ನಂದಿ ಕಟ್ಟೆ ತೆರವು : ವಿರೋಧ, ಭಾಲ್ಕಿ ಉದ್ರಿಕ್ತ
ಭಾಲ್ಕಿ ಪಟ್ಟಣದ ಪುರಸಭೆ ಕಟ್ಟಡದ ಹತ್ತಿರವಿರುವ ನಂದಿ ಕಟ್ಟೆ ತೆರವು ಗೊಳಿಸಿದ ಹಿನ್ನೆಲೆಯಲ್ಲಿ ಇಂದು ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಮತ್ತು ಡಿ.ವೈಎಸ್.ಪಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸರ್ಪ ಗಾವಲ್ಲಿನಲ್ಲಿ ಇಂದು ನಂದಿಕಟ್ಟೆ ತೆರವು ಗೊಳಿಸಿದ್ದರಿಂದ ಹಿಂದೂ ಸಂಘಟನೆಗಳು ಸೇರಿದಂತೆ ಸ್ಥಳೀ ಯರು ತೀವ್ರ ವಿರೋಧ ವ್ಯಕ್ತಪಡಿಸಿ ದ್ದರಿಂದ ಭಾಲ್ಕಿ ಪಟ್ಟಣ ದಲ್ಲಿ ಉದ್ರಿಕ್ತ ವಾತಾವರವಿದ್ದು, ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಅಲ್ಲದೆ, ೧೪೪ ಕಲಂ ನಿಷೇಧಾಜ್ಞೆ ಜಾರಿ ಮಾಡ ಲಾಗಿದೆ. ಹಿನ್ನೆಲೆ : ಪಟ್ಟಣದ ವೀರಭದ್ರೇ ಶ್ವರ ದೇವಸ್ಥಾನದ ರಥೋತ್ಸವದ ನಿಮಿತ್ಯ ಇಲ್ಲಿ ತಾತ್ಕಾಲಿಕ ನಂದಿ ಕಟ್ಟೆ ನಿರ್ಮಿಸಲಾಗಿತ್ತು. ಈ ಕಟ್ಟೆ ನಿರ್ಮಾ ಣಕ್ಕೆ ಒಂದು ಸಮುದಾಯ ಪ್ರತಿರೋ ಧ ಒಡ್ಡಿದ್ದಾಗ ಜಿಲ್ಲಾಡಳಿತ ಹಾಗೂ ಸ್ಥಳಿಯ ಶಾಸಕರು ಶಾಂತಿ ಸಭೆ ನಡೆಸಿ ನಂದಿ ಕಟ್ಟೆ ತೆರವು ಗೊಳಿಸುವುದಾಗಿ ಭರವಸೆ ನೀಡಿದ್ದರು.