ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ಜನಾಂದೋಲನ ನಡೆಸಲು ಸಲಹೆ

ಗುಲಬರ್ಗಾ ಅ.೩ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸಾ ಮತ್ತು ಶಾಂತಿ ಮಾರ್ಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಗಟ್ಟಲು ಹಾಗೂ ಎಲ್ಲರೂ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬದುಕುವ ಹಕ್ಕು ಪಡೆಯಲು ಜನರು ಬೃಹತ್‌ ಜನಾಂದೋಲನ ನಡೆಸಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಾಡೋಜ ಡಾ. ನ್ಯಾಯಮೂರ್ತಿ ಎಸ್‌.ಆರ್‌. ನಾಯಕ್‌ ಅವರು ಹೇಳಿದರು. ಅವರು ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಪ್ರಾಯೋಜಕತ್ವದೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಮಾನವ ಹಕ್ಕುಗಳ ಕಾನೂನು ತಿಳುವಳಿಕೆ ಕುರಿತು ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಸಂಸ್ಥೆಯ ೧೯೪೮ರ ಡಿಸೆಂಬರ್‌ ೧೦ರ ಮಾನವ ಹಕ್ಕುಗಳ ಸಾರ್ವತ್ರಿಕ ಘೊಷಣೆಯು ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಇಡೀ ಮನುಕುಲದ ಸ್ವಸ್ಥ ಜೀವನಕ್ಕೆ ಬೇಕಾದ ಜಾಗತಿಕ ಕನಿಷ್ಟ ಗುಣಮಟ್ಟವನ್ನು ನಿಗದಿಪಡಿಸುತ್ತದೆ. ಮಾನವ ಹಕ್ಕುಗಳಿಗೆ ವಿಸ್ಕೃತವಾದ ವಿಶ್ವವ್ಯಾಪ್ತಿ ಗುಣವಿಶೇಷವಿದೆ. ವ್ಯಕ್ತಿಗಳನ್ನು ತುಳಿತ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳಿಂದ ರಕ್ಷಿಸುವ ಪ್ರಯತ್ನವೇ ಮಾನವ ಹಕ್ಕುಗಳ ಪರಿಕಲ್ಪನೆಯಾಗಿದೆ. ಮಾನವ ಹಕ್ಕುಗಳು ಪ್ರಜಾಪ್ರಭುತ್ವದ ಅಮೂಲ್ಯ ಭಾಗವಾಗಿವೆ. ಇಂದು ಎಲ್ಲೆಡೆ ಜನತೆಯ ಅದರಲ್ಲೂ ವಿಶೇಷವಾಗಿ ದುರ್ಬಲರ, ಕಡುಬಡವರ, ಮಕ್ಕಳ, ಮಹಿಳೆಯರ ಮಾನವ ಹಕ್ಕುಗಳ ಮಿತಿಮೀರಿದ ಉಲ್ಲಂಘನೆಯಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಎಲ್ಲ ರಾಷ್ಟ್ರ ಮತ್ತು ರಾಜ್ಯಗಳ ಆದ್ಯ ಕರ್ತವ್ಯವಾಗಿದೆ. ಮಾನವೀಯತೆಯೇ ನ್ಯಾಯದ ಆತ್ಮ. ಮಾನವ ಹಕ್ಕುಳಿಗಿಂತ ಅಧಿಕ ಪವಿತ್ರ ವಸ್ತು ಇನ್ನೊಂದಿಲ್ಲ. ಅವುಗಳೇ ಮಾನವನ ಸಾರಸತ್ವ. ಮನುಷ್ಯನನ್ನು ಮನುಷ್ಯನನ್ನಾಗಿಸುವ ದಿವ್ಯ ತತ್ವ. ಭೂಮಿಯ ಮೇಲಿರುವ ಎಲ್ಲ ಮಾನವರಿಗೂ ಎಲ್ಲ ಕಾಲದಲ್ಲೂ ಘನತೆ ಗೌರವದಿಂದ ಬಾಳುವ ಹಕ್ಕಿದೆ ಎಂಬುದನ್ನು ರಾಜ್ಯ ಸರ್ಕಾರ ಮನಗಂಡು ಅವರಿಗೆ ಶುದಟಛಿ ಕುಡಿಯುವ ನೀರು, ಗಾಳಿ, ಪರಿಸರ, ಉತ್ತಮ ಶಿಕ್ಷಣ, ಆರೋಗ್ಯ ಮುಂತಾದ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅವರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ನೆರವಾಗಬೇಕು. ಸಮಾನತೆ ಮತ್ತು ನ್ಯಾಯ ಎಲ್ಲ ಮಾನವ ಹಕ್ಕುಗಳ ತಿರುಳು. ನಿರ್ಭಯದ ಬಾಳು, ಗುಲಾಮಗಿರಿಯಿಂದ ಮುಕ್ತಿ, ವಾಸಕ್ಕೆ ಮನೆ ಮುಂತಾದವು ಮಾನವನ ಮೂಲಭೂತ ಅಗತ್ಯ ಮತ್ತು ಮೌಲ್ಯಗಳು ಮಾನವ ಹಕ್ಕುಗಳ ಸಾರ್ವತ್ರಿಕ ವಿಚಾರಗಳ ಭದ್ರ ಬುನಾದಿಯಾಗಿವೆ ಎಂದರು. ಇದೇ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರು ಆರೋಗ್ಯದ ಹಕ್ಕು ಮತ್ತು ವೈದ್ಯಕೀಯ ವೃತ್ತಿಪರರ ಪಾತ್ರ ವಿಷಯ ಕುರಿತು ಮಾತನಾಡಿ ಮಾನವ ಹಕ್ಕುಗಳಲ್ಲೇ ಅತ್ಯಂತ ಮಹತ್ವ ಪೂರ್ಣವಾದುದು ಜೀವಿಸುವ ಹಕ್ಕು. ಅದರಂತೇ ಆರೋಗ್ಯದ ಹಕ್ಕು ಮೂಲಭೂತ ಮಾನವ ಹಕ್ಕಾಗಿದೆಯಲ್ಲದೆ ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಹಕ್ಕು ಎನಿಸಿದೆ. ಪ್ರತಿಯೊಬ್ಬರೂ ಆರೋಗ್ಯದಿಂದ ಮತ್ತು ಗುಣಮಟ್ಟದಿಂದ ಬದುಕುವ ಹಕ್ಕು ಹೊಂದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಮತ್ತು ಅವನ ಕುಟುಂಬದವರು ಆಹಾರ, ಬಟ್ಟೆ, ವಸತಿ, ವೈದ್ಯಕೀಯ ಚಿಕಿತ್ಸೆ, ಸಾಮಾಜಿಕ ಸೇವೆಗಳ ಅಗತ್ಯತೆಯ ಹಕ್ಕು ಹಾಗೂ ನಿರುದ್ಯೋಗ, ಅನಾರೋಗ್ಯ, ಅಂಗವಿಕಲತೆ, ವೈಧವ್ಯ, ವೃದಾಟಛಿಪ್ಯ ಮತ್ತಿತರ ಜೀವನೋಪಾಯದ ತೊಂದರೆಗಳಲ್ಲಿ ಸಾಮಾಜಿಕ ಭದ್ರತೆ ಪಡೆಯುವ ಹಕ್ಕನ್ನು ಹೊಂದಿರುತ್ತಾನೆ. ಮಾನವಾಭಿವೃದಿಟಛಿ ಮತ್ತು ವೈಯಕ್ತಿಕ ಸಾಮಾಜಿಕ ಸಬಲೀಕರಣದೊಂದಿಗೆ ಆರೋಗ್ಯ ನಿಕಟವಾದ ಸಂಪರ್ಕ ಹೊಂದಿದ್ದು, ಸಾರ್ವತ್ರಿಕವಾಗಿ ಆರೋಗ್ಯವು ಮಾನವನ ಮೂಲಭೂತ ಅವಶ್ಯಕತೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕರ ಜನ ಸಮುದಾಯದಿಂದ ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದಿಟಛಿ ಸಾಧ್ಯವಿದೆ. ಆರೋಗ್ಯಕರ ಜೀವನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಂಶಗಳ ಮೇಲೆ ಅವಲಂಬಿಸಿದ್ದು, ಪ್ರತಿಯೊಂದು ರಾಜ್ಯ ಇವುಗಳನ್ನು ಪೂರೈಸುವ ಬದಟಛಿತೆ ನೀಡಬೇಕು ಎಂದರು. ರಾಜ್ಯದ ಸಮಗ್ರ ಜನತೆಯ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸು ಸೌಲಭ್ಯ ಒದಗಿಸಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಲು ಅನುವಾಗುವಂತೆ ಅಗತ್ಯ ತಜ್ಞ ವೈದ್ಯರ, ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಬೇಕು. ರಾಜ್ಯದ ಎಲ್ಲ ಸರ್ಕಾರಿ ಆಸ್ಪತೆಗಳು ಭ್ರಷ್ಟಾಚಾರದ ನೆಲೆ ಬೀಡಾಗಿವೆ. ಇಲ್ಲಿಗೆ ಬರುವ ರೋಗಿಗಳನ್ನು ಮಾನವೀಯತೆಯಿಂದ ಕಾಣಲಾಗುತ್ತಿಲ್ಲ. ಅನೇಕ ರೋಗದಿಂದ ಬಳಲಿ ಬೆಂಡಾಗಿ ಬಂದಿರುವ ರೋಗಿಗಳನ್ನು ಮಾನವೀ ಯತೆಯಿಂದ ಚಿಕಿತ್ಸೆ ನೀಡುವ ವಾತಾವರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಸೃಷ್ಟಿಯಾಗಬೇಕು. ಸಂರಕ್ಷಣೆ, ಚಿಕಿತ್ಸೆ ಮತ್ತು ಪುನರ್ವಸತಿ, ಬಾಣಂತಿ ಮತ್ತು ಮಕ್ಕಳ ರಕ್ಷಣೆ, ಕುಟುಂಬ ಯೋಜನೆ ಸಲಹೆ ಮತ್ತು ಸೇವೆಗಳು, ಸಾಂಕ್ರಾಮಿಕ ರೋಗಗಳು, ಮಾನಸಿಕ ಆರೋಗ್ಯ, ಆರೋಗ್ಯ ಶಿಕ್ಷಣ ಮತ್ತು ಪೌಷ್ಟಿಕ ಆಹಾರದಂತಹ ಸಾಮಾನ್ಯ ವೈದ್ಯಕೀಯ ಸೇವೆಗಳು ಒದಗಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ವೃತ್ತಿಪರರ ಪಾತ್ರ ಅತೀ ಮಹತ್ವದ್ದಾಗಿದೆ. ವೃತ್ತಿಪರರು ಮಾನವತೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ನುಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ. ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಿ ನಮ್ಮ ಪರಿಸರವನ್ನು ನಾವೇ ಸಂರಕ್ಷಿಸಿಕೊಳ್ಳುವ ಬದಟಛಿತೆ ನಮ್ಮಲ್ಲಿ ಬರಬೇಕು. ಇಂದಿನ ಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಇದು ನೆರವಾಗುವುದು ಎಂದರು. ಕಾನೂನು ವಿಭಾಗದ ಡೀನ್‌ ಪ್ರೊ. ಎಸ್‌.ಎಸ್‌. ಪಾಟೀಲ್‌ ಸ್ವಾಗತಿಸಿದರು. ಕಾನೂನು ವಿಭಾಗದ ಅಧ್ಯಕ್ಷ ಡಾ. ದೇವಿದಾಸ ಜಿ. ಮಾಲೆ ವಂದಿಸಿದರು. ನಂತರ ವಿವಿಧ ವಿಷಯಗಳ ತಾಂತ್ರಿಕ ಗೋಷ್ಠಿಗಳು ಜರುಗಿದವು.

One Comment to “ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ಜನಾಂದೋಲನ ನಡೆಸಲು ಸಲಹೆ”

  1. renuka N says:

    ಸ್ವಾಮಿ ಮಾನವ ಹಕ್ಕು ನಮ್ಮ ಜನರಿಗೆ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಕೆಲವು ಹಕ್ಕು .ಒಳ್ಳೆ ಜನರು ಒಳ್ಳೆ ರೀತಿ ಉಪಯೋಗಿಸಿಕೊಳ್ಳುತಾರೆ ಇನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತಾರೆ . ಮನೆಗೆ ಬರುವ ಸೊಸೆ ಮಹಾಲಕ್ಷ್ಮಿ ಎನ್ನುತಾರೆ . ಹದೆ ಮಹಾಲಕ್ಷ್ಮಿ, ಲಕ್ಷ್ಮಿ ಬಂದರೆ ಸಾಕು , ಗಂಡ ಬೇಡ , ಗಂಡನ ಅಪ್ಪ ಅಮ್ಮ ಬೇಡ, ಬಾವ ಮೈದುನ ಬೇಡ , ಅತ್ತಿಗೆ ನಾದಿನಿ ಬೇಡ ಹಣ ಮಾತ್ರ ಸಾಕು ಎನ್ನುವ ಕಾಲ ಬಂದಿದೆ . ನಮ್ಮ ಕಾನೂನು ಕೂಡ ಹಿದಕ್ಕೆ ಯಾವುದೇ ಒತ್ತಡ ತಂದಿಲ್ಲ . ಅಪ್ಪ ಅಮ್ಮ ಮಗನ ಮದುವೆಗೆ ಮುಂಚೆ ತಮಗೆ ವಯಸ್ಸಾಗುತ್ತದೆ ಮನಗೆ ಮೊದಲ ಮಗ ಅವನ ಹೆಸರಿಗೆ ಆಸ್ತಿ ಮಾಡಿದರೆ ಮುಂದೆ ತಮ್ಮ ತಂಗಿಯರನ್ನು ಚನ್ನಾಗಿ ನೋಡಿಕೊಳ್ಳುತಾರೆ ಎಂದು ಆಸ್ತಿ ಬರಿತಾರೆ . ಆದರೆ (ಅಣ್ಣ ನನ್ನವನಾದರೆ ಅತ್ತಿಗೆ ನನ್ನವಳ ಎನ್ನುವ ಗಾದೆ ಸುಳ್ಳಾಗಲ್ಲ. )ಅಣ್ಣ ಜೀವಂತವಾಗಿರುವಾಗ ಎಲ್ಲವೂ ಚನ್ನಾಗಿರುತದೆ . ಆದರೆ ಅಣ್ಣ ಬದುಕಿಲ್ಲ ಎಂದಾಗ ಅಪ್ಪ ಅಮ್ಮನ ಆಸ್ತಿ ಅಣ್ಣನ ಬದಲಿಗೆ ಅತ್ತಿಗೆಗೆ ಸೇರುತದೆ ನಂತರ ಅತ್ತಿಗೆ ತನ್ನ ನಿಜ ರೂಪ ತೊರುತಾಳೇ . ಸ್ವಲ್ಪದಿನ ಕಷ್ಟದಲ್ಲಿ ಗಂಡನ ಮನೆಯಲ್ಲಿ ವಾಸಮಾಡಿ ನಂತರ ನಾನು ನನ್ನ ತವರು ಮನೆಯಲ್ಲಿ ಸ್ವಲ್ಪ ದಿನ ಇದ್ದು ಬರುತ್ತನೆ ಎಂದು ಮಕ್ಕಳನ್ನು ಜೊತೆ ಕರೆದೊಯ್ದು ನಂಥರ ಒಳ್ಳಗೊಳಗೆ ಆಸ್ತಿ ತನ್ನ ಹೆಸರಿಗೆ ಮಾಡಿಕೊಂಡು ನಂಥರ ಗಂಡನ ಮನೆಯವರಿಗೆ ಇದು ನನ್ನ ಗಂಡನ ಆಸ್ತಿ ನನ್ನ ಗಂಡ ಸಂಪಾದನೆ ಮಾಡಿದ ಆಸ್ತಿ ನಿಮಗೇನೂ ಅಧಿಕಾರ ಇಲ್ಲಾ ಎಂದು ದಬ್ಬಾಳಿಕೆ ಮಾಡುತಾರೆ . ಅಪ್ಪ ಅಮ್ಮ ಅಣ್ಣ ತಮ್ಮಂದಿರು , ಒಂದು ಕಡೆ ಮಗನು ಇಲ್ಲ ಇನ್ನೊದು ಕಡೆ ಅಸ್ತಿನು ಇಲ್ಲ ಮತ್ಹೊಂದುಕಡೆ ಮಗನ ನೆನಪನ್ನು ಮರೆಸುವ ಮೊಮ್ಮಕ್ಕಳು ಇಲ್ಲ .ಇತ್ತ ಸೊಸೆ ಅನ್ನುವಳು ಗಂಡನ ಮನೆಯವರು ಗಂಜಿಗು ಪರದಾದುತಿದರು ಸೋಸೆಯದವಳು ತಾನೆ ಸಂಪಾದನೆ ಮಾಡಿದ ಅಸ್ತಿ ಎನ್ನುವಂತೆ ತನ್ನ ತವರು ಮನೆಯವರನ್ನು ಅಡಮ್ಬರದಲ್ಲಿ ಮೇರೆಸುಥಾಳೆ, ಕೂಲಿ ಮಾಡಿದರೆ ಒಟ್ಟೆಗೆ ಬಟ್ಟೆಗೆ ಸಾಕು ಎಂದು ಜೀವನ ಸಾಗಿಸುತ್ತಿದ್ದ ತವರು ಮನೆಯವರು ಬರಿಗಯಿಯಲ್ಲಿ ಗಂಡನ ಮನೆಗೆ ಹೋಗಿದ್ದ ಮಗಳು ಅಸ್ತಿ ಯೊಡನೆ ತವರು ಮನೆಗೆ ಇನ್ತಿರುಗಿದಾಗ ಮಗಳಿಗೆ ನಿನ್ನ ಮನೆ ನಿನ್ನ ಕುಟುಂಬ ನಿನ್ನ ಗಂಡನ ಮನೆಯಲ್ಲಿ ಇದೆ ನೀನು ಅಲ್ಲಿ ಜೀವನ ಮಾಡಬೇಕು ಎಂದು ತಿಳಿ ಹೇಳುವುದಿಲ್ಲ ಅದರ ಬದಲು ಮಗಳೇ ನೀನು ನನ್ನ ಮನೆಗೆ ಮತ್ತೆ ಬಂದಿರುವುದು ನಮಗೆ ತುಂಬ ಸಂತೋಷ ಎಂದು ಅವಳಿಗೆ ಮತ್ತಷ್ಟು ತಪ್ಪುಗಳಿಗೆ ಪ್ರೋತ್ಸಾಹ ಕೊಡುತಾರೆ . ನಮ್ಮ ಕಾನೂನು ನಾಣ್ಯದ ಒಂದು ಮುಖ ನೋಡಿ ತೀರ್ಮಾನ ಹೇಳುತದೆ ಇನ್ನೊಂದು ಮುಖ ನೋಡುವುದಿಲ್ಲ ಕಾನೂನಿಗೆ ಬೇಕಾಗಿರುವುದು ಸಾಕ್ಷಿ ಅದಾರ ಗಂಡನ ಅಸ್ತಿ ಹೆಂಡತಿ ಹೆಸರಲ್ಲಿ ನೋದಣಿಯಾಗಿದೆ ಅಸ್ಟೇ ಸಾಕು ಕಾನೂನಿನ ಪ್ರಕಾರ ಆಕೆ ಹಕ್ಕು ದರಾಳು . ( ಸತ್ಯ ಮಲಗಿಕೊಂತು ಸುಳ್ಳು ಸುಖ ಅನುಬವಿಸಿತು )ಆದರೆ ಇಂತ ಸೋಸೆಯನ್ದಿರಿಂದ ನೊಂದ ಎಸ್ಟೋ ಕುಟುಂಬಗಳು ಬೀದಿಪಾಲಾಗಿದೆ ಎನ್ನುವುದು ಕಾನುನಿಗು ಗೊತ್ಹಿದ್ದು ಏನು ಮಾಡಲಾಗಲಿಲ್ಲ . ಅಂತ ಕುಟುಂಬಗಳಿಗೆ ಮುಂದೆನಾದರು ನ್ಯಾಯಾ ದೊರಕುವುದಾ ? ಕೊನೆ ಎಂದು

Leave a Reply

You must be logged in to post a comment.