ಬೀದರ್‌ : ಬಸವ ಉತ್ಸವಕ್ಕೆ ಸಕಲ ಸಿದಟಛಿ-ತೆ

ಮಾರ್ಚ್‌ ೨೭ರಿಂದ ಮೂರು ದಿನಗಳ ಕಾಲ ನಡೆಯಲಿರುವ ಬಸವ ಉತ್ಸವವನ್ನು ಅದ್ದೂರಿ ಯಾಗಿ ನಡೆಸಲು ಭರದ ಸಿದಟಛಿತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ತಿಳಿಸಿದ್ದಾರೆ. ಬಸವ ಸಂದೇಶ ಸಾರುವ ಭವ್ಯ ಮೆರವಣಿಗೆ ಬಸವ ಉತ್ಸವದ ಪ್ರಮುಖ ಆಕರ್ಷಣೆಯಾಗಲಿದೆ. ಮೆರವಣಿಗೆಗೆ ಕೋಟೆ ಮುಂಭಾಗದಿಂದ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ೧೦ ವೈವಿಧ್ಯಮಯ ಜಾನಪದ ಕಲಾ ತಂಡಗಳು ಹಾಗೂ ಸ್ಥಳೀಯ ಕಲಾತಂಡಗಳು ಭಾಗವಹಿಸಲಿವೆ. ಬಸವಣ್ಣ ಸೇರಿದಂತೆ ಎಲ್ಲಾ ಶರಣರ ಭಾವಚಿತ್ರಗಳನ್ನು ಒಳಗೊಂಡ ಸ್ಥಬಟಛಿಚಿತ್ರ ಸೇರಿದಂತೆ ಆಕರ್ಷಕ ಸ್ಥಬಟಛಿಚಿತ್ರಗಳು ಮೆರವಣಿಗೆಗೆ ಮೆರಗು ತರಲಿವೆ. ಮೆರವಣಿಗೆಯಲ್ಲಿ ಸ್ವಸ ಹಾಯ ಗುಂಪುಗಳ ಸದಸ್ಯೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ರಂಗು ತರಲಿದ್ದಾರೆ. ರಿಯಾಯಿತಿ ದರದಲ್ಲಿ ಊಟ ಲಭ್ಯ: ಬಸವ ಉತ್ಸವದ ಅಂಗವಾಗಿ ನಗರದ ಎಲ್ಲಾ ಹೊಟೇಲ್‌ಗಳಲ್ಲಿ ರಿಯಾಯಿತಿ ದರದಲ್ಲಿ ಊಟ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಉತ್ಸವದ ಸ್ಪೆಷಲ್‌ ಊಟಕ್ಕೆ ರೂ.೧೫ ಹಾಗು ಊಟಕ್ಕೆ ೧೦ರೂ. ನಿಗದಿಪಡಿ ಸಲಾಗಿದೆ. ಹೊರಗಿನಿಂದ ಆಗಮಿಸುವವರು ಕಡಿಮೆ ದರದಲ್ಲಿ ಉತತಿಮ ಊಟ ಮಾಡಲು ಸಾಧ್ಯವಾಗುವಂತೆ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಕಾರ್ಯ-ಕ್ರ-ಮ-ದಲ್ಲಿ ಪಂಜಾಬ್‌ ರಾಜ್ಯ- ಪಾ-ಲ-ರಾದ ಕೇಂದ್ರದ ಮಾಜಿ ಕೇಂದ್ರ ಸಚಿವ ಶಿವ-ರಾಜ ಪಾಟೀಲ್‌, ಮುಖ್ಯ-ಮಂತ್ರಿ ಬಿ.ಎಸ್‌.- ಯ-ಡಿ-ಯೂ-ರಪ್ಪ ಭಾಗ-ವ-ಹಿ-ಸ-ಲಿ-ದ್ದಾರೆ.

No Comments to “ಬೀದರ್‌ : ಬಸವ ಉತ್ಸವಕ್ಕೆ ಸಕಲ ಸಿದಟಛಿ-ತೆ”

add a comment.

Leave a Reply

You must be logged in to post a comment.