೨೦೦ ಚದುರಡಿಯಲ್ಲಿ ಮನೆ ಕಟ್ಟಲು ಸಾಧ್ಯವೇ?

ಬೀದರ, ಸೆ.೨೯- ರಾಜ್ಯದ ಬಿಜೆಪಿ ಸರ್ಕಾರ ರಾಜೀವ ಗಾಂಧಿ ವಸತಿ ನಿಗಮ ವತಿಯಿಂದ ಬಸವ, ಇಂದಿರಾ ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳು ಬಡ ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದು ಶಾಸಕ ಬಂಡೆಪ್ಪ ಖಾಸಂಪೂರ್‌ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ತಾಲೂಕಿನ ಆಣದೂರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆಣದೂರವಾಡಿ ಗ್ರಾಮದಲ್ಲಿ ಬುಧವಾರ ಗುಡಿಸಲು ಮನೆಯ ೪೪ ಫಲಾನುಭವಿಗಳಿಗೆ ಮನೆಗಳ ಮಂಜೂರಾತಿಯ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಗುಡಿಸಲು ಮನೆ ಇರುವ ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ನೀಡುತ್ತಿರುವ ಧನ ಸಹಾಯ ಅಲ್ಪವಾಗಿದ್ದು, ೬೨,೩೫೦ ರೂ.ಗಳಲ್ಲಿ ೨೦೦ ಚದರ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವೇ? ಎಂದು ಖಾರವಾಗಿ ಪ್ರಶ್ನಿಸಿದರು. ಗುಡಿಸಲು ಮನೆ ಮಂಜೂರಾದ ಫಲಾನುಭವಿ ಗಳಿಗೆ ನಾಲ್ಕು ಕಂತುಗಳಲ್ಲಿ ಹಣ ಬಿಡುಗಡೆಯಾ ಗುತ್ತದೆ. ಬಡವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಮೊದಲು ಹಣವನ್ನು ಆಯಾ ಫಲಾನುಭ-ವಿಗಳ ಖಾತೆಗೆ ಜಮಾ ಮಾಡ ಬೇಕು ಎಂದು ಆಗ್ರಹಿಸಿದರು. ಹಣ ಇಲ್ಲದ ಬಡವರು ಸಾಲ-ಶೂಲ ಮಾಡಿ ದರೆ, ಹಣ ಭರಿಸಲು ಕಷ್ಟವಾಗುತ್ತದೆ. ಕಳೆದ ೪ ವರ್ಷ ಗಳಿಂದ ಯೋಜನೆಯಡಿ ಒಂದೇ ಒಂದು ಮನೆ ನಿರ್ಮಾಣ ಆಗಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಜನರಿಗೆ ಮರಳು ಮಾಡುತ್ತಿದೆ ಎಂದು ಕಿಡಿಕಾರಿದರು. ಗುಡಿಸಲು ಮನೆಯವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಗತ್ಯವೇಕೆ? ಕಡು ಬಡವರಿಗೆ ಮನೆ ಕೊಡುವಾಗ ಇದರ ಅಗತ್ಯವಿ ದೆಯೇ? ರಾಜ್ಯ ಸರ್ಕಾರದ ಈ ತಂತ್ರಗಾರಿಕೆ ನಡೆ ಯುವುದಿಲ್ಲ ಎಂದ ಅವರು, ರಾಜ್ಯ ಬಿಜೆಪಿ ಸರ್ಕಾರ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ಪಿಡಿಓ, ಕಾರ್ಯದರ್ಶಿಗೆ ತರಾಟೆ : ಗುಡಿಸಲು ಮನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ನಿರ್ಲಕ್ಷ್ಯ ತೋರಿದ ಅಣದೂರ ಗ್ರಾ.ಪಂ. ಪಿಡಿಓ ಶಿವಲೀಲಾ ಮತ್ತು ಕಾರ್ಯದರ್ಶಿ ಈರಪ್ಪ ಅವರಿಗೆ ಶಾಸಕ ಬಂಡೆಪ್ಪ ಖಾಸಂಪೂರ ಅವರು ತರಾಟೆಗೆ ತೆಗೆದುಕೊಂಡರು. ಗುಡಿಸಲು ಮನೆಗಳ ಆಯ್ಕೆಯಲ್ಲಿ ಯಾರಿಗೂ ತಾರತಮ್ಯವಾಗದಂತೆ ನೋಡಿಕೊಳ್ಳುವಂತೆ ಸೂಚಿ ಸಿದರು. ಲಂಚ ಪಡೆದ ಬಗ್ಗೆ ಮಾಹಿತಿ ಬಂದರೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಬೇಬಾವತಿ, ಉಪಾಧ್ಯಕ್ಷ ತಿಪ್ಪಣ್ಣ ಉಪಾರ, ಸದಸ್ಯರಾದ ಪ್ರಕಾಶ, ಗುಂಡಪ್ಪ, ಶಿವರಾಜ, ಶಿವಶಂಕರ, ತಾಲೂಕಾ ಪಂಚಾಯತ್‌ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ ಫುಲೇಕರ್‌, ಜೆಇ ರಾಜಶೇಖರ, ದಾಮೋದರ ಪಾಟೀಲ, ರಾಜೀವ ಗಾಂಧಿ ವಸತಿ ನಿಗಮದ ತಾಲೂಕಾ ನೋಡಲ್‌ ಅಧಿಕಾರಿ ಶ್ರೀನಿವಾಸ್‌ ಅವರು ವೇದಿಕೆ ಮೇಲಿ ದ್ದರು. ಪ್ರಾರಂಭದಲ್ಲಿ ಗ್ರಾ.ಪಂ. ಪಿಡಿಓ ಶಿವಲೀಲಾ ಸ್ವಾಗತಿಸಿದರು. ಕಾರ್ಯದರ್ಶಿ ಈರಪ್ಪ ನಿರೂಪಿಸಿದರು.

No Comments to “೨೦೦ ಚದುರಡಿಯಲ್ಲಿ ಮನೆ ಕಟ್ಟಲು ಸಾಧ್ಯವೇ?”

add a comment.

Leave a Reply