ರಾಮುಲು ರಾಜೀನಾಮೆ ಅಂಗೀಕಾರ;ನಡೆ ನಿಗೂಢ

ಬೆಂಗಳೂರು,ಅ,೧೩ ಅಕ್ರಮ ಗಣಿಗಾರಿಕೆ ಕುರಿತು ಲೋಕಾ ಯುಕ್ತರು ನೀಡಿದ ವರದಿಯಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ಸೇರಿಸಲಾಗಿದೆ. ಇದರಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ರಾಜೀನಾಮೆ ಯನ್ನು ಇಂದು ಅಂಗೀಕರಿಸಲಾಗಿದೆ. ಕಳೆದ ತಿಂಗಳ ನಾಲ್ಕರಂದು ಬಿ.ಶ್ರೀರಾಮುಲು ಅವರು ಮಡಿಕೇರಿಗೆ ತೆರಳಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ನೀಡಿದ್ದರು. ಇಂದು ಶ್ರೀರಾಮುಲು ಅವರ ರಾಜೀನಾಮೆ ಯನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸಿ ದ್ದಾರೆ.
…………………..
ಬಳ್ಳಾರಿ ಅ.೧೦& ರಾಮುಲು ರಾಜೀನಾಮೆ ಅಂಗೀಕಾರವದಾ ತಕ್ಷಣ ಕುಟೀರದಲ್ಲಿ ಸುದ್ದಿ ಗೋಷ್ಠಿನಡೆಸಿ ಮಾತನಾಡಿದ ಮಾಜಿ ಸಚಿವ ಶ್ರೀರಾಮಲು ಅವರು, ಮುಂದೆ ತಮ್ಮ ನಡೆಯ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸದೆ ಹಲವು ಅನುಮಾನ ಕ್ಕೆ ಎಡೆ ಮಾಡಿಕೊ ಟ್ಟಿದ್ದಾರೆ. ಲೋಕಾಯುಕ್ತ ವರದಿಯಲ್ಲಿ ತನ್ನ ಹೆಸರು ಪ್ರಸ್ತಾಪವಾ ಗಿದ್ದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು. ನಾನು ಎಂದೂ ಕೊಟ್ಟ ಮಾತಿಗೆ ತಪ್ಪುವವನಲ್ಲ. ಬೇಕಾದರೆ ಪ್ರಾಣ ಕೊಟ್ಟೇನೇ ಹೊರತು ಕೊಟ್ಟ ಭಾಷೆಗೆ ತಪ್ಪಿ

ನಡೆಯುವವನಲ್ಲ. ಸ್ವಾಭಿಮಾನ ಅಂದರೆ ಶ್ರೀರಾಮುಲು, ಶ್ರೀರಾಮುಲು ಎಂದರೆ ಸ್ವಾಭಿಮಾನ ಎಂದೇ ನನ್ನ ಜನ ಮತ್ತು ಅಭಿಮನಿಗಳು ಕಲೆದ ೨೫ ವರ್ಷಗಳ ನನ್ನ https://www.acheterviagrafr24.com/ ರಾಜಕೀಯ ಬದುಕಿನಲ್ಲಿ ನಂಬಿದ್ದಾರೆ. ಅದನ್ನು ಯಾವತ್ತೂ ಹುಸಿಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನೆಂದೂ ಸರ್ಕಾರ ಬೀಳಿಸುವ ಕೆಲಸ ಮಾಡುವವನಲ್ಲ. ನಾನು ಕಟ್ಟುವವನೇ ಹೊರತು ಬೀಳಿಸುವನಲ್ಲ.

ನಾನು ರಾಜೀನಾಮೆ ನೀಡಿದ ದಿನವೇ ಇತರೆ ಎಲ್ಲಾ ಶಾಸಕರಲ್ಲಿ

ಚಮನವಿ ಮಾಡಿ, ಯಾರೂ ರಾಜೀನಾಮೆ ನೀಡಕೂಡದು. ಬಿಜೆಪಿ ಸರ್ಕಾರ ಐದು ವರ್ಷಗಳನ್ನು ಸಂಪೂರ್ಣ ಮಾಡಬೇಕು ಎಂದು ಹೇಳಿದ್ದೆ. ನಾನು ಮತ್ತೆ ಜನಾದೇಶ ಪಡೆಯುತ್ತೇನೆ ಎಂದರು. ಎರಡುಮೂರು ದಿನಗಳಲ್ಲಿ ನನ್ನ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ನೀವು ಹೇಳಿದ್ದರೂ, ಅದಕ್ಕೂ ಮುನ್ನವೇ ನಿಮ್ಮ ರಾಜೀನಾಮೆಯನ್ನು ತರಾತುರಿಯಲ್ಲಿ ಅಂಗೀಕರಿಸಲು ಕಾರಣವೇನು ಎಂಬ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಲಿಲ್ಲ. ಒಂದು ವೇಳೆ ಉಪ ಚುನಾವಣೆಗೆ ಬಿಜೆಪಿ ಟಿಕೆಟ್‌ ನೀಡಲು ನಿರಾಕರಿಸಿದರೆ ಪಕ್ಷೇತರರಾಗಿ ಸ್ಪರ್ಧಿಸಲಿದ್ದೀರಾ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಲಿಲ್ಲ. ನಾನು ಇಂದಿಗೂ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ. ನಾನು ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ. ಇನ್ನು ಮುಂದಿನ ರಾಜಕೀಯದ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಿದ್ದೇನೆ ಎಂದು ಶ್ರೀರಾಮುಲು ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ವಕ್ತಾರ ಸಂಜಯ್‌ ಬೆಟಗೇರಿ, ವೀರಶೇಖರರೆಡ್ಡಿ, ಶಾಮಸುಂದರ್‌

ಮತ್ತಿತರರು ಹಾಜರಿದ್ದರು.

No Comments to “ರಾಮುಲು ರಾಜೀನಾಮೆ ಅಂಗೀಕಾರ;ನಡೆ ನಿಗೂಢ”

add a comment.

Leave a Reply

You must be logged in to post a comment.