˨ÜáÂñ… PÜwñÜ hÝÄ

ಬೆಂಗಳೂರು,ಅ.೧೦ ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್‌ ಸಮಸ್ಯೆಯನ್ನು ಶೀಘ್ರ ನಿವಾರಣೆ ಮಾಡಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ ಭರವಸೆ ನೀಡಿದ್ದಾರೆ.ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ಒಂದು ದಿನಕ್ಕೆ ಮಾತ್ರ ಆಗುವಷ್ಟು ಕಲ್ಲಿದ್ದಲಿದೆ ಎಂಬ ವರದಿಗಳು ಸರಿ ಯಲ್ಲ. ಹೀಗೆ ವದಂತಿ ಹಬ್ಬಿಸಿ ಜನರಲ್ಲಿ ಆತಂಕ ಮೂಡಿಸು ವುದು ಸರಿಯಲ್ಲ ಎಂದರು. ರ ಾ ¿ ು ಚ ೂ ರಿ ನ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಕ್ಕೆ ಅಗತ್ಯ ಕಲ್ಲಿದ್ದಲು ಪೂರೈಕೆಗೆ ರಾಜ್ಯ ಸರ್ಕಾರ ಈಗಾಗಲೇ ಅನೇಕ ಕ್ರಮಕೈ ಗೊಂಡಿದೆ. ಮಹಾ ರಾಷ್ಟ್ರ ದಿಂದ ಕಲ್ಲಿದ್ದಲು ತರಿಸಿ ಕೊಳ್ಳುವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಉಡುಪಿ ಯ ಯುಪಿಸಿಎಲ್‌ನ ೨ನೇ ಘಟಕದ ಸ್ಥಾಪನೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾ ಗಿದೆ. ಇಂದೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಮತ್ತು ಅಗತ್ಯ ಅನುಮತಿಗೆ ಕ್ರಮ ಕೈಗೊಳ್ಳು ವಂತೆ ಪರಿಸರ ಇಲಾಖೆ ಅಧಿ ಕಾರಿಗಳಿಗೆ ಸೂಚಿಸಲಾಗಿದೆ ಎಂದರು. ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರಕ್ಕೆ (ಆರ್‌ಟಿಪಿಎಸ್‌) ಮಹಾರಾಷ್ಟ್ರ ದಿಂದ ಕಲ್ಲಿದ್ದಲು ಪೂರೈಕೆಯಾಗಿದೆ. ಮಹಾ ರಾಷ್ಟ್ರದಿಂದ ೫ ರೇಕ್‌ ಮತ್ತು ಒಡಿಶಾದಿಂದ ೧ ರೇಕ್‌ ಕಲ್ಲಿದ್ದಲೂ ಪೂರೈಕೆ ಯಾಗಲಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬರ ಪರಿ ಹಾರ ಕಾಮಗಾರಿಗಳು ಸಮರೋಪಾದಿ ಯಲ್ಲಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇನ್ನೂ ಕೆಲವು ಹೋಬಳಿಗಳನ್ನು ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಬೇಕು ಎಂಬ ಒತ್ತಡ ಇದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿ ಕಾರಿಗಳೊಂದಿಗೆ ಚರ್ಚಿಸಿ ಪರಿಸ್ಥಿತಿ ಅವಲೋ ಕಿಸಿ ಕ್ರಮ ಕೈಗೊಳ್ಳಲಾಗು ವುದು ಎಂದು ತಿಳಿಸಿದರು. ನಂತರ ಮುಖ್ಯಮಂತ್ರಿ ಸದಾನಂದಗೌಡ ಬೆಳಗಾವಿಯಲ್ಲಿ ನಿರ್ಮಿಸಲಾಗುತ್ತಿರುವ ಸುವರ್ಣಸೌಧ ಕಾಮಗಾರಿಯ ಖುದ್ದು ವೀಕ್ಷಣೆಗೆ ತೆರಳಿದರು. ಮುಂಬರುವ ಅಧಿ ವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದ್ದು ಈ ಭೇಟಿ ಮಹತ್ವ ಪಡೆದುಕೊಂಡಿದೆ.

No Comments to “˨ÜáÂñ… PÜwñÜ hÝÄ”

add a comment.

Leave a Reply

You must be logged in to post a comment.