ಉಪಾಧ್ಯಕ್ಷ ರಾಜೀನಾಮೆ ಗುಲಬರ್ಗಾ ಜಿ.ಪಂ.ಅತಂತ್ರ

ಗುಲಬರ್ಗಾ ಅ ೧೨ ಗುಲಬರ್ಗಾ ಜಿಲ್ಲಾ ಪಂಚಾಯತ್‌ ಮತ್ತೊ ಮ್ಮೆ ಅತಂತ್ರ ಸ್ಥಿತಿಗೆ ಬಂದಿದೆ. ಜಿಲ್ಲಾ ಪಂಚಾ ಯತಿಯ ಪ್ರಸಕ್ತ ಉಪಾಧ್ಯಕ್ಷ ಹರ್ಷಾನಂದ ಗುತ್ತೆದಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದರೊಂದಿಗೆ ಬಿಜೆಪಿ ಕೊಟ್ಟ ಬೆಂಬಲವನ್ನು ಸಹ ಹಿಂಪಡೆದು ಬಿಜೆಪಿಗೆ ಮುಜುಗರವನ್ನುಂಟು ಮಾಡಿದ್ದಾರೆ. ಗುಲಬರ್ಗಾ ಜಿಲ್ಲಾ ಪಂಚಾಯತಿಗೆ ೧೯ ಕಾಂಗ್ರೆಸ್ಸಿಗರು ೨೦ ಬಿಜೆಪಿ ಸದಸ್ಯರು ಹಾಗೂ ೩ಜನ ಜೆಡಿಎಸ್‌ ಸದಸ್ಯರು ಆಯ್ಕೆಗೊಂಡಿ ದ್ದರು. ಬಿಜೆಪಿ ಜೆಡಿಎಸ್‌ ಸದಸ್ಯರು ಬೆಂಬಲ ದೊಂದಿಗೆ ಜಿಲ್ಲಾ ಪಂಚಾಯತಿಯ ಆಡಳಿತ ಚುಕ್ಕಾಣಿ ತನ್ನ ಕೈಗೆ ತೆಗೆದುಕೊಂಡಿತ್ತು. ರಾಜ್ಯದ ಹಲವೆಡೆಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಎದುರಿಸಿ ದರೆ ಗುಲಬರ್ಗಾ ಜಿಲ್ಲಾ ಪಂಚಾ ಯತಿಯಲ್ಲಿ ಇದಕ್ಕೆ ತದ್ವಿರುದಟಛಿ ಎನ್ನುವಂತೆ ಕಾಂಗ್ರೆಸ್‌ ಪಕ್ಷವನ್ನು ಆಡಳಿತದಿಂದ ದೂರವಿಟ್ಟು ಬಿಜೆಪಿ&ಜೆಡಿಎಸ್‌ ಮೈತ್ರಿಕೂಟದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದವು. ಬಿಜೆಪಿಯ ಶಿವಪ್ರಭು ಪಾಟೀಲರಿಗೆ ಅಧ್ಯಕ್ಷಪಟ್ಟ ಕಟ್ಟಿ ಜೆಡಿಎಸ್‌ನ ಹರ್ಷಾನಂದ ಗುತ್ತೇದಾರರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಕಳೆದ ಹದಿನೈದು ದಿನಗಳಿಂದ ಜಿಲ್ಲಾ ಪಂಚಾಯತ ಸದಸ್ಯರಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡು ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ರಾಜಿನಾಮೆ ನೀಡಬೇಕೆಂದು

No Comments to “ಉಪಾಧ್ಯಕ್ಷ ರಾಜೀನಾಮೆ ಗುಲಬರ್ಗಾ ಜಿ.ಪಂ.ಅತಂತ್ರ”

add a comment.

Leave a Reply

You must be logged in to post a comment.