ಇಂದು ಬಳ್ಳಾರಿಗೆ ಜಾರಕಿಹೊಳಿ ಬರ, ಪ್ರಗತಿ ಪರಿಶೀಲನೆ

ಬಳ್ಳಾರಿ ಅ.೧೬ ಅಂತೂ ಇಂತೂ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಬಾಲಚಂದ್ರ ಜಾರಕಿಹೊಳಿ ಬಳ್ಳಾರಿಗರಿಗೆ ದರ್ಶನ ಭಾಗ್ಯ ನೀಡಲಿದ್ದಾರೆ ಎಂಬ ಸಂತಸದ ಸುದ್ದಿಯೊಂದು ತಲುಪಿ ಜನ ಪುಳಕಿತರಾಗಿದ್ದಾರೆ. ಮುಖ್ಯಮಂತ್ರಿ ಸದಾನಂದ ಗೌಡರ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯ ಉಸ್ತುವಾರಿಯಾಗಿದ್ದರೂ ಜಿಲ್ಲೆಯ ಜನತೆಗೆ ಅವರ ದರ್ಶನ ದೊರೆತಿರಲಿಲ್ಲ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಎಲ್‌. ಜಾರಕಿಹೊಳಿ ಅವರು ಅ. ೧೭ ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ ೯&೩೦ಕ್ಕೆ ಬಳ್ಳಾರಿ ನಗರಕ್ಕೆ ಆಗಮಿಸಿ, ೧೧&೧೫ಕ್ಕೆ ಜಿಲ್ಲಾ ಪಂಚಾಯ್ತಿಯ ನಜೀರ್‌ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇತರ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಬರಪೀಡಿತ ತಾಲೂಕ ಪರಿಹಾರ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ. ನಂತರ ಮಧ್ಯಾಹ್ನ ೩&೩೦ರಿಂದ ಸಂಜೆ ೬&೦೦ ಗಂಟೆಯ ವರೆಗೆ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ವಿಚಾರಣೆ ನಡೆಸಲಿದ್ದಾರೆ. ನಂತರ ರಾಯಚೂರಿಗೆ ನಿರ್ಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಮಧ್ಯೆ ಮಧ್ಯಾಹ್ನ ೨&೧೫ ಗಂಟೆಗೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಎಚ್ಚೆೆತ್ಚೆತ್ಚತ್ತ ್ತ ಸಚಿಚಿಚಿವರರರುುು:ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕೈಕೊಟ್ಟು ಭೀಕರ ಕ್ಷಾಮ ತಲೆದೋರಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾರಕಿಹೊಳಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದಟಛಿರಾಮಯ್ಯ

ಅವರು ಇತ್ತೀಚೆಗೆ ಬಳ್ಳಾರಿಗೆ ಆಗಮಿಸಿ ಬರ ಪ್ರದೇಶಗಳ ಪರಿಶೀಲನೆ ನಡೆಸಿ ಹೋದ ನಂತರವಾದರೂ ಎಚ್ಚೆತ್ತುಕೊಂಡು ನಾಳೆ ಇಲ್ಲಿಗೆ ಬರುತ್ತಿರುವುದು ನಮ್ಮ ಜನರ ಪುಣ್ಯ ಎಂದೇ ಭಾವಿಸಲಾಗಿದೆ! ಬಾಯಲ್ಲಿ ಯಾರು ಏನೇ ಹೇಳಿದರೂ ಜಾತಿ, ಹಣದ ಆಧಾರದ ಮೇಲೆಯೇ ನಡೆಯುವ ನಮ್ಮ ಸರ್ಕಾರಗಳು ಪ್ರತಿಯೊಂದರಲ್ಲೂ ಜಾತಿ ಲೆಕ್ಕಾಚಾರ ಹಾಕಿಯೇ ಕಾರ್ಯಕ್ರಮಗಳನ್ನು ರೂಪಿಸುವುದು ಹೊಸತೇನಲ್ಲ. ಆ ಹಿನ್ನೆಲೆಯಲ್ಲಿಯೇ ಬಳ್ಳಾರಿ ಜಿಲ್ಲೆಗೆ ಜಾರಕಿಹೊಳಿ ಅವರೇ ಸೂಕ್ತ ಉಸ್ತುವಾರಿಯಾಗಬಲ್ಲರು ಎಂದು ನಿರ್ಧರಿಸಿಯೇ ಮುಖ್ಯಮಂತ್ರಿ ಸದಾನಂದಗೌಡರು ಇವರನ್ನು ಜಿಲ್ಲೆಗೆ ನೇಮಿಸಿದ್ದರು. ಆದರೆ ಜಿಲ್ಲೆಯ ಹೊಣೆ ಹೊತ್ತು ಎರಡು ತಿಂಗಳು ಕಳೆದರೂ ಇತ್ತ ಮುಖ ಮಾಡಿರದಿದ್ದ ಜಾರಕಿಹೊಳಿ ಸಾಹೇಬರು ಅಂತೂ ಜಿಲ್ಲೆಗೆ ಆಗಮಿಸುತ್ತಿರುವುದು ಸಂತಸದ ವಿಷಯ.

No Comments to “ಇಂದು ಬಳ್ಳಾರಿಗೆ ಜಾರಕಿಹೊಳಿ ಬರ, ಪ್ರಗತಿ ಪರಿಶೀಲನೆ”

add a comment.

Leave a Reply

You must be logged in to post a comment.