ದೇಶ ಕಟ್ಟಲು ಗಾಂಧಿ ತತ್ವ ಪ್ರೇರಣೆ – ತುಳಸಿ

ಕೊಪ್ಪಳ ಅ. ೦೨ ಒಬ್ಬ ಸಾಮಾನ್ಯ ಪ್ರಜೆಯೂ ಕೂಡ ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲನು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಮಹಾನ್‌ ವ್ಯಕ್ತಿ ಮಹಾತ್ಮಾ ಗಾಂಧೀಜಿ ಎಂದು ಜಿಲ್ಲಾಧಿ ಕಾರಿ ತುಳಸಿ ಮದ್ದಿನೇನಿ ಅವರು ಬಣ್ಣಿಸಿದರು. ಮಹಾತ್ಮಾ ಗಾಂಧೀಜಿಯವರ ೧೪೨ ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿ ಯಂನಲ್ಲಿ ಭಾನುವಾರ ಏರ್ಪಡಿಸ ಲಾಗಿದ್ದ ಸಮಾರಂಭದಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು. ದಾಸ್ಯ, ಅವಹೇಳನ, ಅಪಮಾನ, ದಬ್ಬಾಳಿಕೆಯನ್ನು ಸಹಿಸಿ ನಲುಗುತ್ತಿದ್ದ ಭಾರತೀಯರನ್ನು ಜಡ ನಿದ್ರೆಯಿಂದ ಎಬ್ಬಿಸಿ, ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿ, ಅಹಿಂಸಾ ಮಾರ್ಗ ವಾಗಿ ಸತ್ಯಾಗ್ರಹವೆಂಬ ಅಸ್ತ್ರ ಪ್ರಯೋ ಗಿಸಿ ಭಾರತ ಮಾತೆಯನ್ನು ಗುಲಾಮ ಗಿರಿಯಿಂದ ಬಿಡಿಸಿ, ಭಾರತೀಯರಿಗೆ ಆತ್ಮಗೌರವ ತಂದು ಕೊಟ್ಟ ಮಹಾನ್‌ ವ್ಯಕ್ತಿ ಮಹಾತ್ಮ ಗಾಂಧೀಜಿಯವರು. ಕೇವಲ ಸತ್ಯ ಮತ್ತು ಅಹಿಂಸೆಗಳೆಂಬ ಎರಡು ಆತ್ಮಬಲಗಳಿಂದ ಬ್ರಿಟೀಷರನ್ನು ಮಣಿಸಿ ಜಗತ್ತಿಗೆ ಅಚ್ಚರಿ ಮೂಡಿಸಿ ದರು. ಪ್ರಸಕ್ತ ಜಗತ್ತಿನಾದ್ಯಂತ ಕಂಡು ಬರುತ್ತಿರುವ ಹಿಂಸಾ ಚಟುವಟಿಕೆ ಯನ್ನು ತಹಬಂದಿಗೆ ತರುವ ದಿಸೆ ಯ ಲ್ಲಿ ಗಾಂಧಿ ಮಾರ್ಗ ಅತ್ಯಂತ ಸೂಕ್ತ ವಾಗಿದೆ. ಮಹಾತ್ಮಾ ಗಾಂಧೀಜಿಯ ವರು ದೊರಕಿಸಿಕೊಟ್ಟ ಸ್ವಾತಂತ್ರ್ಯ ಭಾರತದಲ್ಲಿ ನಾಗರಿಕ ಸೇವೆ ಸಲ್ಲಿಸು ತ್ತಿರುವ ನಾವು, ಅವರ ತತ್ವ ಆದರ್ಶ ಗಳನ್ನು ಮೈಗೂಡಿಸಿಕೊಂಡು, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಇದೇ ಮಹಾತ್ಮಾ ಗಾಂಧಿ ಜಿಯವರಿಗೆ ಗೌರವ ಸಲ್ಲಿಸುವುದಕ್ಕೆ ಏಕೈಕ ಮಾರ್ಗವಾಗಿದೆ ಎಂದು ಜಿಲ್ಲಾಧಿ ಕಾರಿ ತುಳಸಿ ಮದ್ದಿನೇನಿ ಅವರು ಕರೆ ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಟೇಲಿಂಗಾಚಾರಿ ಅವರು ಮಾತನಾಡಿ, ಪ್ರಪಂಚದ ಅನೇಕ ದೇಶಗಳು ಸಾರ್ವಭೌಮತ್ವ ವನ್ನು ನಾನಾ ಬಗೆಯ ಕ್ರಾಂತಿ, ಹಿಂಸೆ ಮೂಲಕ ಪಡೆದಿವೆ.

No Comments to “ದೇಶ ಕಟ್ಟಲು ಗಾಂಧಿ ತತ್ವ ಪ್ರೇರಣೆ – ತುಳಸಿ”

add a comment.

Leave a Reply