ರಾಜ್ಯ ಸರ್ಕಾರ ವಜಾಕ್ಕೆ ಸಿದಟಛಿರಾಮಯ್ಯ ಒತ್ತಾಯ

ಬೆಂಗಳೂರು ,

ಅ.೧೬ ರಾಜ್ಯ ಬಿಜೆಪಿ ಸರ್ಕಾರ ವ್ಯಾಪಕ ಭ್ರಷ್ಟಾಚಾ ರದಲ್ಲಿ ಮುಳುಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೊದಲಾದವರು ಜೈಲು ಸೇರಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರವನ್ನು ಕೂಡಲೇ ವಜಾಗೊಳಿ ಸಬೇಕೆಂದು ಕಾಂಗ್ರೆಸ್‌ ಪಕ್ಷ ರಾಜ್ಯಪಾಲರಿಗೆ ಒತ್ತಾಯಿಸಿದೆ. ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರನ್ನು ಇಂದು ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನೈತಿಕತೆಯೇ ಇಲ್ಲದ

ಬಿಜೆಪಿಗೆ ಅಧಿಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ ಎಂದರು. ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾ ಗಿದ್ದು, ಆ ಪಕ್ಷ ಅಧಿಕಾರದಲ್ಲಿ ಮುಂದು ವರಿಯುವ ಅರ್ಹತೆಯನ್ನೇ ಕಳೆದುಕೊ ಂಡಿದೆ. ಹಾಗಾಗಿ ಈ ಸರ್ಕಾರವನ್ನು ವಜಾಗೊಳಿಸುವುದೇ ಸೂಕ್ತ ಪರಿಹಾರ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಸಿದ್ದಾಗಿ ಹೇಳಿದರು. ಇಂದಿನ ಸದಾನಂದಗೌಡರ ಸರ್ಕಾರದಲ್ಲಿ ಇರುವವರೆಲ್ಲರೂ ಹಿಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿದ್ದ ಸಚಿವರುಗಳೇ ಆಗಿದ್ದಾರೆ. ಅವರಿಂದಲೇ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಆ ಎಲ್ಲ ಜವಾಬ್ದಾರಿಯನ್ನೂ ಇಂದಿನ ಸರ್ಕಾರ ಹೊರಬೇಕಾಗುತ್ತದೆ. ಹಿಂದಿನ ಸರ್ಕಾರದಲ್ಲಿ ಭೂ ಹಗರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಭಾರೀ ಪ್ರಮಾಣದಲ್ಲಿ ನಡೆದಿದೆ ಎಂದರು.

No Comments to “ರಾಜ್ಯ ಸರ್ಕಾರ ವಜಾಕ್ಕೆ ಸಿದಟಛಿರಾಮಯ್ಯ ಒತ್ತಾಯ”

add a comment.

Leave a Reply

You must be logged in to post a comment.