ಜಯಂತಿಯಂದೇ ಜಗಳ !! ನೀರಮಾನ್ವಿ :ವಾಲ್ಮೀಕಿ ಸಮಾಜದ ಎರಡು ಗುಂಪುಗಳ ಮಧ್ಯೆ ಮಾರಾಮಾರಿ

ಮಾನ್ವಿ ,ಅ.೧೧ ತಾಲೂಕಿನ ನೀರಮಾನ್ವಿ ಗ್ರಾಮ ಪಂಚಾಯಿತಿ ಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಸಂದರ್ಭದಲ್ಲಿ ಎರಡು ನಾಯಕ ಸಮುದಾಯದ ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಕೆಲವರಿಗೆ ಗಾಯಗಳಾದ ಘಟನೆ ಮಂಗಳವಾರ ಜರುಗಿದೆ. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಗ್ರಾಮದ ಕೆಲ ಮುಖಂಡರು ಭಾಗವಹಿಸಿದ್ದರು ಇದೇ ಸಂದರ್ಭ ದಲ್ಲಿ ಕಾಮಗಾರಿಗೆ ಸಂಬಂಧಿಸಿದ ಚೆಕ್‌ಗೆ ಸಹಿ ಮಾಡಲು ಅಧ್ಯಕ್ಷರಿಗೆ ಒಂದು ಗುಂಪಿನವರು ಕೇಳಿಕೊಂಡಾಗ ಕಾಮಗಾರಿ ಸರಿಯಾಗಿ ಮಾಡಿಲ್ಲ ಕೊಡೋದಿಲ್ಲ ಎಂದು ಅಧ್ಯಕ್ಷ ಹೇಳಿದ್ದಾನೆ . ಕಾಮಗಾರಿ ಸರಿಯಾಗಿ ಆಗಿದೆ ಎಂದು ಪಂಚಾ ಯಿತಿಯ ಅಭಿವೃದ್ದಿ ಅಧಿಕಾರಿಗಳು ಈಗಾಗಲೇ ಚೆಕ್‌ಗೆ ಸಹಿ ಮಾಡಿದ್ದಾರೆ ಬೇರೆಯವರ ಮಾತು ಕೇಳಿ ಚೆಕ್‌ ನೀಡದಿರುವುದ ಸರಿಯಲ್ಲ ಕೂಡಲೆ ಚೆಕ್‌ಗೆ ಸಹಿ ಮಾಡಬೇಕೆಂದು ಕೇಳಿಕೊಂಡಾಗ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪೂಜೆ ಮುಗಿದ ನಂತರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ ಘರ್ಷಣೆ ಯಲ್ಲಿ ಎರಡು ಗುಂಪಿನ ಕಡೆಯವರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸಮಾಧಾನ : ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಅದೇ ಸಮುದಾಯ ದವರು ಮಾರಾಮಾರಿ ಮಾಡಿಕೊಂಡಿರುವುದು ನಾಚಿಗೇಡು ಸಂಗತಿ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

No Comments to “ಜಯಂತಿಯಂದೇ ಜಗಳ !! ನೀರಮಾನ್ವಿ :ವಾಲ್ಮೀಕಿ ಸಮಾಜದ ಎರಡು ಗುಂಪುಗಳ ಮಧ್ಯೆ ಮಾರಾಮಾರಿ”

add a comment.

Leave a Reply

You must be logged in to post a comment.