ಕುಡಿಯುವ ನೀರಿನ ವ್ಯವಸ್ಥೆಗೆ ತಾಕೀತು ಮಾಡಿದ ಅಧ್ಯಕ್ಷ

ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಎದು ರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ನಸೀಮುದ್ದೀನ್‌ ಪಟೇಲ್‌ ಅವರು ಅಕಾರಿಗಳಿಗೆ ತಾಕೀತು ಮಾಡಿದರು. ಗುರುವಾರ ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸುತ್ತಾ ಅವರು ಮಾತನಾಡಿದರು. ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವ ವಿಷಯದಲ್ಲಿ ಯಾವುದೇ ನೆಪಗಳನ್ನು ಸಹಿಸಲು ಸಾಧ್ಯವಿಲ್ಲ. ಸಮರ್ಪಕ ವಾಗಿ ಕುಡಿಯುವ ನೀರನ್ನು ಒದಗಿ ಸುವುದು ಎಲ್ಲರ ಆದ್ಯತೆಯಾಗಿದ್ದು, ಈ ಕಾರ್ಯದಲ್ಲಿ ಅಧಿ-ಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿ ರ್ವಹಿಸಬೇಕು ಎಂದು ಅವರು ತಿಳಿಸಿದರು. ದುರಸ್ತಿ ಅಗತ್ಯ ಇರುವ ಕೊಳವೆ ಬಾವಿಗಳ ರಿಪೇರಿಗೆ ತುರ್ತು ಕ್ರಮ ಕೈಗೊಳ್ಳಬೇಕು. ದುರಸ್ತಿ ಅಗತ್ಯ ಇರುವ ಕೊಳವೆ ಬಾವಿಗಳ ಮಾಹಿತಿ ಒದಗಿಸಬೇಕು. ತುರ್ತು ದುರಸ್ತಿಗಾಗಿ ಪ್ರತಿ ತಾಲೂಕಿಗೆ ಒಂದು ದುರಸ್ತಿ ವಾಹನ ಒದಗಿಸಲಾಗುವುದು. ಅದರಲ್ಲಿ ದುರಸ್ತಿಗೆ ಸಂಬಂಧಪಟ್ಟ ಸಾಮಗ್ರಿಗಳು ಹಾಗೂ ಮೆಕ್ಯಾನಿಕ್‌ ಇರುವರು. ಈ ಕಾರ್ಯ ಸೋಮ ವಾರದಿಂದಲೇ ಜಾರಿಗೆ ತರುವಂತೆ ಅ- ಧಿಕಾರಿಗಳಿಗೆ ಸೂಚಿಸಿದರು.

No Comments to “ಕುಡಿಯುವ ನೀರಿನ ವ್ಯವಸ್ಥೆಗೆ ತಾಕೀತು ಮಾಡಿದ ಅಧ್ಯಕ್ಷ”

add a comment.

Leave a Reply