ಶಿವರಾಜ ತಟಸ್ಥ : ನಾಸೀರ ಹುಸೇನ ಗೆಲುವಿನ ಹಾದಿ ಸುಗಮ

ಗುಲಬರ್ಗಾ ಅ.೧೧ ರಾಜಕೀಯ ಭವಿಷ್ಯ ರೂಪಿಸುವ ಚುನಾವಣೆಗಳನ್ನೇ ಮೀರಿಸುವ ರೀತಿಯಲ್ಲಿ ರೂಪು ಪಡೆದುಕೊಂಡಿದ್ದ ಕಲಬುರ್ಗಿ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಚುನಾವಣೆ ಈಗ ತಣ್ಣಗಾಗಿದೆ. ತೀವ್ರ ಸ್ಪರ್ಧೆಯೊಡ್ಡಿದಟಛಿ ಶಿವರಾಜ ಪಾಟೀಲ ರದ್ದೇವಾಡಗಿ ಅವರನ್ನು ತಟಸ್ಥಗೊಳಿಸುವುದರ ಮುಖಾಂತರ ಚುನಾವಣೆ ಯ ಸ್ಪರ್ಧೆಯು ಮಹತ್ವ ಕಳೆದುಕೊಂಡಿದೆಯಲ್ಲದೇ ಚುನಾವಣೆ ಮೂಲ ಆಶಯಕ್ಕೆ ಪೆಟ್ಟು ನೀಡಲಾ ಗಿದೆ. ಇದೇ ಪ್ರಥಮ ಬಾರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧೀಜಿಯವರ ಅಭಿಲಾಷೆ ಮೇರೆಗೆ ಪಕ್ಷದಲ್ಲಿ ಮುಖಂಡರುಗಳ ಪ್ರಭಾವ ಹಾಗೂ ಪಾಳೆಗಾರಿಕೆ ತಡೆದು ಆಂತರಿಕ ಪ್ರಜಾಪ್ರಭುತ್ವ ತರುವ ನಿಟ್ಟಿನಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಈ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಅವಕಾಶವಿಲ್ಲ. ದಿ. ೧೨ ಮತ್ತು ೧೩ರಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಯುವ ಘಟಕದ ಚುನಾವಣೆ ನಡೆಯಲಿದೆ. ೧೦ ಸ್ಥಾನಗಳಿಗೆ ಒಟ್ಟು ೧೧ ಅಭ್ಯರ್ಥಿಗಳು ಕಣದಲ್ಲಿದ್ದರು. ಅದರೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿದ್ದ ಶಿವರಾಜ ಪಾಟೀಲ ರದ್ದೇವಾಡಗಿ ಅವರನ್ನು ಕಣದಲ್ಲಿಯೇ ತಟಸ್ಥಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಹೆಸರಿಗೆ ಮಾತ್ರ ನಡೆಯಲಿದೆ. ಕೇಂದ್ರ ಕಾರ್ಮಿಕ ಖಾತೆ ಸಚಿವರ ಮನೆಯಲ್ಲಿ ನಡೆದ ಪಕ್ಷದ ಹಿರಿಯ ಮುಖಂಡರುಗಳ ಸಭೆಯಲ್ಲಿ ಈಗಾಗಲೇ ೮ ವರ್ಷಗಳ ಕಾಲ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ನಾಸೀರ ಹುಸೇನ ಉಸ್ತಾದ ಅವರನ್ನು ಮುಂದುವರೆಸಿ ಶಿವರಾಜ ಪಾಟೀಲ ಅವರನ್ನು ಕಣದಲ್ಲಿಯೇ ತಟಸ್ಥರಾಗಿ ಉಳಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಶಿವರಾಜ ಪಾಟೀಲ ಕಣದಲ್ಲಿ ಉಳಿದು ಸ್ಪರ್ಧೆಯೊಡ್ಡಿದರೆ ರಾಜ್ಯ ಯುವ ಘಟಕ ಸ್ಥಾನಕ್ಕೆ ಸ್ಪರ್ಧಿಸುವ ಪ್ರಿಯಾಂಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿರೀಕ್ಷಿಸಿದ ಮತಗಳಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದೆಂಬ ಹಿನ್ನಲೆ ಯಲ್ಲಿ ನಿರ್ಣಯಕ್ಕೆ ಬರಲಾಗಿದೆ ಎಂದು ಹೇಳಲಾ ಗಿದೆ. ಒಂದು ವೇಳೆ ಶಿವರಾಜ ಪಾಟೀಲ ಕಣದಲ್ಲಿ ತಟಸ್ಥರಾ ಗದಿದ್ದರೆ ಪ್ರಿಯಾಂಕ ಖರ್ಗೆ ಅವರೇ ಸ್ಪರ್ಧಾ ಕಣದಿಂದ ಹಿಂದೆ ಸರಿಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದ್ದರ ಹಿನ್ನಲೆಯಲ್ಲಿ ಮಹತ್ತರವಾದ ಈ ಬೆಳವಣಿಗೆ ನಡೆದಿದೆ ಎನ್ನಲಾ ಗಿದೆ. ಕಲಬುರ್ಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದರಿಂದ ಶಿವರಾಜ ಪಾಟೀಲರ ಗೆಲವು ನಿಶ್ಚಿತ ಎಂದೇ ಭಾವಿಸಲಾಗಿತ್ತು. ಆದರೆ ಪಕ್ಷದ ಹಿರಿಯ ನಾಯಕರು ಗಳ ದಿಢೀರ ಒತ್ತಡದ ನಿರ್ಧಾರದಿಂದ ಶಿವರಾಜ ತಟಸ್ಥರಾಗಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಮನೆ ಮಾಡಿದೆ. ವರ್ಗವೊಂದಕ್ಕೆ ಮಣೆ ಹಾಕುವ ನಿಟ್ಟಿನಲ್ಲಿ ಬಲಿಷ್ಠ ವರ್ಗಕ್ಕೆ ಅನ್ಯಾಯ ಮಾಡಿರುವ ಬಗ್ಗೆ ಪಕ್ಷದಲ್ಲಿಯೇ ಅಸಮಾಧಾನ ಉಂಟಾಗಿದೆ. ಇದು ಮುಂದಿನ ದಿನಗಳಲ್ಲಿ ಬೆಲೆ ತೆರುವ ಸಾಧ್ಯತೆಗಳಿವೆ ಎಂದು ಪಕ್ಷದ ಕಾರ್ಯಕರ್ತರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

No Comments to “ಶಿವರಾಜ ತಟಸ್ಥ : ನಾಸೀರ ಹುಸೇನ ಗೆಲುವಿನ ಹಾದಿ ಸುಗಮ”

add a comment.

Leave a Reply

You must be logged in to post a comment.