ಶಿಕ್ಷಣ ಪಡೆಯುವುದರ ಮೂಲಕ ಸ್ವಾವಲಂಬಿಗಳಾಗಬೇಕು & ಶಾಸಕ ಸಂಗಣ್ಣ

ಕೊಪ್ಪಳಳ,,ಅ.೧೧: ವಾಲ್ಮೀಕಿ ನಾಯಕ ಸಮುದಾಯದ ಪ್ರತಿಯೊಬ್ಬರು ಶಿಕ್ಷಣ ಪಡೆಯುವುದರ ಮೂಲಕ ಸ್ವಾವಲಂಬಿಗಳಾಗಬೇಕೆಂದು ಶಾಸಕ ಸಂಗಣ್ಣ ಕರಡಿ ಹೇಳಿದರು. ಅವರು ನಗರದ ಸಾಹಿತ್ಯ ಭವನ ದಲ್ಲಿ ಜಿಲ್ಲಾಡಳಿತ,ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ರಾಮಾಯಣ ಮಹಾಭಾರತ ಮಹಾಕಾವ್ಯಗಳು ಸಾಂಸ್ಕೃತಿಕ ಪ್ರತೀಕವಾಗಿವೆ. ಎಲ್ಲಾ ರೀತಿ ಯಿಂದಲೂ ವಾಲ್ಮೀಕಿ ನಾಯಕ ಸಮು ದಾಯ ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡಿದೆ. ಜಬ್ಬಲ ಗುಡ್ಡದ ಗಂಡುಗಲಿ ಕುಮಾರ ರಾಮನ ಕ್ಷೇತ್ರಕ್ಕೆ ಉತ್ತಮ ರಸ್ತೆ ನಿರ್ಮಿ ಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ ಅವರು, ವಾಲ್ಮೀಕಿ ನಾಯಕ ಸಮುದಾಯ ನನ್ನನ್ನು ೧೯೯೪ ರಿಂದ ಬೆಂಬಲಿಸುತ್ತಾ ಬಂದಿದ್ದು,ಆ ಸಮಾ ಜದ ಋಣ ನನ್ನ ಮೇಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ.ಅಧ್ಯಕ್ಷೆ ಜ್ಯೋತಿ ಬಿಲ್ಗಾರ್‌ ವಾಲ್ಮೀಕಿ ಮಹರ್ಷಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಧಾರವಾಡದ ಕರ್ನಾಟಕ ಕಾಲೇ ಜಿನ ಪ್ರಾಧ್ಯಾಪಕ ಡಾ.ಡಿ.ಬಿ. ಕರ ಡೋಣಿ ಉಪನ್ಯಾಸ ನೀಡಿದರು. ವೇದಿಕೆಯ ಮೇಲೆ ಜಿ.ಪಂ. ಉಪಾಧ್ಯಕ್ಷೆ ಡಾ.ಸೀತಾ ಗೂಳಪ್ಪ ಹಲಗೇರಿ, ಜಿ.ಪಂ. ಸದಸ್ಯರಾದ ಕೆ.ರಾಘವೇಂದ್ರ ಹಿಟ್ನಾಳ, ನಾಗನಗೌಡ ಮಾಲಿ ಪಾಟೀಲ್‌, ಟಿ. ಜನಾರ್ದನ, ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ, ಎಪಿಎಂಸಿ ಅಧ್ಯಕ್ಷ ಶರಣಪ್ಪ ಸಜ್ಜನ್‌, ಜೆಡಿಎಸ್‌ ಮುಖಂಡ ಪ್ರದೀಪಗೌಡ ಮಾಲಿ ಪಾಟೀಲ್‌, ವಾಲ್ಮೀಕಿ ಸಮಾಜ ದ ಮುಖಂಡರಾದ ಹನುಮಂತಪ್ಪ ನಾಯಕ್‌, ಚಂದಪ್ಪ ತಳವಾರ, ಜಿಲ್ಲಾ ಧಿಕಾರಿ ತುಳಸಿ ಮದ್ದಿ ನೇನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ಎಸ್‌. ಪ್ರಕಾಶ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಚ್‌. ಕಾಕ ನೂರು,ಸಹಾಯಕ ಆಯುಕ್ತ ಶರಣ ಬಸಪ್ಪ ಸೇರಿದಂತೆ ಅನೇಕರು ಉಪಸ್ಥಿತ ರಿದ್ದರು.ಜಿಲ್ಲಾ ಸಮಾಜ ಕಲ್ಯಾಣ ಅಧಿ ಕಾರಿ ಬಿ.ಕಲ್ಲೇಶ ಸ್ವಾಗತಿಸಿದರು. ಕಾರ್ಯಕ್ರಮ ಪ್ರಾಚಾರ್ಯ ಸಿ.ವಿ.ಜಡಿಯವರು ನಿರೂಪಿಸಿದರು. ಮೆರವಣಿಗೆ : ಮಹರ್ಷಿ ವಾಲ್ಮೀ ಕಿಯ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿ ದರು. ನಂತರ ವಿವಿಧ ಕಲಾ ತಂಡ ಗಳಿಂದ ಆಕರ್ಷಕ ಮೆರವಣಿಗೆ ಗಡಿ ಯಾರ ಕಂಬ, ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನಕ್ಕೆ ಬರಲಾ ಯಿತು

No Comments to “ಶಿಕ್ಷಣ ಪಡೆಯುವುದರ ಮೂಲಕ ಸ್ವಾವಲಂಬಿಗಳಾಗಬೇಕು & ಶಾಸಕ ಸಂಗಣ್ಣ”

add a comment.

Leave a Reply