ಉಪ್ಪಿ ದರ್ಬಾರ್‌

ಆಪ್ತವ್ತಿಮಿತ್ರ್ರ್ರ, ಆಪ್ತರಕ್ಷಕ ಚಿತ್ರಗಳ ಯಶಸ್ವಿ ಗೆಲುವಿನ ನಂತರ ನಿರ್ದೇಶಕ ಪಿ.ವಾಸು ಹಾಗೂ ನಿರ್ಮಾಪಕ ಕೃಷ್ಣಪ್ರಜ್ವಲ್‌ ಬಹಳ ಗ್ಯಾಪ್‌ನ ನಂತರ ಸಿನಿಮಾ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರವೂ “ಆ”ಕಾರದಿಂದಲೇ ಶುರುವಾಗಿದೆ. ಕಥೆ ಕೇಳಿದ ಮೇಲೆ ಕೃಷ್ಣಪ್ರಜ್ವಲ್‌ ನೀವು ಏನಾದರೂ ಮಾಡಿ ನನಗೆ ಟೈಟಲ್‌ ‘ಆ’ಂದಲೇ ಶುರುವಾಗಬೇಕು ಎಂದು ವಾಸು ಬಳಿ ಪಟ್ಟು ಹಿಡಿದು ಕೂತರಂತೆ. ಹೀಗಾಗಿ ಕೊನೆಗೆ ಚಿತ್ರದ ಶೀರ್ಷಿಕೆ ‘ಆ’ ಎಂದು μಕ್ಸಾಗಿದೆ. ಅಂದಹಾಗೆ ಇಲ್ಲಿ ‘ಆರಕ್ಷಕ’ರಾಗಿರುವುದು ಸೂಪರ್‌ಸ್ಟಾರ್‌ ಉಪ್ಪಿ. ಚಿತ್ರದ ಒನ್‌ಲೈನ್‌ ಕೇಳಿ μದಾ ಆದ ಉಪ್ಪಿ, ಸ್ಕಿೃನ್‌ಪ್ಲೇ ಆದ ನಂತರ ಹತ್ತಾರು ಬಾರಿ ಕಥೆ ಕೇಳಿದ್ದಾರೆ. ಒಮ್ಮೆ ಕೇಳಿದ ಕಥೆ ಮತ್ತೊಮ್ಮೆ ಕೇಳಿದಾಗ ಬೇರೆ ರೀತಿಯ ಆಯಾಮಾ ಕಾಣಿಸಿಕೊಳ್ಳುತ್ತದೆ. ಎಂಬುದು ಉಪ್ಪಿ ಉವಾಚ. ಪೊಲೀಸ್‌ ಆಗಬೇಕೆಂಬ ಹಂಬಲ ಇದ್ದರೂ ಕಾರಣಾಂತರದಿಂದ ಬೇರೇನೋ ಆಗಿ ಕೊನೆಗೆ ಖಾಕಿ ಧರಿಸದೇ ಪೊಲೀಸ್‌ ಕೆಲಸ ಮಾಡುತ್ತಾನೆ ಕಥಾನಾಯಕ. ಈತನಿಗೆ ಜೋಡಿಯಾಗಿ ‘ಮೈಲಾರಿ’ ಸದಾ ಹಾಗೂ ‘ತುಪ್ಪ’ದ ರಾಗಿಣಿ ಇದ್ದಾರೆ. ಈಗಾಗಲೇ ಚಿತ್ರ ಟಾಕಿ ಮುಗಿಸಿ ಹಾಡುಗಳ ಶೂಟಿಂಗ್‌ ಬಾಕಿ ಉಳಿಸಿಕೊಂಡಿದೆ.ಒನ್ಸ್‌ ಅಗೇನ್‌ ಚಿತ್ರಕ್ಕೆ ಗುರುಕಿರಣ್‌ ಬ್ಯಾಂಡು ಬಜಾಯಿಸಿದ್ದಾರೆ. ಶರಣ್‌ ಚಿತ್ರಕ್ಕೆ ಮೈಲೇಜು ನೀಡಲಿದೆ ಎಂಬುದು ಚಿತ್ರ ತಂಡದ ಅಂಬೋಣ. ಕಥೆ,ಚಿತ್ರಕಥೆ,ಸಂಭಾಷಣೆಗೆ ಪಿ.ವಾಸು ಪೆನ್ನು ಹಿಡಿದಿದ್ದಾರೆ. ಸುಮಾರು ಒಂದು ವರ್ಷದಿಂದ ಈ ಕಥೆಯ ಎಳೆ ತಲೆಯಲ್ಲಿ ಓಡಾಡಿಕೊಂಡಿತ್ತಂತೆ. ಅಚಾನಕ್‌ ಆಗಿ ಅವರ ಚೆನೈ ನಿವಾಸಕ್ಕೆ ನಿರ್ಮಾಪಕ ಕೃಷ್ಣಪ್ರಜ್ವಲ್‌ ಭೇಟಿ ನೀಡಿದಾಗ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದಾರೆ. ತಕ್ಷಣವೇ ಕೃಷ್ಣ,ನೀವೇ ಈ ಚಿತ್ರಮಾಡಿಸಾರ್‌… ಎಂದಿದ್ದಾರೆ. ಅದಕ್ಕೆ ವಾಸು ಹೇಳಿದರಂತೆ ಈ ಕಥೆಗೆ ಉಪ್ಪಿ ಬಿಟ್ಟರೆ ಬೇರಾರೂ ಸೂಕ್ತರಲ್ಲ ಎಂದು. ಅನಂತರ ಉಪ್ಪಿ ಕಥೆ ಕೇಳಿ ಒಪ್ಪಿಕೊಂಡು ಸಿನಿಮಾ ಈಗ ಮುಕ್ತಾಯದ ಹಂತ ತಲುಪಿದೆ. ಚಿತ್ರದಲ್ಲಿ ಡೈಲಾಗ್‌ಗಳು ಉಪ್ಪಿ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಡೌಟೇ ಇಲ್ಲ ಎಂಬ ಕಾನ್ಫಡೆಂಟ್‌ನಲ್ಲಿದ್ದಾರೆ ನಿರ್ದೇಶಕ ವಾಸು. ಏಕಂದರೆ ಉಪ್ಪಿ ಅಭಿನಯದ/ನಿರ್ದೇಶನದ ಎ,ಉಪೇಂದ್ರ,ಸೂಪರ್‌, ಚಿತ್ರಗಳನ್ನೆಲ್ಲಾ ಒಮ್ಮೆ ನೋಡಿದ್ದಾರೆ. ವಿಶೇಷವಾಗಿ ಅವರಿಗೆ ‘ರಕ್ತ ಕಣ್ಣೀರು’ ಇಷ್ಟವಾಯಿತಂತೆ. ಎಲ್ಲಾ ಚಿತ್ರಗಳಲ್ಲೂ ಉಪ್ಪಿ ಮಿಂಚಿದ್ದು ಡೈಲಾಗ್‌ಗಳ ಮೂಲಕ. ಹೀಗಾಗಿ ಇಲ್ಲಿಯೂ ಡೈಲಾಗ್‌ ದೀಪಾವಳಿಯೇ ಆಗಲಿದೆ ಎನ್ನುತ್ತಾರೆ ವಾಸು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯಕ್ಕೆ ಹಾಡಿನ ಚಿತ್ರೀಕರಣದಲ್ಲಿ ನಿರತವಾಗಿದೆ. ಬೆಂಗಳೂರಿನ ಮಹಾಲಕ್ಷಿಲೇಔಟ್‌ ಬಳಿಯ ಆಟದ ಮೈದಾನವೊಂದರಲ್ಲಿ ‘ಥೂ ನನ್ಮಕ್ಳ ಗಂಡಸ್ರ ನೀವು…? ಎಂಬ ಹಾಡಿಗೆ ಉಪ್ಪಿ ಹಾಗೂ ಸಮೂಹ ಕಲಾವಿದರು ಸ್ಟೆಪ್‌ ಹಾಕುತ್ತಿದ್ದರು. ಮತ್ತೊಂದು ವಿಶೇಷವೆಂದರೆ ಅಲ್ಲಿ ಅಣ್ಣಾ ಹಜಾರೆಯ ಬೃಹತ್‌ ಕಟೌಟ್‌ಗಳು ರಾರಾಜಿಸುತ್ತಿದ್ದುವು. ‘ಅಣ್ಣಾಗಿರಿ’ ಎದುರು ‘ಉಪ್ಪಿಗಿರಿ’ ನಿರಂತರವಾಗಿ ಸಾಗಿತ್ತು…

No Comments to “ಉಪ್ಪಿ ದರ್ಬಾರ್‌”

add a comment.

Leave a Reply

You must be logged in to post a comment.