ನಗರದಲ್ಲಿ ನೀರಿನ ಅಭಾವ: ನಗರಸಭೆ ಮುತ್ತಿಗೆ ಎಚ್ಚರಿಕೆ

https://www.viagrasansordonnancefr.com/viagra-naturel/

ರಾಯಚೂರು ಅ.೧೨ ನಗರದ ಸಿಯಾತಲಾಬ್‌, ಎಲ್‌ಬಿಎಸ್‌ ನಗರ, ರಾಜೇಂದ್ರ ಗಂಜ್‌, ಮುನ್ನುರು ವಾಡಿಯ ಭಾಗಶಃ ಏರಿಯಾದಲ್ಲಿ ಕಳೆದ ನಾಲ್ಕು ದಿನಗಳಿಂದ ಕುಡಿಯವ ನೀರಿನ ಪೂರೈಕೆ ಇಲ್ಲದೆ ಸಮಸ್ಯೆ ಎದುರಾಗಿದೆ. ಈ ಏರಿಯಾಗಳಿಗೆ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡುವ ವಿದ್ಯುತ್‌ ಮೋಟಾರ್‌ ಸುಟ್ಟು ಹೋಗಿ ನೀರು ಪೂರೈಕೆ ಸ್ಥಗಿತಗೊಂಡರೂ ನಗರಸಭೆ ಯಾವುದೇ ಪರ್ಯಾಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಜನರು ನೀರಿಗಾಗಿ ಪರದಾಡು ತ್ತಿದ್ದಾರೆ. ಟ್ಯಾಂಕರ್‌ ಮೂಲಕ ನೀರು ಸರಬ ರಾಜು ಮಾಡಲಾಗುತ್ತಿದೆ ಆದರೂ ಅದು ಕೆಲವೇ ಮನೆಗಳಿಗೆ ಸೀಮಿತವಾಗಿ ದ್ದರಿಂದ ಜನ ಸಾಮಾನ್ಯರು ನೀರಿಗಾಗಿ ದಯನೀಯ ಸ್ಥಿತಿಯಿಂದ ತೊಳಲಾಡುತ್ತಿದ್ದಾರೆ. ನಾಲ್ಕು ದಿನಗಳಿಂದ ಮೋಟರ್‌ ಸುಟ್ಟು ಹೋದರೂ

ದುರಸ್ತಿ ಬಗ್ಗೆ ನಗರಸಭೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಕುರಿತು ಪ್ರಶ್ನಿಸಿದಾಗ ನಗರಸಭೆಯ ಅಭಿಯಂತರುಗಳೆಲ್ಲರೂ ಪ್ರವಾಸಕ್ಕೆ ತೆರಳಿ ದ್ದಾರೆ ಎಂದು ಬೇಜವಾಬ್ದಾರಿ ಉತ್ತರ ನೀಡಲಾಗುತ್ತಿದೆ. ನಿರಂತರ ನೀರು ಸರಬರಾಜಿಗೆ ತೊಂದರೆಯಾ ಗದಂತೆ ಹೆಚ್ಚುವರಿಯಾಗಿ ಮೋಟರ್‌ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ನಗರಸಭೆ ಆಯುಕ್ತರು ಮತ್ತು ಅಭಿಯಂತರರು ಲಕ್ಷ್ಯವಹಿಸದೇ ಕರ್ತವ್ಯ ಲೋಪವೆಸಗಿದ್ದಾರೆ. ನಾಳೆ ಈ ಭಾಗದಲ್ಲಿ ನೀರು ಸರಬರಾಜು ಆಗಿದಿದ್ದರೆ ಅಲ್ಲಿನ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.

No Comments to “ನಗರದಲ್ಲಿ ನೀರಿನ ಅಭಾವ: ನಗರಸಭೆ ಮುತ್ತಿಗೆ ಎಚ್ಚರಿಕೆ”

add a comment.

Leave a Reply

You must be logged in to post a comment.