೪ ಗುಂಪುಗಳ ರಚನೆ,ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಲು ನಿರ್ಣಯ

ಗಂಗಾವತಿ ಅ.೨ ನವ್ಹೆಂಬರ್‌ನಲ್ಲಿ ಜರುಗಲಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ಯ ಶನಿವಾರ ನಗರದ ಎಪಿಎಂಸಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಛೆರಿಯಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಕವಿತಾ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಬಾವಿ ಸಭೆಯಲ್ಲಿ ನಿರ್ಣಯಿಸಲಾಯಿತು. ನಗರದ ಅಲಂಕಾರಕ್ಕೆ, ರಂಗೋಲಿ ಹಾಕಲು, ಸ್ತಬಟಛಿ ಚಿತ್ರ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ ಸಭೆ ತಂಡಗಳನ್ನು ನಿರ್ವಹಿಸಲು ಮಹಿಳಾ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಮತ್ತೆ ಇತರ ನಾಲ್ಕು ಉಪ ತಂಡಗಳನ್ನು ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಈ ಮೊದಲು ಕುಂಭ ಮತ್ತು ಕಳಶ ಮೆರವಣಿಗೆಯ ಸಂದರ್ಭದಲ್ಲಿ ಕೊಡ, ತೆಂಗಿನಕಾಯಿ ರವಿಕೆ ಮೊದಲಾದವನ್ನು ಕೊಡಿಸುವುದಾಗಿ ಕಾಂಗ್ರೆಸ್‌ ನಾಯಕಿ ಶೈಲಜಾ ರಮೇಶ ಒಪ್ಪಿಕೊಂಡಿದ್ದರು. ಆದರೆ ಚನ್ನ ಮಲ್ಲಿಕಾರ್ಜುನ ಮಠದಲ್ಲಿ ಕುಂಭ ಮತ್ತು ಕಶಳದ ವ್ಯವಸ್ಥೆಯನ್ನು ಒಪ್ಪಿಸಿದ್ದರಿಂದ ಕುಂಭ ಹೊರುವ ಮಹಿಳೆಯರಿಗೆ ಸೀರೆ ಮತ್ತು ರವಿಕೆ ಕೊಡಿಸುವಂತೆ ಇದೇ ಸಂದರ್ಭದಲ್ಲಿ ಮನವೊಲಿಸಲಾಯಿತು. ಇತರ ನಾಲ್ಕು ಉಪ ತಂಡಗಳು ಮೇಲಿಂದ ಮೇಲೆ ಸಭೆ ನಡೆಸಿ ಆದಷ್ಟು ತ್ವರಿತವಾಗಿ ಪ್ರಗತಿ ವರದಿ ಯನ್ನು ನೀಡುವಂತೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್‌ ಮನವಿ ಮಾಡಿ ದರು. ವೇದಿಕೆಯಲ್ಲಿ ಬಸವರಾಜ ಕೋಟೆ, ಎಸ್‌.ಬಿ. ಗೊಂಡಬಾಳ, ಡಿ.ಜಿ. ಮಠದ್‌, ಕಾರಟಗಿಯ ವಿಜಯಲಕ್ಷ್ಮಿ ಮೇಲಿನಮನಿ ಮೊದಲಾದವರಿದ್ದರು. ಮಹಿಳಾ ಪ್ರಮುಖರಾದ ಮಹಾಂತ ರಾಜಶೇಖರ ಪಾಟೀಲ್‌, ರುದ್ರಮ್ಮ ಹಾಸಿನಾಳ, ಶೈಲಜಾ ಎಚ್‌.ಎಂ. ಗೀತಾವಿಕ್ರಂ, ವೀಣಾ ಮುದ್ಗಲ್‌, ಸಿ. ಮಹಾಲಕ್ಷ್ಮಿ, ಅನ್ನಪೂರ್ಣ ಸಿಂಗ್‌ ಮೊದಲಾದವರಿದ್ದರು.

No Comments to “೪ ಗುಂಪುಗಳ ರಚನೆ,ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಲು ನಿರ್ಣಯ”

add a comment.

Leave a Reply

You must be logged in to post a comment.