ಯಾದಗಿರಿ:ತಿರುಪತಿಗೆ ತೆರಳುತ್ತಿದ್ದಜೀಪ್‌ ಅಪಘಾತ ಸುರಪೂರಿನ ೭ ಜನರ ದುರ್ಮರಣ

ಯಾದಗಿರಿ ಅ. ೧೦ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ ಜಿಲ್ಲೆಯ ೭ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ನಂದ್ಯಾಲ ಬಳಿ ಇಂದು ಬೆಳಗಿನ ಜಾವ ೫.೩೦ ಗಂಟೆ ಸುಮಾರಿಗೆ ನಡೆದಿದೆ. ಮೃತಪಟ್ಟವರು ಜಿಲ್ಲೆಯ ಸುರಪೂರ ಪಟ್ಟಣ ಮತ್ತು ಸಗರ ಗ್ರಾಮಕ್ಕೆ ಸೇರಿದವರಾಗಿದ್ದು, ನಿನ್ನೆ ರಾತ್ರಿ ೯ ಗಂಟೆಗೆ ಸುರಪೂರದಿಂದ ಕ್ರಷರ್‌ ಜೀಪ್‌ನಲ್ಲಿ ತಿರುಪತಿಗೆ ಪ್ರಯಾಣ ಬೆಳೆಸಿದ್ದರು. ನಂದ್ಯಾಲ } ೪ನೇ ಪುಟಕ್ಕೆ ಬಳಿ ಬೆಳಿಗ್ಗೆ ನಂದ್ಯಾಲ ಬಳಿ ತಿರುಪತಿ ಯಿಂದ ಹೈದ್ರಾಬಾದ ಕಡೆ ಹೊರಟಿ ದ್ದ ಬಸ್‌ ಢಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ೬ ಜನ ಸತ್ತರೇ, ಒಬ್ಬರು ನಂದ್ಯಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕ್ರಷರ್‌ ಚಾಲಕ ರಾಮ ಮೂರ್ತಿ, ಅಶೋಕ (೩೦,), ಜಯಶ್ರೀ ( ೩೫), ಅಮರಮ್ಮ (೭೦), ಮಹಾದೇವಮ್ಮ (೪೮), ಹಣಮೇಶ (೪೫) ಸ್ಥಳದಲ್ಲಿಯೇ ಸತ್ತವರು. ಮಲ್ಲಯ್ಯ (೫೮) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

No Comments to “ಯಾದಗಿರಿ:ತಿರುಪತಿಗೆ ತೆರಳುತ್ತಿದ್ದಜೀಪ್‌ ಅಪಘಾತ ಸುರಪೂರಿನ ೭ ಜನರ ದುರ್ಮರಣ”

add a comment.

Leave a Reply

You must be logged in to post a comment.