ಆತಂಕ ದೂರ ಮಾಡದ ಜನಪ್ರತಿನಿಧಿಗಳು

ಕಳೆದ ೩ ದಿವಸಗಳಿಂದ ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣ ಬೂದಿ ಮುಚ್ಚಿದ ಕೆಂಡದಂತೆ ಹೊತ್ತು ಉರಿಯುತ್ತಿದೆ. ರಾಜದ ಗಡಿ ಬೀದ ರ್‌ನಲ್ಲಿ ಹೆಚ್ಚಿದ ಕೋಮು ಕಿಡಿ ಯಿಂದಾಗಿ ಜನತೆ ಆತಂಕದಲ್ಲಿದ್ದಾರೆ. ಕ್ಯಾರೆ ಎನ್ನದ ಸ್ಥಳೀಯ ಜನಪ್ರತಿನಿಧಿ ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನ ಸಚಿವ ರೇವು ನಾಯಕ ಬೆಳಮಗಿ ರಾಜಿನಾಮೆಗೆ ಇಲ್ಲಿಯ ಜಯ ಕರ್ನಾಟಕ ಸಂಘ ಟನೆ ಒತ್ತಾಯಿಸಿದೆ. ಜಿಲ್ಲೆಯ ಭಾಲ್ಕಿಯಲ್ಲಿ ಕಳೆದ ರವಿವಾರರಂದು ಪೊಲೀಸ್‌ ಸರ್ಪಗಾ ವಲಿನ ಮಧ್ಯೆ ನಂದಿ ಧ್ವಜ ಕಟ್ಟೆ ತೆರವುಗೊಳಿಸಿದ ನಂತರ ಇಡೀ ಭಾಲ್ಕಿ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಕೋಮು ಕಿಡಿ ಹಬ್ಬಿದೆ. ಕಳೆದ ೩ ದಿವಸಗಳಿಂದ ವ್ಯಾಪಾರ ವಹಿವಾಟು, ಶಾಲಾ ಕಾಲೇಜು ಸ್ಥಗಿತಗೊಂಡಿವೆ. ಪ್ರಯಾಣಿಕರು ಪರದಾಡುತ್ತಿದ್ದಾರೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣದಲ್ಲಿ ಕಳೆದ ಮೂರು ದಿವಸಗಳಿಂದ ಅಘೊಷಿತ ಬಂದ್‌ ಮುಂದುವರೆದಿದೆ. ಜನಪ್ರತಿನಿಧಿಗಳು ಇತ್ತ ಸುಳಿಯುತ್ತಿಲ್ಲ. ಜಿಲ್ಲೆಯ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಕಿರ ಣಕುಮಾರ ಖಂಡ್ರೆ , ದತ್ತುಕುಮಾರ ಕರಕಾಳೆ, ಮತ್ತು ಭಾಲ್ಕಿ ತಾಲೂಕು ಅಧ್ಯಕ್ಷರಾದ ಶಾಂತಕುಮಾರ ಚಳಕಾಪುರೆ ಪ್ರಕಟಣೆಯಲ್ಲಿ ಸಚಿವ ರೇವುನಾಯಕ ಬೆಳಮಗಿ ರಾಜಿ ನಾಮೆಗೆ ಅವರು ಒತ್ತಾಯಿಸಿದ್ದಾರೆ. ಮೂರು ದಿವಸಗಳಿಂದ ಜಿಲ್ಲೆಯ ಸಮಸ್ಯೆಗೆ ಸ್ಪಂದಿಸದ ಸಚಿವ ರುಭಾಲ್ಕಿ ಕ್ಷೇತ್ರದ ಜನತೆ ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕರು

No Comments to “ಆತಂಕ ದೂರ ಮಾಡದ ಜನಪ್ರತಿನಿಧಿಗಳು”

add a comment.

Leave a Reply