಸ್ತೆ ಅಗಲೀ ಕರಣ ಅನಿವಾರ್ಯ. ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಠಿಯಿಂದ ಹೆಚ್ಚಿನ ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕೆಂದು ಸದಸ್ಯರು ಒಮ್ಮತದಿಂದ ಪೌರಾಯುಕ್ತರಿಗೆ ಸೂಚನೆ ನೀಡಿದರು.

No Comments to “ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕ”

add a comment.

Leave a Reply