ಇಂದು ಅದೂಟಛಿರಿ ವಾಲ್ಮೀಕಿ ಜಯಂತಿ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋ ತ್ಸವವನ್ನು ಅ. ೧೧ರಂದು ನಗರದ ಅನಂತಪುರ ರಸ್ತೆಯಲ್ಲಿರುವ ಬಿಡಿಎಎ ಮೈದಾನದಲ್ಲಿ ಅದೂಟಛಿರಿಯಾಗಿ ನಡೆಸಲು ಜಿಲ್ಲಾಡಳಿತ ಸರ್ವಸಿದಟಛಿತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎ. ಎ. ಬಿಸ್ವಾಸ್‌ ತಿಳಿಸಿದ್ದಾರೆ. ಬೆಳಗ್ಗೆ ೯ ಗಂಟೆಗೆ ವಿವಿಧ ಸ್ತಬಟಛಿಚಿತ್ರಗಳನ್ನೊಳಗೊಂಡ ಮೆರವಣಿ ಗೆಯು ಬಿಡಿಎಎ ಮೈದಾನದಿಂದ ಪ್ರಾರಂಭವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಮೆರವಣಿಗೆಗೆ ಚಾಲನೆ ನೀಡುವರು ಎಂದು ಅವರು ಹೇಳಿದ್ದಾರೆ. ಇದೇ ಮೈದಾನದಲ್ಲಿ ಮಧ್ಯಾಹ್ನ ೧೨&೧೫ಕ್ಕೆ ನಡೆಯುವ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಕೆಎಂಎಫ್‌ ಅಧ್ಯಕ್ಷ ಜಿ. ಸೋಮ ಶೇಖರರೆಡ್ಡಿ ವಹಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜೆ.ಅರುಣಾ ಸಮಾರಂಭ ಉದ್ಘಾಟಿ ಸುವರು. ಮುಖ್ಯ ಅತಿಥಿಗಳಾಗಿ ಸಂಸದ ರಾದ ಜೆ. ಶಾಂತಾ, ಶಿವರಾಮಗೌಡ, ಅನಿಲ್‌ ಲಾಡ್‌, ಮಾಜಿ ಸಚಿವ ಬಿ. ಶ್ರೀರಾಮುಲು ಭಾಗವಹಿಸುವರು. ಶಾಸಕರಾದ ಟಿ. ಹೆಚ್‌. ಸುರೇಶ ಬಾಬು, ಬಿ. ನಾಗೆಂದ್ರ, ಬಿ. ಆನಂದ್‌ ಸಿಂಗ್‌ ಎಂ.ಎಸ್‌.ಸೋಮಲಿಂಗಪ್ಪ, ಚಂದ್ರ ನಾಯ್ಕ್‌, ನೇಮಿರಾಜ ನಾಯ್ಕ, ಸೇರಿದಂತೆ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು, ವಾಲ್ಮೀಕಿ ನಾಯಕರ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಗಿರಿ ಮಲ್ಲಪ್ಪ ಮತ್ತು ಜಿಲ್ಲೆಯ ವಾಲ್ಮೀಕಿ ಸಮುದಾಯದ ಅನೇಕ ಮುಖಂಡರು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿರುಪಾಕ್ಷಿ ಪೂಜಾ ರಹಳ್ಳಿ, ಸಾಹಿತಿ ಆರ್‌. ಕೆ. ಸುಬೇ ದಾರ್‌ ವಾಲ್ಮೀಕಿ ಜಯಂತಿ ಬಗ್ಗೆ ಉಪ ನ್ಯಾಸ ನೀಡುವರು. ವಾಲ್ಮೀಕಿ ಜಯಂ ತ್ಯೋತ್ಸವ ಸಮಿತಿ ಕಾರ್ಯ ದರ್ಶಿ ಯೂ ಆಗಿರುವ ಜಿಲ್ಲಾ ಪರಿಶಿಷ್ಟ ವರ್ಗ ಗಳ ಕಲ್ಯಾಣಾಧಿಕಾರಿ ಸಿ. ಪೋ ಲಯ್ಯ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

No Comments to “ಇಂದು ಅದೂಟಛಿರಿ ವಾಲ್ಮೀಕಿ ಜಯಂತಿ”

add a comment.

Leave a Reply