ಉ.ಖಾ: ೬೦ ಕೋ.ಖರ್ಚು, ಗೋಲ್‌ಮಾಲ್‌?

ರಾಯಚೂರು,ಅ.೧೨ ರಾಯಚೂರು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ದಿನ ಕ್ಕೊಂದು ಹಗರಣಗಳು ಬಯಲು ಆಗು ತ್ತಿದ್ದು, ಈ ಯೋಜನೆಯ ಸಮಗ್ರ ಕಾಯ ಕಲ್ಪಕ್ಕಾಗಿ ಜಿ.ಪಂ. ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ಸಿದಟಛಿತೆ ನಡೆಸಿದ್ದಾರೆ. ಜಿಲ್ಲೆಗೆ ಪ್ರಸ್ತುತ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ೭೬ ಕೋ. ೧೦ ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಪೈಕಿ ೫೯ ಕೋ. ೭೮ ಲಕ್ಷ ಅಕ್ಟೋಬರ್‌ ಅಂತ್ಯಕ್ಕೆ ಖರ್ಚಾ ಗಿದೆ. ಕಳೆದ ವರ್ಷದ ೧೧ ಕೋ. ೩೮ ಲಕ್ಷ ರೂ. ಬಾಕಿ ಸೇರಿ ಈ ವರ್ಷ ೬೪ ಕೋ. ೭೨ ಲಕ್ಷ ರೂ. ಸೇರಿ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಲು ಏ. ೧ ಕ್ಕೆ ೭೬ ಕೋ. ೧೦ ಲಕ್ಷ ಲಭ್ಯವಿತ್ತು. ಕಳೆದ ೭ ತಿಂಗಳಲ್ಲಿ ಈ ಯೋಜನೆಯಡಿ ೫೬ ಕೋ. ೭೮ ಲಕ್ಷ ರೂ. ಖರ್ಚು ಮಾಡಲಾಗಿದೆ. ದೇವದುರ್ಗ ತಾಲೂಕದಲ್ಲಿ ೪ ಕೋ. ೬೯ ಲಕ್ಷ , ಲಿಂಗಸೂಗೂರು ತಾಲೂಕಿನಲ್ಲಿ ೧೭ ಕೋ. ೯೬ ಲಕ್ಷ™, ಮಾನ್ವಿ ತಾಲೂಕಿನಲ್ಲಿ ೧೪ ಕೋ. ೫೧ ಲಕ್ಷ™, ರಾಯಚೂರು ತಾಲುಕಿನಲ್ಲಿ ೧೦ ಕೋ. ೨೧ ಲಕ್ಷ, ಸಿಂಧನೂರು ತಾಲೂಕಿ ನಲ್ಲಿ ೧೨ ಕೋ. ೩೯ ಲಕ್ಷ ಖರ್ಚಾಗಿದೆ. ಈ ಯೋಜನೆಯಡಿ ದೇವದುರ್ಗ ತಾಲೂ ಕಿನಲ್ಲಿ ೩೮ ಸಾವಿರ ೮೧೦ ಉದ್ಯೋಗ ಚೀಟಿಗಳಿದ್ದು™, ೧೪ ಸಾವಿರದ ೫೯೯ ಜನ ಉದ್ಯೋಗಕ್ಕಾಗಿ ಅರ್ಜಿ ನೀಡಿದ್ದು™, ಅವರಿಗೆ ೭೯ ಸಾವಿ ರದ ೧೨೧ ಮಾನವ ದಿನಗಳ ನ್ನು ಸೃಷ್ಟಿಸಿ ಉದ್ಯೋಗ ನೀಡಲಾಗಿದೆ. ಲಿಂಗಸೂಗೂರು ತಾಲೂಕಿನಲ್ಲಿ ೪೬ ಸಾವಿರದ ೪೮೬ ಉದ್ಯೋಗ ಚೀಟಿ ವಿತರಿಸಲಾಗಿದ್ದು, ಈ ಪೈಕಿ ೧೧ ಸಾವಿರ ದ ೭೬೯ ಜನ ಉದ್ಯೋಗ ಕೋರಿ ಅರ್ಜಿ ಸಲ್ಲಿ ಸಿದ್ದು™, ಅವರಿಗೆ ೬೮ ಸಾವಿರದ ೮೪೪ ದಿನ ಉದ್ಯೋಗ ನೀಡಲಾಗಿದೆ. ಮಾನ್ವಿ ತಾಲೂಕಿನ ೪೫ ಸಾವಿರದ ೧೧೦ ಉದ್ಯೋಗ ಚೀಟಿ ವಿತರಿಸಲಾಗಿದ್ದು™, ೨೦ ಸಾವಿರದ ೪೭ ಜನ ಉ ದ್ಯೋಗಕ್ಕೆ ಅರ್ಜಿ ನೀಡಿ ದ್ದು™, ಅವರಿಗೆ ೮೬ ಸಾವಿರ ದ ೬೧೦ ದಿನ ಉದ್ಯೋಗ ನೀಡಲಾಗಿದೆ. ರಾಯಚೂರು ತಾಲೂ ಕಿನಲ್ಲಿ ೨೯ ಸಾವಿರದ ೨೫೦ ಉದ್ಯೋಗ ಚೀಟಿ ವಿತರಿಸಲಾಗಿದ್ದು, ೧೬ ಸಾವಿರದ ೪೮೩ ಜನ ಉದ್ಯೋಗಕ್ಕೆ ಅರ್ಜಿ ನೀಡಿದ್ದು™, ಅವರಿಗೆ ೧ ಲಕ್ಷ ೬೫ ಸಾವಿರದ ೯೪೪ ದಿನ ಉದ್ಯೋಗ ಕಲಿ ್ಪಸಲಾಗಿದೆ. ಸಿಂಧನೂರು ತಾಲೂಕಿನಲ್ಲಿ ೪೨ ಸಾವಿರ ದ ೨೫೮ ಉದ್ಯೋಗ ಚೀಟಿ ವಿತರಿಸಲಾ ಗಿದ್ದು, ಈ ಪೈಕಿ ೧೧ ಸಾವಿರದ ೧೭೪ ಜನ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ್ದು™, ಅವ ರಿಗೆ ೮೨ ಸಾವಿರದ ೨೨೭ ದಿನ ಉದ್ಯೋಗ ನೀಡಲಾಗಿದೆ. ಜಿಲ್ಲೆಯಲ್ಲಿ ಏಳು ತಿಂಗಳಲ್ಲಿ ೫೯ ಕೋಟಿ ೭೦ ಲಕ್ಷ ಹಣ ಖರ್ಚು ಮಾಡಿ ೪ ಲಕ್ಷ ೮೪ ಸಾವಿರ ೭೪೬ ದಿನ ಉದ್ಯೋಗ ನೀಡ ಲಾಗಿದೆ.

No Comments to “ಉ.ಖಾ: ೬೦ ಕೋ.ಖರ್ಚು, ಗೋಲ್‌ಮಾಲ್‌?”

add a comment.

Leave a Reply

You must be logged in to post a comment.