ಗುಲಬರ್ಗಾ ಜಿಲ್ಲಾ ಆಸ್ಪತ್ರೆಯಿಂದ ೯.೩೯ ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ

ಗುಲಬರ್ಗಾ ಅ.೧೦ ಗುಲಬರ್ಗಾ ಜಿಲ್ಲಾ ಆಸ್ಪತ್ರೆಯಲ್ಲಿ ೨೦೦೯ರಿಂದ ೨೦೧೧ರ ಜುಲೈ ಅಂತ್ಯದವರೆಗೆ ೪೫೫೯೫ ಜನರಿಗೆ ಒಳರೋಗಿಗಳಾಗಿ ಮತ್ತು ೯೩೯೨೭೮ ಜನ ಹೊರರೋಗಿ ಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೇ ಅವಧಿಯಲ್ಲಿ ವಿವಿಧ ವಿಭಾಗಗಳಿಂದ ಒಟ್ಟು ೧೨೭೪೧ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ. ವಿಶಾಲ್‌ ಆರ್‌. ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ಸುಲೋಚನಾ ಎಸ್‌. ಮಿಂಚ್‌ ಅವರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ವಿವರ ಇಂತಿದೆ. ಆರ್ಥೋಪಿಡಿಸ್‌ & ೩೦೨, ಸರ್ಜರಿ&೪೩೨, ಇಎನ್‌ಟಿ&೮೧೦, ಗೈನಿಕ್‌ ವಿಭಾಗ / ಹೆರಿಗೆಗಳು&೧೦೨೭೧ ಮತ್ತು ಆಪ್ತಾಲ್ಮೋಲಾಜಿ&೯೨೬. ಈ ಆಸ್ಪತ್ರೆಯಲ್ಲಿ ೨೦೦೯ ಮೇ ೧೫ರಿಂದ ಡಯಾಲಿಸಿಸ್‌ ಯಂತ್ರಗಳ ನೆರವಿನಿಂದ ೨೦೧೧ರ ಜುಲೈ ಅಂತ್ಯದವರೆಗೆ ೩೭೬೧ ಜನರಿಗೆ ಡಯಾಲಿಸಿಸ್‌ ಸೇವೆ ಒದಗಸಲಾಗಿದೆ. ಎನ್‌.ಆರ್‌.ಎಚ್‌.ಎಂ./ ಕೆ.ಎಚ್‌.ಎಸ್‌. ಅಡಿಯಲ್ಲಿ ಈ ಘಟಕಕ್ಕೆ ಓರ್ವ ಫ್ರಾಲಾಜಿಸ್ಟರನ್ನು ರಿಟೇನರ್‌/ ಬೇಸಿಸ್‌ ಮೇಲೆ ನೇಮಿಸಲಾಗಿದೆ. ಈ ಡಯಾಲಿಸಿಸ್‌ ಘಟಕವು ರಾಜ್ಯದಲ್ಲಿಯೇ ಅತೀ ಹೆಚ್ಚು ಡಯಾಲಿಸಿಸ್‌ ಮಾಡಿದ ಕೀರ್ತಿಗೆ ಪಾತ್ರವಾಗಿದೆ. ಸೆಂಟ್ರಲ್‌ ಆಕ್ಸಿಜನ್‌ ಸೆಕ್ಷನ್‌ ಹಾಗೂ ಏ.ಸಿ., ಮೈನರ್‌ ಆಪರೇಶನ್‌ ಥಿಯೇಟರ್‌ ಸೌಲಭ್ಯ ಹೊಂದಿದೆ. ಸುಟ್ಟ ಗಾಯಗಳ ವಿಭಾಗದಿಂದ ಜುಲೈವರೆಗೆ ಒಟ್ಟು ೭೪೨ ಸುಟ್ಟ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಸಿಕ್‌ ನಿಯೋನಾಟಲ್‌ ಕೇರ್‌ ಘಟಕದಲ್ಲಿ ೭ ಓಪನಕೇರ್‌ ವಾರ್ಮರ್‌, ಫೋಟೋ ಥೆರಪಿ ಮತ್ತು ಪಲ್ಸ್‌ ಆಕ್ಸಿಮೀಟರ್‌ ಆಕ್ಸಿಜನ್‌ ಕಾನ್ಸ್‌ಂಟ್ರೇಟರ್‌ ಸೌಲಭ್ಯ ಘಟಕದಿಂದ ಜುಲೈವರೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಬಂದಿರುವ ಒಟ್ಟು ೧೧೫೬೬ ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗಿದೆ. ಎನ್‌.ಆರ್‌.ಎಚ್‌.ಎಂ.ದಿಂದ ಮಂಜೂ ರಾದ ೨೫ ಲಕ್ಷ ರೂ.ದಿಂದ ಅಗತ್ಯ ಉಪಕರಣಗಳನ್ನು ಖರೀದಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ೧೦ ಹಾಸಿಗೆಗಳ ಪೌಷ್ಟಿಕತೆಯ ಪುನರ್ವಸತಿ ಕೇಂದ್ರವನ್ನು (ಎನ್‌.ಆರ್‌.ಸಿ.) ೨೦೧೧ರ ಮಾರ್ಚ್‌ ೨೩ರಿಂದ ಪ್ರಾರಂಭಿಸಲಾಗಿದೆ. ಈವರೆಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ೧೫ ವರ್ಷದೊಳಗಿನ ೬೬ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಚಿಕಿತ್ಸೆ ಹಾಗೂ ಮಕ್ಕಳ ತಾಯಂದಿರಿಗೂ ಆಹಾರ ನೀಡಲಾಗಿದೆ. ಘಟಕಕ್ಕೆ ಬಿಡುಗಡೆಯಾದ ೨೫ ಲಕ್ಷ ರೂ. ಪೈಕಿ ೬.೪೦ ಲಕ್ಷ ರೂ. ಮೊತ್ತದ ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಆಸ್ಪತ್ರೆಯಲ್ಲಿ ರೆಟ್ರೋವೈರಲ್‌ ಥೆರಪಿ (ಎಆರ್‌ಪಿ) ವಿಭಾಗಕ್ಕೆ ೨೦೦೯ರ ಆಗಸ್ಟ್‌ ತಿಂಗಳಲ್ಲಿ ಸಿಡಿ&೪ ಕೌಂಟ್‌ ಯಂತ್ರ ಸರಬರಾಜಾಗಿದೆ. ಈ ಯಂತ್ರದ ಸಹಾಯದಿಂದ ಕಳೆದೆರಡು ವರ್ಷದಲ್ಲಿ ಒಟ್ಟು ೧೭೫೪ ಹೆಚ್‌.ಐ.ವಿ./ ಏಡ್ಸ್‌ಪೀಡಿತ ರೋಗಿಗಳು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. μಜಿಯೋಥೆರಪಿ ವಿಭಾಗದಲ್ಲಿರುವ ಓರ್ವ ವೈದ್ಯರು ವಿವಿಧ ಉಪಕರಣಗಳ ಸಹಾಯದಿಂದ ಸೂಕ್ತ ಉಪಚಾರ ನೀಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಿಂದ ೨೦೦೯&೧೦ ರಿಂದ ೨೦೧೧ರ ಜುಲೈ ಅಂತ್ಯದವರೆಗೆ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಯ ವೇತನಕ್ಕಾಗಿ ಒಟ್ಟು ೧೯.೬೩ ಕೋಟಿ ರೂ. ಖರ್ಚು ಮಾಡಲಾಗಿದೆ. ವಿವಿಧ ಯೋಜನೆಗಳಡಿಯಲ್ಲಿ ಉಪಕರಣಗಳಿಗಾಗಿ ೩.೨೮ ಕೋಟಿ ರೂ. ಹಾಗೂ ಮೆಡಿಸಿನ್‌ ಮತ್ತು ಕಂಜುಮೇಬಲ್ಸ್‌ಗಾಗಿ ೫.೪೪ ಕೋಟಿ ರೂ. ಖರ್ಚು ಮಾಡಲಾಗಿದೆ. ಇದೇ ಅವಧಿಯಲ್ಲಿ ಆಸ್ಪತ್ರೆಯ ವಿದ್ಯುತ್‌, ನೀರು, ದೂರವಾಣಿ ಮತ್ತು ಕಟ್ಟಡಕ್ಕಾಗಿ ೧.೨೭ ಕೋಟಿ ರೂ. ಹಾಗೂ ಮ್ಯಾನ್‌ಪವರ್‌ಗಾಗಿ ೯೩.೭೬ ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕೆ.ಎಫ್‌.ಡಬ್ಲ್ಯೂ. ಅಡಿಯಲ್ಲಿ ೧೩.೦೬ ಕೋಟಿ ರೂ. ವೆಚ್ಚದಿಂದ ಜಿಲ್ಲಾ ಆಸ್ಪತ್ರೆಯ ನವೀಕರಣ ಕಾಮಗಾರಿಯನ್ನು ೩ ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದಲ್ಲದೆ ೨.೧೭ ಕೋಟಿ ರೂ. ವೆಚ್ಚದ ೨೨ ದೊಡ್ಡ ಮತ್ತು ೨೫ ಸಣ್ಣ ಪ್ರಮಾಣದ ಯಂತ್ರೋಪಕರಣಗಳು ಕೆಎಚ್‌ಎಸ್‌ಸಿಆರ್‌ಪಿಯಿಂದ ಸರಬರಾಜಾಗಿರುತ್ತವೆ. ಅದೇರೀತಿ ೨೦೦೯ರಿಂದ ೨೦೧೧ರ ಜುಲೈವರೆಗೆ ಜಿಲ್ಲಾ ಆಸ್ಪತ್ರೆಗೆ ವಿವಿಧ ಯೋಜನೆಯ ಅನುದಾನದಡಿ ೩.೨೫ ಕೋಟಿ ರೂ. ಮೊತ್ತದ ಒಟ್ಟು ೯೯೨ ವಿವಿಧ ಉಪಕರಣಗಳು ಸರಬರಾಜಾಗಿರುತ್ತವೆ. ಗುಲಬರ್ಗಾ ವಿಭಾಗದಲ್ಲೇ ಅತೀ ದೊಡ್ಡ ಪ್ರಮಾಣದ ಗುಲಬರ್ಗಾ ಜಿಲ್ಲಾ ಆಸ್ಪತ್ರೆಯು ಕಳೆದ ೪೪ ವರ್ಷಗಳಿಂದ ಗುಲಬರ್ಗಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಬಡರೋಗಿಗಳಿಗೆ ವಿವಿಧ ರೀತಿಯ ಅನುಕೂಲ ಕಲ್ಪಿಸುತ್ತಿದೆ. ಕಳೆದೆರಡು ವರ್ಷಗಳಿಂದ ಕೆಎಫ್‌ಡಬ್ಲಯೂ ವತಿಯಿಂದ ೧೩.೦೬ ಕೋಟಿ ರೂ. ವೆಚ್ಚದಿಂದ ಈ ಆಸ್ಪತ್ರೆಯ ನವೀಕರಣ ಕಾರ್ಯವನ್ನು ಮೂರು ಹಂತಗಳಲ್ಲಿ ಕೈಗೊಂಡು ಎಲ್ಲ ವಿಭಾಗಗಳಲ್ಲಿ ಉನ್ನತ ಮಟ್ಟದ ಉಪಕರಣಗಳನ್ನು ಅಳವಡಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಪ್ರಾರಂಭದಲ್ಲಿ ೭೫೦ ಹಾಸಿಗೆಗಳ ಆಸ್ಪತ್ರೆಯಾಗಿತ್ತು. ಎಂ.ಆರ್‌.ಎಂ. ವೈದ್ಯಕೀಯ ಕಾಲೇಜು ೨೦೦೪ರ ಡಿಸೆಂಬರ್‌ನಲ್ಲಿ ೧೯೬೩ರ ಹೊಂದಾಣಿಕೆಯನ್ನು ಹಿಂಪಡೆದ ಬಳಿಕ ವೈದ್ಯರ ಕೊರತೆಯಾಗಿದ್ದು, ತಾತ್ಕಾಲಿಕವಾಗಿ ೪೦ ತಜ್ಞ ವೈದ್ಯರನ್ನು ಗುತ್ತಿಗೆಯಾಧಾರದ ಮೇಲೆ ನೇಮಿಸಿ ಸೇವೆ ಪಡೆಯಲಾಗುತ್ತಿತ್ತು. ಇವರಲ್ಲಿ ಕೆಲವರ ಸೇವೆ ಸಕ್ರಮಗೊಂಡು ಬೇರೆಡೆ ನಿಯುಕ್ತಿ ಹೊಂದಿದರೆ ಕೆಲವರು ಕೆಲಸ ಬಿಟ್ಟಿರುವುದರಿಂದ ಈಗ ಕೇವಲ ಒಬ್ಬ ನಿವೃತ್ತ ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಥಿಲಾವಸ್ಥೆಯ ಆಸ್ಪತ್ರೆಯ ಕಟ್ಟಡದ ಭಾಗಗಳನ್ನು ನೆಲಸಮಗೊಪಳಿಸಿದ ಪ್ರಯುಕ್ತ ೭೫೦ ಹಾಸಿಗೆಗಳಲ್ಲಿ ೩೨೦ ಹಾಸಿಗೆಗಳು ಮಾತ್ರ ಉಳಿದಿವೆ. ಅಪೌಷ್ಟಿಕತೆಯಿಂದ ಬಳಲುವ ೧೫ ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ೧೦ ಹಾಸಿಗೆಗಳ ಎನ್‌.ಆರ್‌.ಸಿ. ವಿಭಾಗ ಪ್ರಾರಂಭಿಸಲಾಗಿದೆ. ಇದರಿಂದ ೬ ಮಹಡಿಯ ಜಿಲ್ಲಾ ಆಸ್ಪತ್ರೆಯ ಆವರಣಲದಲ್ಲಿ ಕೆ.ಎಚ್‌.ಎಸ್‌.ಡಿ.ಆರ್‌.ಪಿ.ಯಿಂದ ೫೦೦ ಹಾಸಿಗೆಗಳ ಟೆರಿಷಿಯರ್‌ ಲೆವೆಲ್‌ ಸುಪರ್‌ ಸ್ಪೆಸಿಯಾಲಿಟಿ ಆಸ್ಪತ್ರೆಯನ್ನು ಹೈದ್ರಾಬಾದಿನ ಕೆ.ಎಂ.ಇ. ಪ್ರಾಜೆಕ್ಟ್‌ ಲಿಮಿಟೆಡ್‌ ಸಂಸ್ಥೆ ನಿರ್ಮಿಸುತ್ತಿದೆ. ಈ ಕಟ್ಟಡ ೨&೩ತಿಂಗಳಲ್ಲಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಜಿಲ್ಲಾ ಆಸ್ಪತ್ರೆಯು ಒಟ್ಟು ೮೩೦ ಹಾಸಿಗೆಗಳ ಆಸ್ಪತ್ರೆಯಾಗಿ ಇದೇ ವರ್ಷ ಪ್ರಾರಂಭವಾಗುವ ನಿರೀಕ್ಷೆಯಿದೆ. ಜಿಲ್ಲಾ ಆಸ್ಪತ್ರೆಗೆ ಗ್ರೂಪ್‌ ಎ ೪೬ ತಜ್ಞ ವೈದ್ಯರ, ಗ್ರೂಪ್‌ ಬಿ ೬ ವೈದ್ಯರ, ೨೯೬ ಸಿ ಗ್ರೂಪ್‌ ಮತ್ತು ೨೫೫ ಡಿ ಗ್ರೂಪ್‌ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ೪೬ ತಜ್ಞರ ವೈದ್ಯರ ಹುದ್ದೆಗಳಲ್ಲಿ ಮೆಡಿಸಿನ್‌, ಓಬಿಜಿ, ಫಾರೆನ್ಸಿಕ್‌ ಮೆಡಿಸಿನ್‌ ಪಿಡಿಯಾಟ್ರಿಕ್ಸ್‌, ಚರ್ಮ, ಎಲುಬು&ಕೀಲು, ಕ್ಷಯರೋಗ, ಬಯೋಕೆಮಿಸ್ಟ್ರಿ, ಬರ್ನ್ಸವಾರ್ಡ್‌, ನೆಫೊರೋಲೋಜಿಯ ತಲಾ ಒಂದರಂತೆ ೧೧ ತಜ್ಞ ವೈದ್ಯರ ಹುದ್ದೆಗಳು ಖಾಲಿಯಿವೆ. ಈ ಆಸ್ಪತ್ರೆಗೆ ಹೆಚ್ಚುವರಿಯಾಗಿ ೪೦ ತಜ್ಞ ವೈದ್ಯರ ಹುದ್ದೆಗಳನ್ನು ಶಾಶ್ವತವಾಗಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಯಾಜುವಲ್ಟಿ ವಿಭಾಗದಲ್ಲಿ ೨ ಜನ ಎಂ.ಬಿ.ಬಿ.ಎಸ್‌. ವೈದ್ಯಾಧಿ ಕಾರಿಗಳನ್ನು ಆರೋಗ್ಯ ರಕ್ಷಾ ಸಮಿತಿ ನಿಧಿಯಡಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ಈ ಹುದ್ದೆಗಳ ವಿವರ ಇಂತಿದೆ. ಜನರಲ್‌ ಮೆಡಿಸಿನ್‌&೦೬, ಜನರಲ್‌&೩ ಸರ್ಜರಿ&೦೩, ಓಬಿಜಿ&೮, ಆಪ್ತಾಲ್ಮೋಲಾಜಿ&೨, ಪ್ಯಾಥೋಲೋಜಿ&೩, ಸ್ಕಿನ್‌&೨, ರೇಡಿಯೋಲೋಜಿ&೨, ಇಎನ್‌ಟಿ&೧, ಅನೆಸ್ಥಿಸಿಯಾ&೨, ಎಂ.ಬಿ.ಬಿ.ಎಸ್‌. (ಸಿಎಂಓ) &೮. ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆಗೆ ಪರಿಹಾರವಾಗಿ ಗುಲಬರ್ಗಾದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಎನ್‌.ಆರ್‌.ಎಚ್‌.ಎಂ. ದಿಂದ ಮಂಜೂರಾದ ೨೫ ಲಕ್ಷ ರೂ. ದಿಂದ ಅಗತ್ಯ ಉಪಕರಣ ಖರೀದಿಸಲಾಗಿದೆ. ಖಾಲಿಯಿರುವ ೧೧ ತಜ್ಞ ವೈದ್ಯರ ಪೈಕಿ ೬ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ (ಫುಲ್‌ ಟೈಮರ್‌ರಿಟೇನರ್‌ ಬೇಸಿಸ್‌) ನೇಮಿಸಲಾಗಿದೆ. ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಳ್ಳೆಯ ಸೌಲಭ್ಯ ನೀಡುತ್ತಿದ್ದು, ಇನ್ನೂ ಹೆಚ್ಚಿನ ಸೇವೆಯನ್ನು ರೋಗಿಗಳಿಗೆ ನೀಡಲು ಆಸಕ್ತಿಯುಳ್ಳ ಸಂಘ ಸಂಸ್ಥೆಯವರು ಹಾಗೂ ದಾನಿಗಳು ಧನಸಹಾಯ/ ಕಾಣಿಕೆ ನೀಡಲು ಜಿಲ್ಲಾ ಶಸ್ತ್ರಜ್ಞರನ್ನು ಸಂಪರ್ಕಿಸಲು ಕೋರಿದೆ.

No Comments to “ಗುಲಬರ್ಗಾ ಜಿಲ್ಲಾ ಆಸ್ಪತ್ರೆಯಿಂದ ೯.೩೯ ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ”

add a comment.

Leave a Reply

You must be logged in to post a comment.