ರಾಮುಲುಗೆ ಸಚಿವ ಸ್ಥಾನ ಇಲ್ಲ-ಈಶ್ವರಪ್ಪ

ಬೆಂಗಳೂರು,ಅ.೧೧ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ವಿಭಿನ್ನ ಹೇಳಿಕೆಗಳನ್ನು ನೀಡಿರುವ ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ, ಪಕ್ಷದಲ್ಲಿ ತಾಳ ಮೇಳ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದ್ದಾರೆ. ನಗರದಲ್ಲಿಂದು ಪತ್ಯೇಕವಾಗಿ ಸುದ್ದಿಗಾ ರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವ ಯತೆ ಇಲ್ಲ ಎನ್ನುವುದನ್ನು ಋಜುವಾತು ಪಡಿಸಿದರು. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಆದರೆ ಪಕ್ಷದ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಮುಖ್ಯಮಂತ್ರಿ ಅಧಿ ಕಾರವನ್ನು ಕಡೆಗಣಿಸಿ ತಾವೇ ಸರ್ಕಾರ ಎನ್ನುವಂತೆ ಹೇಳಿಕೆ ನೀಡಿ ಅಚ್ಚರಿಗೊಳಿಸಿದರು. ವಿಧಾನಸೌಧದಲ್ಲಿಂದು ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡ, ರಾಜ್ಯದಲ್ಲಿ ವಿದ್ಯುತ್‌ ಕೊರತೆ, ಬರ ಸೇರಿದಂತೆ ರಾಜ್ಯ ಹಲವು ಜ್ವಲಂತ ಸಮಸ್ಯೆ ಗಳನ್ನು ಎದುರಿಸುತ್ತಿದ್ದು ಮೊದಲು ಅವನ್ನು ಪರಿಹರಿಸಲು ಆದ್ಯತೆ ನೀಡು ತ್ತೇನೆಯೇ ಹೊರತು ಸಚಿವ ಸಂಪುಟ ವಿಸ್ತರಣೆ ಯ ಬಗ್ಗೆ ಈಗ ತಲೆಕೆಡಿಸಿ ಕೊಳ್ಳುವುದಿಲ್ಲ ಎಂದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿದ ವರದಿಯ ಹಿನ್ನೆಲೆ ಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಹೇಳಿರುವ ಕುರಿತು ಪ್ರತಿಕ್ರಿಯಿ ಸಲು ಅವರು ಇಚ್ಚಿಸಲಿಲ್ಲ. ಶ್ರೀರಾಮುಲು ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಹೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹೀಗಾಗಿ ಆ ಕುರಿತು ಯಾವ ಪ್ರತಿಕ್ರಿಯೆ ಯನ್ನೂ ನೀಡಿಲ್ಲ ಎಂದರು. ಆದರೆ ಬೆಂಗಳೂರಿನಲ್ಲಿ ಸುದ್ದಿಗಾ ರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾ ಧ್ಯಕ್ಷ ಕೆ.ಎಸ್‌.ಈಶ್ವರಪ್ಪ, ನವೆಂಬರ್‌ ಮೊದಲ ವಾರ ರಾಜ್ಯ ಸಚಿವ ಸಂಪುಟ ವಿಸ್ತರಿಸುವುದಾಗಿ ಹೇಳಿದರು. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆದೇ ನಡೆಯು ತ್ತದೆ ಎಂದರು. ನವೆಂಬರ್‌ ಮೊದಲ ವಾರ ಸಚಿವ ಸಂಪುಟ ವಿಸ್ತರಣೆ ಕಾರ್ಯವಲ್ಲದೇ ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಯನ್ನೂ ಕೈಗೆತ್ತಿಕೊಳ್ಳಲಾಗುವುದು. ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಸಂಬಂಧ ಕಸರತ್ತು ಆರಂಭವಾಗಿದೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಗಣಿರೆಡ್ಡಿ ಪಡೆಯ ಪ್ರಮುಖರಲ್ಲಿ ಒಬ್ಬರಾದ ಬಿ.ಶ್ರೀರಾಮುಲು ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಸದಾನಂದಗೌಡ ನೇತೃತ್ವದ ಸಚಿವ ಸಂಪುಟಕ್ಕೆ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಯಾವ ಅನುಮಾನವೂ ಬೇಡ, ಗೊಂದಲವೂ ಬೇಡ ಎಂದು ಖಡಕ್ಕಾಗಿ ನುಡಿದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿದ ವರದಿಯಲ್ಲಿ ಸ್ಪಷ್ಟವಾಗಿ ಶ್ರೀರಾಮುಲು ಹೆಸರು ಇರುವುದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು. ಬಳ್ಳಾರಿಯ ಶಾಸಕರು ಒತ್ತಾಯಿಸಿದರು ಎಂಬ ಕಾರಣಕ್ಕೋ, ಇನ್ಯಾವುದೋ ಕಾರಣಕ್ಕೆ ಬಿ.ಶ್ರೀರಾಮುಲು ಅವರನ್ನು ತೆಗೆದು ಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

No Comments to “ರಾಮುಲುಗೆ ಸಚಿವ ಸ್ಥಾನ ಇಲ್ಲ-ಈಶ್ವರಪ್ಪ”

add a comment.

Leave a Reply

You must be logged in to post a comment.