ಮುಂದುವರೆದ ಸಿಬಿಐ ಬೇಟೆ

ಬಳ್ಳಾರಿ ಅ .೪ ಬಳ್ಳಾರಿಯಲ್ಲಿ ಸಿಬಿಐ ಅಧಿಕಾರಿಗಳ ಬೂಟಿನ ಸದ್ದು ಇನ್ನೂ ಅಡಗಿಲ್ಲ. ಸೋಮವಾರ ದಾಳಿ ನಡೆಸಿ ಏನೂ ಸಿಗದೆ ನಿರಾಶರಾಗಿದ್ದ ಅಧಿಕಾರಿಗಳು ದಸರಾ ರಜೆಕ್ಕೆ ತೆರಳಲಿದೆ ಎಂದು ಜನರು ಮಾತನಾಡಲು ಪ್ರಾರಂಭ ಮಾಡು ತ್ತಿದ್ದಂತೆಯೇ ಮಂಗಳವಾರ ಬೆಳಗ್ಗೆ ದಾಳಿ ಮುಂದುವರೆಸಿದೆ. ಬಳ್ಳಾರಿ ಜಿಲ್ಲೆಯ ಅತ್ಯಂತ ವಿವಾದಿತ ಗಣಿಗಳಲ್ಲಿ ಒಂದಾಗಿರುವ ಹೊಸಪೇಟೆಯ ವ್ಯಾಸನಕೇರಿ ವ್ಯಾಪ್ತಿಯ ವಿ. ನಾಗಪ್ಪ ಮೈನ್ಸ್‌ನ ಕಂಪನಿ ಮತ್ತು ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ದ್ದಾರೆ. ಕಪ್ಪಗಲ್‌ ರಸ್ತೆಯಲ್ಲಿರುವ ವಿ.ನಾಗಪ್ಪ ಮೈನ್ಸ್‌ನ ಗುತ್ತಿಗೆ ದಾರರಾದ ಶಾಂತಲಕ್ಷ್ಮಿ ವಿ. ಜಯರಾಂ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಶಾಂತಲಕ್ಷ್ಮಿ ಅವರ ಪತಿ ವಿ. ಜಯರಾಂ ಅವರ ಗಣಿ ವಿವಾದ ತೀವ್ರಗೊಂಡಾಗ ಹೃದಯಾ ಘಾತಕ್ಕೆ ಒಳಗಾಗಿ ಮೃತ ಪಟ್ಟಿದ್ದರು. ವಿ. ಜಯರಾಂ ಅವರ ತಂದೆ ವಡ್ಡೆ ನಾಗಪ್ಪ ಅಲಿಯಾಸ್‌ ವಿ. ನಾಗಪ್ಪ ಅನಕ್ಷರಸ್ಥರಾಗಿದ್ದರೂ ಎರಡು ಬಾರಿ ಬಳ್ಳಾರಿ ನಗರದ ಶಾಸಕ ರಾಗಿ, ಕೂಡ್ಲಿಗಿಯಿಂದ ಒಮ್ಮೆ ಶಾಸಕ ರಾಗಿ ಆಯ್ಕೆ ಆಗಿದ್ದರು. ಇವರು ಸ್ವತಂತ್ರಪಕ್ಷ ಮತ್ತು ಕಾಂಗ್ರೆಸ್‌ (ಓ) ಪಕ್ಷವನ್ನು ಪ್ರತಿನಿಧಿಸುತ್ತಿದ್ದರು. ಬಳ್ಳಾರಿ ನಗರ ಹೊರವ ಲಯದಲ್ಲಿರುವ ಇಂಟಿಗ್ರೇ ಟೆಡ್‌ ಲಾಜಿಸ್ಟಿಕ್‌ನ ಸೋಮಶೇಖರ್‌ ಹಾಗೂ ಅವರ ಆಪ್ತ ಸಹಾಯಕಿ ಪದ್ಮಾವತಿ ಮನೆ ಮತ್ತು ಕಚೇರಿಗಳ ಮೇಲೆ ಅಪರಾಧ ವಿಭಾಗದಭ್ರಷ್ಟಾಚರ ನಿಯಂತ್ರಣ ಅಧಿಕಾರಿಗಳು ದಾಳಿ ಮಾಡಿ ಲೆಕ್ಕಪತ್ರ ಪರಿಶೀಲಿ ಸಿದರು.

No Comments to “ಮುಂದುವರೆದ ಸಿಬಿಐ ಬೇಟೆ”

add a comment.

Leave a Reply

You must be logged in to post a comment.