ಸಂಗಣ್ಣ, ಪ್ರದೀಪ, ಹಿಟ್ನಾಳ ಭವಿಷ್ಯ ಇಂದು ಬಹಿರಂಗ

ಕೊಪ್ಪಳ ಸೆ. ೨೮ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾ ವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ಸೆ. ೨೯ ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಈಗಾಗಲೆ ಜಿಲ್ಲಾಡಳಿತ ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಜರುಗಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಉಪಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೆ ಮತದಾನ ಪ್ರಕ್ರಿಯೆ ಪೂರ್ಣ ಗೊಂಡು, ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಭ್ಯರ್ಥಿ ಗಳ ಸೋಲು, ಗೆಲುವಿನ ಲೆಕ್ಕಾಚಾರಗಳಿಗೆ ಸೆ. ೨೯ ರಂದು ಮಧ್ಯಾಹ್ನದ ವೇಳೆಗೆ ತೆರೆ ಬೀಳಲಿದೆ. ಮತ ಎಣಿಕೆ ಕಾರ್ಯಕ್ಕಾಗಿ ಕಾಲೇಜಿನಲ್ಲಿ ಎರಡು ಎಣಿಕಾ ಕೊಠಡಿಗಳನ್ನು ಸಿದಟಛಿಗೊಳಿಸಲಾಗಿದ್ದು, ಪ್ರತಿ ಕೊಠಡಿಗೆ ೭ ಟೇಬಲ್‌ಗಳಂತೆ ಒಟ್ಟು ೧೪ ಟೇಬಲ್‌ಗಳನ್ನು ಸಿದಟಛಿಪಡಿಸಲಾಗಿದೆ. ಈ ಬಾರಿಯ ವಿಶೇಷವೆಂ ದರೆ ರಾಜ್ಯದ ಚುನಾವಣಾ ಇತಿಹಾಸದ ಲ್ಲಿಯೇ ಇದೇ ಪ್ರಥಮ ಬಾರಿಗೆ ಪ್ರತಿ ಟೇಬಲ್‌ನಲ್ಲಿ ನಡೆಯುವ ಮತ ಎಣಿಕೆ ಕಾರ್ಯದ ಮೇಲೆ ನಿಗಾ ಇಡಲು ಪ್ರತಿ ಟೇಬಲ್‌ಗೆ ಒಂದರಂತೆ ಒಟ್ಟು ೧೪ ಕ್ಯಾಮರಾ ಗಳನ್ನು ಅಳವಡಿಸ ಲಾಗಿದೆ.

No Comments to “ಸಂಗಣ್ಣ, ಪ್ರದೀಪ, ಹಿಟ್ನಾಳ ಭವಿಷ್ಯ ಇಂದು ಬಹಿರಂಗ”

add a comment.

Leave a Reply