ಸಕ್ಕರೆ ಕಂಪನಿಗಳಿಂದ ಶೀಘ್ರ ವಿದ್ಯುತ್‌ ಖರೀದಿ& ಶೋಭಾ

ಬೆಂಗಳೂರು,ಅ.೧೧ ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್‌ ಸಮಸ್ಯೆ ಬಗೆಹರಿಸಲು ಇಂದು ಸಕ್ಕರೆ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದು ಅವರು ಉತ್ಪಾದಿಸುವ ವಿದ್ಯುತ್‌ ಖರೀದಿಸಲು ಚಿಂತನೆ ನಡೆದಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಆದರೆ, ಸಕ್ಕರೆ ಕಂಪನಿಗಳ ಆಡಳಿತ ಮಂಡಳಿ ಯವರು ಪ್ರತಿ ಯುನಿಟ್‌ ವಿದ್ಯುತ್‌ಗೆ ೬ರೂ..೫೦ ಪೈಸೆ ನೀಡುವಂತೆ ಒಕ್ಕೊರಲಿನ ಒತ್ತಾಯ ಮಾಡಿದ್ದು, ಈ ದರ ಅತ್ಯಂತ ದುಬಾರಿ ಎಂದು ಹೇಳಿದರು. ಈ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಹಾಗೂ ಅಧಿ ಕಾರಿಗಳೊಂದಿಗೆ ಚರ್ಚಿಸಿ ಮೂರ್ನಾ ಲ್ಕು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾ ಗುವುದು ಎಂದರು. ಸಕ್ಕರೆ ಕಾರ್ಖಾನೆಗಳೊಂದಿಗೆ ಈ ಹಿಂದೆ } ೪ನೇ ಪುಟಕ್ಕೆ ಸರ್ಕಾರಗಳು ಮಾಡಿಕೊಂಡಿರುವ ಒಪ್ಪಂದದ ರೀತ್ಯ ಸಕ್ಕರೆ ಕಾರ್ಖಾನೆಗಳು ಯುನಿಟ್‌ಗೆ ೨ ರೂಪಾಯಿ ಯಿಂದ ನಾಲ್ಕು ರೂಪಾಯಿಗಳವರೆಗೆ ವಿದ್ಯುತ್‌ ಸರಬರಾಜು ಮಾಡುತ್ತಿವೆ. ಆದರೆ ಈಗ ಎಲ್ಲರೂ ೬ರೂಪಾಯಿ ೫೦ ಪೈಸೆ ಬೇಡಿಕೆ ಮುಂದಿಟ್ಟಿದ್ದಾರೆ. ಇದು ಅತ್ಯಂತ ದುಬಾರಿ ದರ ಎಂದು ಹೇಳಿದರು. ರಾಜ್ಯದಲ್ಲಿ ವಿದ್ಯುತ್‌ ನಿರ್ವಹಣೆಯನ್ನು ಸಮ ರ್ಪಕವಾಗಿ ಮಾಡಿದರೆ, ವಿದ್ಯುತ್‌ ಕೊರತೆ ಸರಿದೂ ಗಿಸಲು ಸಾಧ್ಯ ಎಂಬ ಕಾರಣದಿಂದ ಇಂದು ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳ ಉದ್ಯಮಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್‌ ಸಮಸ್ಯೆ ಬಗ್ಗೆ ಅವರಿಗೆ ಮನ ವರಿಕೆ ಮಾಡಿಸಿದ್ದು, ವಾರದಲ್ಲಿ ಒಂದು ದಿನ ಭಾನು ವಾರ ಹೊರತು ಪಡಿಸಿ ಕೈಗಾರಿಕಾ ವಲಯಗಳಲ್ಲಿ ಘಟಕಗಳಿಗೆ ರಜೆ ನೀಡಲು ಮನವಿ ಮಾಡಲಾಗಿದೆ ಎಂದರು.

No Comments to “ಸಕ್ಕರೆ ಕಂಪನಿಗಳಿಂದ ಶೀಘ್ರ ವಿದ್ಯುತ್‌ ಖರೀದಿ& ಶೋಭಾ”

add a comment.

Leave a Reply