ತುರ್ತು ಬರ ಪರಿಹಾರಕ್ಕೆ ಸಿದಟಛಿರಾಮಯ್ಯ ಒತ್ತಾಯ

ಬಳ್ಳಾರಿ, ಅ. ೧೨ ಬರ ಪೀಡಿತ ಪ್ರದೇಶಗಳ ರೈತರಿಗೆ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದಟಛಿರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಬುಧವಾರ ಬಳ್ಳಾರಿಗೆ ಆಗಮಿಸಿದ್ದ ಅವರು, ಹಲಕುಂದಿ ಗ್ರಾಮದ ಬಳಿ ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಅಭಾವದಿಂದ ಬೆಳೆಗಳು ಒಣಗಿ ಹೋಗಿ ರುವ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಅವರು ಈ ಒತ್ತಾಯ ಮಾಡಿದರು. ಜಮೀನುಗಳಿಗೆ ಭೇಟಿ ನೀಡಿದ್ದ ಸಿದಟಛಿರಾಮಯ್ಯ ಅವರ ಬಳಿ ರೈತರು ತಮ್ಮ ಅಹವಾಲುಗಳನ್ನು ತೋಡಿಕೊಂಡರು. ರೈತರಿಗೆ ಸಾಂತ್ವನ ಹೇಳಿದ ಸಿದಟಛಿರಾಮಯ್ಯ, ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸುವುದಾಗಿ ಹೇಳಿದರು. ತಹಸೀಲ್ದಾರ್‌ ಶಶಿಧರ ಬಗಲಿ, ಕೃಷಿ ಅಧಿಕಾರಿ ರಾಘವೇಂದ್ರ ಅವರಿಂದ ಸಿದಟಛಿರಾಮಯ್ಯ ಅಗತ್ಯ ಮಾಹಿತಿ ಪಡೆದರು.

No Comments to “ತುರ್ತು ಬರ ಪರಿಹಾರಕ್ಕೆ ಸಿದಟಛಿರಾಮಯ್ಯ ಒತ್ತಾಯ”

add a comment.

Leave a Reply