ಮೀಸಲಾತಿ ಕಡಿತ: ಸಂಚಾರಿ ಪೀಠದಿಂದ ಆದೇಶ ಬೀದರ್‌ ಜಿಲ್ಲೆಯ ಜಿ.ಪಂ.ಸದಸ್ಯರಿಗೆ ನೊಟೀಸ್‌

ಬೀದರ್‌ ಅ.೧೧ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಅಂದಿನ ಜಿ.ಪಂ.ಅಧ್ಯಕ್ಷ ನಸೀಮೊದ್ದೀನ್‌ ಪಟೇಲ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಗುಲಬರ್ಗಾ ಹೈಕೋರ್ಟ್‌ ಸಂಚಾರಿ ಪೀಠವು ಜಿಲ್ಲೆಯ ಜಿ.ಪಂ.ನ ೩೧ಸದಸ್ಯರಿಗೆ ನೊಟೀಸ್‌ ಜಾರಿ ಮಾಡಿದೆ. ರಾಜ್ಯಪಾಲರ ತಿದ್ದುಪಡಿ ಸುಗ್ರಿವಾಜ್ಞೆಯಿಂದ ಹಿಂದುಳಿದ ವರ್ಗಗಳ ಹಕ್ಕುಗಳಿಗೆ ಹೊಡೆತ ಬಿದ್ದಿದ್ದು, ನ್ಯಾಯ ಒದಗಿಸುವಂತೆ ಸಲ್ಲಿಸಿದ ಅರ್ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸದಸ್ಯರ ಅಭಿ ಪ್ರಾಯ ಆಲಿಸಲು ನೊಟೀಸ್‌ ನೀಡಿದೆ ಎಂದು ತಿಳಿದುಬಂದಿದೆ. ಕಳೆದ ಜಿ.ಪಂ. ಚುನಾವಣೆ ಸಂಬಂಧ ರಾಜ್ಯ ಪಾಲರು ಅಕ್ಟೋಬರ್‌ ೪, ೨೦೧೦ರಂದು ಸುಗ್ರಿವಾಜ್ಞೆ ಹೊರಡಿಸಿದ್ದು, ಇದರ ಬೆನ್ನಲ್ಲೇ ಜಿಲ್ಲಾ ಚುನಾವಣಾಧಿ ಕಾರಿಗಳು ನವೆಂಬರ್‌ ೮, ೨೦೧೦ರಂದು ಜಿ.ಪಂ. ಚುನಾವಣಾ ಮೀಸಲಾತಿ ಪಟ್ಟಿ ಕುರಿತು ಅಧಿಸೂಚನೆ ಹೊರಡಿಸಿದರು. ಇದನ್ನು ಪ್ರಶ್ನಿಸಿ ಅಂದಿನ ಜಿ.ಪಂ.ಅಧ್ಯಕ್ಷರಾಗಿದ್ದ ನಸೀಮೊದ್ದೀನ್‌ ಪಟೇಲ್‌ ಸಂವಿಧಾನದ ೧೩,೧೪,೧೬ರ ಅನುಚ್ಛೇದದ ಪ್ರಕಾರ ಹಿಂದುಳಿದ ವರ್ಗದ ಜನಾಂಗಕ್ಕೆ ಅನ್ಯಾಯವಾಗಿದೆ. ಅವರ ಹಕ್ಕು ಮೊಟಕು ಗೊಳಿಸಲಾಗಿದೆ ಎಂಬ ಅಂಶಗಳ ಆಧಾರದ ಮೇಲೆ ಗುಲಬರ್ಗಾ ಹೈಕೋರ್ಟ್‌ ಸಂಚಾರಿ ಪೀಠದಲ್ಲಿ ಡಿಸೆಂಬರ್‌ ೧೦, ೨೦೧೦ರಂದು ಅರ್ಜಿ ಸಲ್ಲಿಸಿದರು. ತಮ್ಮ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಸಂಸದೀಯ ವ್ಯವಹಾರಗಳ ಮತ್ತು ಸಚಿವಾಲಯ ಮತ್ತು ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಗ್ರಾಮೀಣ ಅಭಿವೃದಿಟಛಿ ಮತ್ತು ಪಂಚಾಯತ್‌ ರಾಜ್‌ ಕಾರ್ಯದರ್ಶಿ, ಜಿಲ್ಲಾಧಿ ಕಾರಿಗಳು ಹಾಗೂ ಜಿ.ಪಂ. ಸಿಇಓ ಅವರನ್ನು ಮಾಡಿದ್ದರು. ಇದೇ ಸಂಬಂಧ ಡಿಸೆಂಬರ್‌ ೧೩, ೨೦೧೦ಕ್ಕೆ ನ್ಯಾಯಾಲಯ ಪ್ರತಿವಾದಿಗಳಿಗೆ ನೊಟೀಸ್‌ ಜಾರಿಗೊಳಿಸಿದೆ. ಈಗ ಚುನಾಯಿತರಾದ ಎಲ್ಲಾ ಜಿ.ಪಂ.ನ ೩೧ ಸದಸ್ಯರಿಗೂ ಅಕ್ಟೋಬರ್‌ ೪, ೨೦೧೧ರಂದು ನೊಟೀಸ್‌ ಜಾರಿಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಗದಲ್‌ ಕ್ಷೇತ್ರದ ಜಿ.ಪಂ.ಸದಸ್ಯೆ ಕಸ್ತೂರಿಬಾಯಿ ಬೌದೆಟಛಿ, ನ್ಯಾಯಾಲಯ ಕಳುಹಿಸಿರುವ ನೊಟೀಸ್‌ ಬಂದು ತಲುಪಿದೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು. ಇತರೆ ಸದಸ್ಯರು ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ, ಇನ್ನು ಕೆಲವರು ಇಲ್ಲ, ನ್ಯಾಯಾಲ ಯದಿಂದ ನಮಗೆ ಯಾವುದೇ ರೀತಿಯ ನೊಟೀಸ್‌ ಬಂದಿಲ್ಲ. ನಾವು ನ್ಯಾಯಯುತವಾಗಿ ಗೆದ್ದು ಬಂದಿದ್ದೇವೆ. ನಮ ಸ್ಥಾನಕ್ಕೆ ಬಾಧೆಯಿಲ್ಲ ಎಂದು ಸಮಜಾಯಿಸಿ ನೀಡುತ್ತಿದ್ದಾರೆ. ಹಾಗಾಗಿ, ನೊಟೀಸ್‌ ಜಾರಿ ಸದಸ್ಯರಿಗೆ ಭಯ ಹುಟ್ಟಿಸಿದೆ ಎಂದು ಹೇಳಬಹುದು. ಈ ಅಧಿಸೂಚನೆಯಿಂದ ಬೀದರ್‌ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿದ್ದ ಹತ್ತು ಸ್ಥಾನಗಳಿಂದ ಮೂರಕ್ಕೆ ಬಂದಿಳಿದಿವೆ. ಇದು ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ನಸೀಮ್‌ ಪಟೇಲ್‌ ತಮ್ಮ ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದರು. ರಾಜ್ಯಪಾಲರ ಸುಗ್ರಿವಾಜ್ಞೆ ಹೊರಡಿಸಿದ್ದ ೬ ವಾರಗಳ ನಂತರ ಅಧಿಸೂಚನೆ ಹೊರಡಿಸಬೇಕೆಂಬ ಕಾನೂನು ನಿಯಮವಿದ್ದರೂ. ಜಿಲ್ಲಾಡಳಿತ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದೆ ಎಂದು ಅರ್ಜಿಯಲ್ಲಿ ನಮೂದಿಸಿದ್ದಾರೆ. ಅರ್ಜಿದಾರರ ಪರ ವಕೀಲ ಜಯರಾಜ್‌ ಬುಕ್ಕಾ ಹಾಗೂ ಕೆಎಂ ಘಾಟೆ ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ನ್ಯಾಯಾಲಯ ಕೂಡ ಅರ್ಜಿಯನ್ನು ಗಂಭೀ ರವಾಗಿ ಪರಿಗಣಿಸಿ ಈಗ ಸದಸ್ಯರಿಗೂ ನೊಟೀಸ್‌ ಜಾರಿ ಮಾಡಿರುವುದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಏತನ್ಮಧ್ಯೆ ಸದಸ್ಯರ ಅಭಿಪ್ರಾಯ ಆಲಿಸಲು ನ್ಯಾಯಾ ಲಯ ನೊಟೀಸ್‌ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.

One Comment to “ಮೀಸಲಾತಿ ಕಡಿತ: ಸಂಚಾರಿ ಪೀಠದಿಂದ ಆದೇಶ ಬೀದರ್‌ ಜಿಲ್ಲೆಯ ಜಿ.ಪಂ.ಸದಸ್ಯರಿಗೆ ನೊಟೀಸ್‌”

Leave a Reply

You must be logged in to post a comment.