ಕೊಪ್ಪಳ ಉಪಚುನಾವಣೆ, ಪ್ರತಿ ಬೂತ್‌ನಲ್ಲೂ ಚಿತ್ರೀಕರಣ ಇಂದು ಮತದಾನ

ರಾಜ್ಯದ ಕುತೂಹಲ ಸೆಳೆದಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ನಾಳೆ ನಡೆಯಲಿರುವ ಮತದಾನಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಬಹಿರಂಗ ಪ್ರಚಾರ ಕಾರ್ಯ ಕೊನೆ ಗೊಂಡಿರುವ ಹಿನ್ನೆಲೆಯಲ್ಲಿ ಇಂದು ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಿ ಮತ ಯಾಚಿಸಿದರು. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಮಧ್ಯೆ ಉಪ ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕಾಗಿ ಸಕಲ ಸಿದಟಛಿತೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಹಣ, ಮದ್ಯ ಸಾಗಣೆ ತಡೆಗೆ ವಿವಿಧೆಡೆ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿ ಕಾರಿ ತುಳಸಿ ಮದ್ದಿನೇನಿ, ಪೊಲೀಸ್‌ ಅಧಿ ಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಅಭ್ಯರ್ಥಿಗಳು ಸೇರಿದಂತೆ ೧೪ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಕೆ. ಬಸವರಾಜ್‌ ಹಿಟ್ನಾಳ್‌, ಬಿಜೆಪಿಯ ಕರಡಿ ಸಂಗಣ್ಣ ಹಾಗೂ ಜೆಡಿಎಸ್‌ನ ಪ್ರದೀಪಗೌಡ ವಿ. ಪಾಟೀಲ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

No Comments to “ಕೊಪ್ಪಳ ಉಪಚುನಾವಣೆ, ಪ್ರತಿ ಬೂತ್‌ನಲ್ಲೂ ಚಿತ್ರೀಕರಣ ಇಂದು ಮತದಾನ”

add a comment.

Leave a Reply