ಗುಲ್ಬ-ರ್ಗಾ: ವೇತ-ನ-ಕ್ಕಾಗಿ ಆಗ್ರ-ಹಿಸಿ ಪೌರ- ಕಾ-ರ್ಮಿ-ಕ-ರಿಂದ ರಸ್ತೆ ತಡೆ

ಗುಲಬರ್ಗಾ,ಮೇ,೫- ಮಹಾನಗರ ಪಾಲಿಕೆಯ ೪೭೦ ನೈರ್ಮಲೀಕರಣ ಕೆಲಸಗಾರರ ೩೪ ತಿಂಗಳ ವೇತನವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಬುಧವಾರ ಜಗತ್‌ ವೃತ್ತದಲ್ಲಿ ಮಠಾಧೀಶರ ನೇತೃತ್ವದಲ್ಲಿ ಬೆಳಿಗ್ಗೆ ಒಂದೂವರೆ ತಾಸು ರಸ್ತೆ ತಡೆ ಚಳುವಳಿ ನಡೆಸ ಲಾಯಿತು. ಒಂದು ವೇಳೆ ತತಕ್ಷಣವೇ ವೇತನ ಪಾವತಿಸದೇ ಇದ್ದರೆ ಮೇ ೭ರಂದು ಗುಲಬರ್ಗಾ ಬಂದ್‌ ಕರೆ ನೀಡಲಾಗುತ್ತದೆ ಎಂದು ಪ್ರತಿಭಟ ನೆಕಾರರು ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದರು. ಸುಲಫಲಮಠದ ಮಹಾಂತ್‌ ಶಿವಾಚಾರ್ಯರು, ಚೌದಾಪೂರಿ ಮಠದ ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಜಗನ್ನಾಥ್‌ ಗೋಧಿ, ಜಿಲ್ಲಾ ಪಂಚಾ ಯಿತಿ ಸದಸ್ಯ ಗುರುಶಾಂತ್‌ ಪಟ್ಟೇದಾರ್‌, ರಹೆಮಾನ್‌ಶೇಠ್‌, ಭವಾನಿ ವಳಕೇರಿ, ಶಿವಕಾಂತ್‌ ಮಹಾಜನ್‌, ಶಾಂತಕುಮಾರ್‌ ಬಿರಾದಾರ್‌, ಅಸ್ಲಮ್‌ ಕಲ್ಯಾಣಿ, ಶಿವಶರಣಪ್ಪ ಖಣದಾಳ್‌, ಶಾಮ್‌ ನಾಟೀಕಾರ್‌, ಅರ್ಜುನ್‌ ಭದ್ರೆ, ಆಕಾಶ್‌ ಉಪಾಧ್ಯಾಯ, ಅಕ್ಷಯ್‌ ಡ್ಯಾನ್ಸರ್‌, ಅಲ್ಲಮಪ್ರಭು ನಿಂಬರ್ಗಾ, ಬಸಯ್ಯ ಗಣಾಚಾರ್ಯ, ಸಿದ್ದು ಅಂಬಲಗಿ, ರಮೇಶ್‌ ಮಾವಿನಕರ್‌ ಮುಂತಾದವರು ಪಾಲ್ಗೊಂಡಿದ್ದರು

No Comments to “ಗುಲ್ಬ-ರ್ಗಾ: ವೇತ-ನ-ಕ್ಕಾಗಿ ಆಗ್ರ-ಹಿಸಿ ಪೌರ- ಕಾ-ರ್ಮಿ-ಕ-ರಿಂದ ರಸ್ತೆ ತಡೆ”

add a comment.

Leave a Reply

You must be logged in to post a comment.