‘ಸರ್ಕಾರದಿಂದ ಬರ ನಿರ್ಲಕ್ಷ್ಯ’

ಕೊಪ್ಪಳ,ಅ.೧೨ ರಾಜ್ಯ ಸರ್ಕಾರ ಬರಗಾಲವನ್ನು ಗಂಭೀರ ವಾಗಿ ಪರಿಗಣಿಸಿಲ್ಲ, ಕುಡಿಯುವ ನೀರು, ಗೋಶಾಲೆ ತೆರೆಯುವ ಕೆಲಸ ಮಾಡುತ್ತಿಲ್ಲ, ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದಟಛ್ದಿರಾಮಯ್ಯ ಆರೋಪಿಸಿ ದರು. ಅವರು ನಗರದ ಪ್ರವಾಸಿ ಮಂದಿರ ದಲ್ಲಿ ಬುಧವಾರದಂದು ಸುದ್ದಿಗಾರ ರೊಂದಿಗೆ ಮಾತನಾಡುತ್ತ, ರಾಜ್ಯ ಕಗ್ಗತ್ತಿಲಿ ನಲ್ಲಿದೆ. ರಾಜ್ಯದ ಜನತೆಗೆ ಸಮರ್ಪಕವಾಗಿ ವಿದ್ಯುತ್‌ ನೀಡದೆ ವಿನಾಕಾರಣ ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಸುತ್ತಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ರಾಜ್ಯದಲ್ಲಿ ೮೦ ತಾಲೂಕು ಬರಪೀಡಿತ ವಾಗಿವೆ. ಬರಪೀಡಿತ ತಾಲೂಕುಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡು ತ್ತಿಲ್ಲ. ಮುಖ್ಯಮಂತ್ರಿ ಸದಾನಂದಗೌಡ ಜಿಲ್ಲಾಧಿಕಾರಿಗಳ ಬಳಿ ಹಣವಿದೆ ಎಂದು ಜಾರಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹೊಸ ಬೋರವೆಲ್‌ ಕೊರೆಯಲು ಹಣ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ೨ ಗಂಟೆ ವಿದ್ಯುತ್‌ ಸಹ ನೀಡುತ್ತಿಲ್ಲ.

No Comments to “‘ಸರ್ಕಾರದಿಂದ ಬರ ನಿರ್ಲಕ್ಷ್ಯ’”

add a comment.

Leave a Reply