ಗುಲ್ಬರ್ಗಾ: ಜಿ.ಪಂ.ಮೀಸಲಾತಿ, ಹೈಕೋರ್ಟ್ನಿಂದ ಸರ್ಕಾರಕ್ಕೆ ನೋಟಿಸ

ಸುದ್ದಿಮೂಲವಾರ್ತೆ ಗುಲಬರ್ಗಾ.ಡಿ.೮- ಬರುವ ಡಿಸೆಂಬರ್ ೨೬ರಂದು ನಡೆಯಲಿ ರುವ ಜಿಲ್ಲಾ ಪಂಚಾ ಯಿತಿ ಚುನಾವಣೆಯಲ್ಲಿ ನಿಗದಿಪಡಿಸಲಾಗಿರುವ ಮಹಿಳಾ ಮೀಸಲಾತಿಯಲ್ಲಿ ಒಂದು ಸ್ಥಾನ ಹೆಚ್ಚುವರಿಯಾಗಿದ್ದು, ಆ ಕುರಿತಂತೆ ಸರಿಪಡಿಸಲು ಇಲ್ಲಿನ ಸಂಚಾರಿ ಹೈಕೋರ್ಟ್ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಜಿಲ್ಲಾ ಪಂಚಾಯಿತಿಯ ಒಟ್ಟು ೪೩ ಸ್ಥಾನಗಳ ಪೈಕಿ, ೨೩ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದು ಶೇಕಡಾ ೫೦ರ ಮೀಸಲಾತಿ ಮೀರಿದೆ ಎಂದು ನ್ಯಾಯಾಲಯಕ್ಕೆ ಅರ್ಜಿದಾರರೊ ಬ್ಬರು ದೂರು ಸಲ್ಲಿಸಿದ್ದರಿಂದ ಆ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸಂಚಾರಿ ಪೀಠವು ಈ ಕುರಿತಂತೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಆಗಿರುವ ಮಹಿಳಾ ಮೀಸಲಾತಿಯ ಲೋಪ ಸರಿಪಡಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಡಿಸೆಂಬರ್ ೯ರಂದು

No Comments to “ಗುಲ್ಬರ್ಗಾ: ಜಿ.ಪಂ.ಮೀಸಲಾತಿ, ಹೈಕೋರ್ಟ್ನಿಂದ ಸರ್ಕಾರಕ್ಕೆ ನೋಟಿಸ”

add a comment.

Leave a Reply

You must be logged in to post a comment.