ಕೊಪ್ಪಳ : ಅರಳಿದ ಕಮಲ

ಕೊಪ್ಪಳ ಸೆ. ೨೯ ಕೊಪ್ಪಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಜಯ ಗಳಿಸುವ ಮೂಲಕ ಬಿಜೆಪಿ ಖಾತೆ ತೆರೆದಿದ್ರೆ. ಬಿ. ಜೆ. ಪಿಯ ಚುನಾಯಿತ ಅಭ್ಯರ್ಥಿ ಸಂಗಣ್ಣ ಕ-ರಡಿ ೬೦,೪೦೫ ಮತಗಳು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಸವರಾಜ ಹಟ್ನಾಳ್‌ ಅವರನ್ನು ೧೨,೪೮೮ ಮತಗಳ ಅಂತರ ದಿಂದ ಪರಾಭವಗೊಳಿಸಿದ್ದಾರೆ. ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್‌ ೪೭,೯೧೭ ಮತಗಳು ಪಡೆಯು-ವ ಮೂಲಕ ಎರಡನೇ ಸ್ಥಾ ನದಲ್ಲಿದ್ದರೆ, ಜೆಡಿಎಸ್‌ನ ಪ್ರದೀಪ್‌ ಗೌಡ ೨೦,೭೧೯ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಮತ ಎಣಿಕೆ ಸಿಬ್ಬಂದಿಗಳಲ್ಲಿ ಅತ್ಯುತ್ಸಾಹ, ಪೊಲೀಸ್‌ ಬಿಗಿ ಬಂದೋಬಸ್ತ್‌, ಸಾರ್ವಜನಿ ಕರು ಹಾಗೂ ಅಭ್ಯರ್ಥಿಗಳಲ್ಲಿ ತೀವ್ರ ಕುತೂ ಹಲ, ವಿಜೇತ ಅಭ್ಯರ್ಥಿಯ ಮುಖದಲ್ಲಿ ಗೆಲುವಿನ ನಗೆ, ಬಿ.ಜೆ.ಪಿ. ಕಾರ್ಯಕರ್ತರಲ್ಲಿ ವಿಜಯೋ ತ್ಸಾಹ ಇವು ಮತ ಎಣಿಕೆ ಕೇಂದ್ರ ವಾದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯ ಆವರಣ ದಲ್ಲಿ ಸೆ. ೨೯ ರಂದು ಕಂಡು ಬಂದ ಪ್ರಮುಖ ದೃಶ್ಯಾವಳಿಗಳು. ಸೆ. ೨೯ ರಂದು ಗುರುವಾರ ಬೆಳಿಗ್ಗೆ ೮ ಗಂಟೆಗೆ ಪ್ರಾರಂಭಗೊಂಡ ಮತ ಎಣಿಕೆ ಕಾರ್ಯ ಮಧ್ಯಾಹ್ನ ೧೨ ಗಂಟೆಗೆ ಪೂರ್ಣ ಗೊಂಡಿತು. ಫಲಿತಾಂಶವನ್ನು ಪ್ರಕಟಿಸಿದ ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣಾಧಿ ಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ್‌ ಅವರಿಗಿಂತ ೧೨೪೮೮ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿದ್ದಾರೆ ಎಂದು ಅಧಿಕೃತವಾಗಿ ಘೊಷಿಸಿದರು.

No Comments to “ಕೊಪ್ಪಳ : ಅರಳಿದ ಕಮಲ”

add a comment.

Leave a Reply