ಕುರುಗೋಡು ಲಾಕಪ್‌ ಡೆತ್‌ ಪ್ರತಿಭಟಿಸಿ ಇಂದು ಬಂದ್‌

ಬಳ್ಳಾರಿ,ಅ.೯ ವಿಚಾರಣೆ ಎದುರಿಸುತಿದ್ದ ಆರೋಪಿ ಯು ಠಾಣೆಯಲ್ಲೇ ವಿಷ ಸೇವಿಸಿ ಆತ್ಮ್ತಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಲೂಕಿನ ಕುರುಗೋಡು ಪೋಲಿಸ್‌ ಠಾಣೆಯ ಪಿಎಸ್‌ಐ ಅಂಬರಾಯ ಹಾಗೂ ಎಎಸ್‌ಐ ನಾಗರಾಜರ ಅವರುಗಳನ್ನು ಕರ್ತವ್ಯ ನಿರ್ಲಕ್ಷ ಆರೋಪದ ಹಿನ್ನೆಲೆ ಯಲ್ಲಿ ಜಿಲ್ಲಾ ಎಸ್‌ಪಿ ಡಾ.ಚಂದ್ರಗುಪ್ತ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಘಟನೆ ವಿವರ: ನಗರದ ಹೊರವಲಯದ ಬಂಡಿಹಟ್ಟಿ ನಿವಾಸಿ ಶಿವರಾಜು(೨೮) ಎನ್ನುವಾತ ಬಳ್ಳಾರಿ, ಕೊಪ್ಪಳ, ಗಂಗಾವತಿ ಮುಂತಾದ ಕಡೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕುರುಗೋಡು ಪೋಲಿಸರು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗಾಗಿ ಒಳಪಡಿಸಿದ್ದ-ರು. ಶನಿವಾರ ಕುರು ಗೋಡು ಠಾಣೆಯಲ್ಲಿ ವಿಚಾರಿಸುತ್ತಿರು ವಾಗ ಠಾಣೆಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಆರೋಪಿ ಪ್ರಯತ್ನಿಸಿದ್ದಾನೆ, ಕೂಡಲೆ ಚಿಕಿತ್ಸೆಗಾಗಿ ನಗರದ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾ ನೆಂದು ಪೋಲಿಸ್‌ ಮೂಲಗಳು ತಿಳಿಸಿವೆ. ಈಪ್ರಕರಣಕ್ಕೆ ಸಂಬಧಿಸಿದಂತೆ ಪ್ರಾಥಮಿಕ ವರದಿಯ ಆಧಾರದ ಮೇಲೆ ಇಬ್ಬರು ಪೋಲಿಸ್‌ ಅಧಿ ಕಾರಿಗಳನ್ನು ಅಮಾನತುಗೊಳಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಇಂದು ಕುರುಗೋಡು ಬಂದ್‌: ತಾಲ್ಲೂಕಿನ ಕುರುಗೋಡು ಪೊಲೀಸ್‌ ಠಾಣೆಯಲ್ಲಿ ಆರೋಪಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಪೊಲೀಸರ ಹೇಳಿಕೆಯಿಂದ ಕ್ರುದಟಛಿರಾಗಿರುವ ಸಾರ್ವಜನಿಕರು ಪೊಲೀಸ್‌ ಠಾಣೆಯ ಸಿಬ್ಬಂದಿ ವಿರುದಟಛಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಅ. ೧೦ರಂದು ಕುರುಗೋಡು ಬಂದ್‌ಗೆ ಕರೆ ನೀಡಿದ್ದಾರೆ.

No Comments to “ಕುರುಗೋಡು ಲಾಕಪ್‌ ಡೆತ್‌ ಪ್ರತಿಭಟಿಸಿ ಇಂದು ಬಂದ್‌”

add a comment.

Leave a Reply

You must be logged in to post a comment.