ರಾಜಾ ಹನುಮಪ್ಪ ನಾಯಕ ಅಧ್ಯಕ್ಷ, ಸರೋಜ ಉಪಾಧ್ಯಕ್ಷೆ

ರಾಜ್ಯದ ಅತಿ ಚಿಕ್ಕ ಜಿಲ್ಲಾ ಪಂಚಾ ಯತ್‌ ಎಂದು ಗುರುತಿಸಿ ಕೊಂಡಿ ರುವ ಯಾದಗಿರಿ ಜಿಲ್ಲಾ ಪಂಚಾ ಯತಿ ಮೂರನೇ ಅವ-ಧಿಗೆ ನೂತನ ಅಧ್ಯಕ್ಷರಾಗಿ ಸುರಪುರ ತಾಲೂಕಿನ ಖಾನಾಪೂರ ಕ್ಷೇತ್ರದ ಸದಸ್ಯ ರಾಜಾ ಹನುಮಪ್ಪ ನಾಯಕ ಮತ್ತು ಶಹಾಪೂರ ತಾಲೂಕಿನ ಸಗರ ಕ್ಷೇತ್ರದ ಸದಸ್ಯೆ ಶ್ರೀಮತಿ ಸರೋಜ ಅಶೋಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೀಸಲಾತಿ ಅರ್ಹತೆ ಹೊಂದಿರುವ ಏಕೈಕ ಸದಸ್ಯ ಆಡಳಿತ ರೂಢ ಬಿಜೆಪಿ ಅಭ್ಯರ್ಥಿ ರಾಜಾ ಹನುಮಪ್ಪ ನಾಯಕ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ ಸರೋಜ ಅಶೋಕ ಸಗರ ಅವರು ಮಧ್ಯಾಹ್ನ ೧೨-೪೦ಕ್ಕೆ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ೩ ಗಂಟೆಗೆ ಪ್ರಾದೇಶಿಕ ಆಯುಕ್ತ ಡಾ. ರಜನೇಶ ಗೋಯ ಲ್‌ ಅವರು ನಾಮಪತ್ರ ಪರಿಶೀಲನೆ ನಡೆಸಿದ ಬಳಿಕ ಅಧಿ- ಕೃತವಾಗಿ ಫಲಿ ತಾಂಶ ಘೊಷಣೆ ಮಾಡಿದರು. ಮೀಸಲಾತಿ ಘೊಷಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿ ಸಿದ ಕಾಂಗ್ರೆಸ್‌ ಪಕ್ಷದ ಜಿ.ಪಂ. ಸದಸ್ಯ ಲಕ್ಷ್ಮಾರೆಡ್ಡಿ ಅನಪೂರ ಅವರು ನ್ಯಾ ಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿ ದ್ದರು. ಇದರಿಂದ ಪ್ರತಿನಿ-ಧಿಗಳ ಆಯ್ಕೆ ಪ್ರಕ್ರಿಯೆ ತಡವಾಗಿ ನಡೆಯಲು ಕಾರಣವಾಯಿತು.

No Comments to “ರಾಜಾ ಹನುಮಪ್ಪ ನಾಯಕ ಅಧ್ಯಕ್ಷ, ಸರೋಜ ಉಪಾಧ್ಯಕ್ಷೆ”

add a comment.

Leave a Reply