ಸರಕಾರಿ ನೌಕರರಿಗೆ ಶೇ.೩೦ ರಷ್ಟು ಮಧ್ಯಂತರ ಪರಿಹಾರ ನೀಡಲು ಶಂಭುಲಿಂಗನಗೌಡ ಒತ್ತಾಯ

ಕೊಪ್ಪಳ,,ಅ.೧೬ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳು ಹಾಗೂ ಇತರೆ ಸೌಲಭ್ಯಗಳಲ್ಲಿ ಉಂಟಾಗಿರುವ ತಾರತಮ್ಯ ವನ್ನು ನಿವಾರಿಸಿ ಸರಕಾರಿ ನೌಕರರಿಗೆ ಶೇ.೩೦ ರಷ್ಟು ಮಧ್ಯಂತರ ಪರಿಹಾರ ನೀಡಬೇಕೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭು ಲಿಂಗನಗೌಡ ಪಾಟೀಲ್‌ ಹಲ ಗೇರಿ ರಾಜ್ಯ ಸರ್ಕಾರವನ್ನು ಒತ್ತಾಯಿ ಸಿದ್ದಾರೆ. ಅವರು ನಗರದ ವಾರ್ತಾ ಭವನದಲ್ಲಿ ರವಿವಾರದಂದು ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸರಕಾರಿ ನೌಕರರಿಗೆ ಶೇ.೩೦ ರಷ್ಟು ಮಧ್ಯಂತರ ಪರಿಹಾರ ನೀಡಲು ಶಂಭುಲಿಂಗನಗೌಡ ಒತ್ತಾಯ ವೇತನ ತಾರತಮ್ಯದ ಬಗ್ಗೆ ಹಿಂದಿನ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಹಲವು ಸುತ್ತಿನ ಮಾತುಕತೆಯ ಫಲವಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ ಪರಿಷ್ಕರಣೆ ಸುಬೀರ್‌ ಹರಿಸಿಂಗ್‌ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ವೇತನ ಸಮಿತಿಯನ್ನು ರಚಿಸಿ ೯ ತಿಂಗಳ ಕಾಲಾವಕಾಶ ಪಡೆದು ಸಮಿತಿಯು ವರದಿ ನೀಡಲು

ವಿಳಂಬವಾಗಿರುವ ಹಿನ್ನಲೆಯಲ್ಲಿ ಶೇ.೩೦ ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಸಮಗ್ರ ವರದಿಯನ್ನು ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಸಕರಾತ್ಮಕ ವಾಗಿ ಸ್ಪಂದಿಸಿ ಕೊಪ್ಪಳ ಉಪಚುನಾವಣೆ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿ ದ್ದರು. ಕೂಡಲೇ ಮುಖ್ಯ ಮಂತ್ರಿಗಳು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರಿ ನೌಕರರ ವೇತನಗಳಿಗೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ಮಾದರಿ ಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಬೇಕು. ಸರಕಾರಿ ನೌಕರರಿಗೆ ಆರೋಗ್ಯ ಭಾಗ್ಯ ವಿಮೆ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿ.ಎಫ್‌. ಬೀರನಾಯ್ಕರ್‌, tadalafil generique cialis ವಾರ್ತಾಧಿಕಾರಿ ತುಕರಾಂ ಬಿ.ವಿ., ಶಿಕ್ಷಕ ಮಂಜುನಾಥ ಗೌಡ ಮತ್ತಿತರರು ಉಪಸ್ಥಿತರಿ ದ್ದರು.

No Comments to “ಸರಕಾರಿ ನೌಕರರಿಗೆ ಶೇ.೩೦ ರಷ್ಟು ಮಧ್ಯಂತರ ಪರಿಹಾರ ನೀಡಲು ಶಂಭುಲಿಂಗನಗೌಡ ಒತ್ತಾಯ”

add a comment.

Leave a Reply

You must be logged in to post a comment.