ಮಾತೆ ವಿರೋಧಿಗಳಿಗೆ ಧರ್ಮಸಿಂಗ್‌ ತಿರುಗುಬಾಣ

ಬೀದರ ಅ. ೯ ಪರ-ವಿರೋಧದ ನಡುವೆಯೂ ಬಸವಕಲ್ಯಾಣ ನಗರದ ಮಹಾಮನೆಯಲ್ಲಿ ಕಲ್ಯಾಣ ಪರ್ವ-೧೦ರ ಕಾರ್ಯಕ್ರಮಕ್ಕೆ ಭಾನುವಾರ ವಿದ್ಯುಕ್ತ ಚಾಲನೆ ದೊರೆಯಿತು. ಮಾತೆ ಮಹಾದೇವಿ ನೇತೃತ್ವದ ಪರ್ವಕ್ಕೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಶನಿವಾರದವರೆಗೆ ಪ್ರತಿಭಟನೆ ನಡೆಸಿದ ಹಲವು ಬಸವಪರ ಸಂಘಟನೆಗಳು ಕಾರ್ಯಕ್ರಮದ ಆರಂಭದ ದಿನ ಮಾತ್ರ ಯಾವುದೇ ಗದ್ದಲ ಎಬ್ಬಿಸದೇ ವಿವಾದದಿಂದ ದೂರ ಉಳಿದಿವೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ನಡೆದ ಕಾರ್ಯಕ್ರಮಕ್ಕೆ ಐದಾರು ಸಾವಿರ ಜನ ಸಾಕ್ಷಿಯಾದರು. ಕಲ್ಯಾಣ ಪರ್ವ-೧೦ರ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಬೀದರ್‌ ಸಂಸದ ಧರ್ಮಸಿಂಗ್‌ ತಮ್ಮ ಮಾತಿನುದಟಛಿಕ್ಕೂ, ಮಾತೆ ಮಹಾದೇವಿ ವಿರೋಧಿಗಳಿಗೆ ತಿವಿಯುತ್ತಲೇ ಭಾಷಣ ಮಾಡಿದರು. } ೪ನೇ ಪುಟಕ್ಕೆ ವಿರೋಧ ನಡುವೆ ಕಲ್ಯಾಣ ಪರ್ವಾರಂಭ ಮಾತೆ ವಿರೋಧಿಗಳಿಗೆ ಧರ್ಮಸಿಂಗ್‌ ತಿರುಗುಬಾಣ ಮಾತೆ ಮಹಾದೇವಿ ನೇತೃತ್ವದಲ್ಲಿ ಉತ್ತಮ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ವಿನಾಕಾರಣ ಮಹಾದೇವಿ ಅವರ ಕಾರ್ಯಕ್ರಮಗಳಿಗೆ ವಿರೋಧಿ ಸುವುದು ಸರಿಯಲ್ಲ ಎಂದು ಗುಟುರು ಹಾಕುವ ಮೂಲಕ ಧರ್ಮಸಿಂಗ್‌ ಕಲ್ಯಾಣ ಪರ್ವ ವಿರೋಧಿಗಳಿಗೆ ಸೂಚ್ಯ ಸಂದೇಶ ರವಾನಿಸಿದ್ದಾರೆ. ಬಸವಣ್ಣನವರ ತತ್ವಗಳ ಕುರಿತು ರಷ್ಯಾದ ಮಾಸ್ಕೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ, ಆದರೆ, ನಮ್ಮಲ್ಲಿ ಮಾತ್ರ ಅದು ಸಾಧ್ಯವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಧರ್ಮಸಿಂಗ್‌ ಇಲ್ಲಿ ಹೇಳಿದರು. ಮಾತಾಜಿ ಸಾಕಷ್ಟು ವಿರೋಧಗಳ ನಡುವೆಯೂ ಬಸವಕಲ್ಯಾಣ ಸೇರಿದಂತೆ ರಾಜ್ಯದ ಹಲಕಡೆ ರಚನಾತ್ಮಕ ಅಭಿವೃದಿಟಛಿ ಕಾರ್ಯಗಳನ್ನು ಮಾಡುತ್ತಲೇ ಇದ್ದಾರೆ. ಹಾಗಾಗಿ ಮಾತಾಜಿ ಅವರ ಕಾರ್ಯಗಳಿಗೆ ಸಹಕರಿಸುವ ಅಗತ್ಯವಿದೆ.

No Comments to “ಮಾತೆ ವಿರೋಧಿಗಳಿಗೆ ಧರ್ಮಸಿಂಗ್‌ ತಿರುಗುಬಾಣ”

add a comment.

Leave a Reply

You must be logged in to post a comment.