ಬರ ಪರಿಹಾರ ಕಾರ್ಯ ಚುರುಕುಗೊಳಿಸಲು ಸಚಿವ ಜಾರಕಿಹೊಳಿ ಸೂಚನೆ

ಬಳ್ಳಾರಿ ಅ.೧೭
ಜಿಲ್ಲೆಯ ಎಲ್ಲಾ ತಾಲೂಕುಗಳನ್ನು
ಈಗಾಗಲೇ ಬರಪೀಡಿತ ತಾಲೂಕುಗಳು
ಎಂದು ಪರಿಗಣಿಸಲಾಗಿದ್ದು, ಜಿಲ್ಲೆಯಲ್ಲಿ
ಕುಡಿಯುವ ನೀರು, ಜಾನುವಾರುಗಳ
ಮೇವಿಗೆ ಯಾವುದೇ ತೊಂದರೆಯಾಗ
ದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳ
ಬೇಕು ಎಂದು ಪೌರಾಡಳಿತ ಮತ್ತು
ಸಾರ್ವಜನಿಕ ಉದ್ದಿಮೆಗಳ ಸಚಿವ
ಬಾಲಚಂದ್ರ ಜಾರಕಿಹೊಳಿ ಅಧಿಕಾರಿ
ಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ
ಸೋಮವಾರ ನಡೆದ ಜಿಲ್ಲೆಯ ಬರ
ಪೀಡಿತ ತಾಲೂಕುಗಳ ಪರಿಹಾರ ಪ್ರಗತಿ
ಪರಿಶೀಲನಾ ಸಭೆಯಲ್ಲಿ ಮಾತನಾಡಿದ
ಅವರು, ಹೂವಿನಹಡಗಲಿ ತಾಲ್ಲೂಕನ್ನು
ಬರಪೀಡಿತ ಎಂದೇ ಪರಿಗಣಿಸಲಾಗಿ
ದ್ದು, ಶೀಘ್ರದಲ್ಲೇ ಅಧಿಕೃತವಾಗಿ ಘೊಷಿ
ಸಲಾಗುವುದು ಎಂದರು. ಇನ್ನುಳಿದ
ತಾಲೂಕುಗಳನ್ನು ಈಗಾಗಲೇ ಘೊಷಿಸ
ಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೇವಲ ೨೫.೩ ಮಿ.ಮಿ

ಮಳೆಯಾಗಿದೆ.
ಮಳೆ ಕೊರತೆಯಿಂದಾ ಗಿ
೧,೪೫,೧೫೦ ಹೆಕ್ಟೇರ್‌ ಪ್ರದೇಶದಲ್ಲಿ
ಮಳೆಯಾಶ್ರಿತ ಬೆಳೆಗಳು ಹಾನಿಗೊಳ
ಗಾಗಿವೆ. ಸದ್ಯ ೭,೨೮,೩೬೮ ಟನ್‌
ಮೇವಿನ ದಾಸ್ತಾನಿದ್ದು, ಇನ್ನು ೩ ತಿಂಗಳ
ಅವಧಿಗೆ ಜಾನುವಾರುಗಳಿಗೆ ತೊಂದರೆ
ಯಿಲ್ಲ. ಆದರೂ ಕುಡಿಯುವ ನೀರು
ಮತ್ತು ಮೇವಿನ ಬಗ್ಗೆ ಮುಂಜಾಗ್ರತಾ
ಕ್ರಮ ಕೈಗೊಳ್ಳಬೇಕು.
ಅಧಿಕಾರಿಗಳು ಜನಪ್ರತಿನಿಧಿಗಳ
ಸಹಕಾರದೊಂದಿಗೆ ಶೀಘ್ರ ಕ್ರಿಯಾ
ಯೋಜನೆಗಳನ್ನು ಸಿದ್ದಪ ಡಿಸಬೇಕು.
ಉದ್ಯೋಗ ಖಾತ್ರಿ ಯೋಜ ನೆಯಡಿ
ಶೇ. ೧೦ರಷ್ಟು ಅನುದಾನ ಮತ್ತು
ಕಾಮಗಾರಿಗಳನ್ನು ಬರ ಪರಿಹಾರ
ಕಾಮಗಾರಿಗಳಿಗೆ ಮೀಸಲಿಡ ಬೇಕು.
ಹೆಚ್ಚುವರಿ ಕಾಮಗಾರಿ ಕೈಗೊಳ್ಳಲು
ಕ್ರಿಯಾ ಯೋಜನೆ ಅಗತ್ಯ.
ಕೂಲಿಕಾರರಿಗೆ ವೇತನವನ್ನು ಶೀಘ್ರವೇ
ಪಾವತಿಸಬೇಕು.
ಬರಪರಿಹಾರ ಕಾಮ ಗಾರಿಗಳನ್ನು
ಗಂಭೀರವಾಗಿ ಪರಿಗಣಿಸ ಬೇಕು
ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಗಳ
ಮೇಲೆ ಶಿಸ್ತು ಕ್ರಮ ಜರುಗಿಸ
ಲಾಗುವುದು ಎಂದು ಎಚ್ಚರಿಸಿದರು.
ಹಿಂಗಾರಿನಲ್ಲಿ ಕೆಲವೆಡೆ ಮಳೆಯಾ
ಗಿದ್ದು, ರೈತರಿಗೆ ಬಿತ್ತನೆ ಬೀಜ ಮತ್ತು
ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ
ವಿತರಿಸಲಾಗುತ್ತಿದೆ. ಸುವರ್ಣ ಭೂಮಿ
ಯೋಜನೆಯಡಿ ೧೬,೯೭೭ ಫಲಾನು
ಭವಿಗಳಿಗೆ ೬೭೭ ಲಕ್ಷ ರೂ. ಪ್ರೋತ್ಸಾಹ
ಧನವನ್ನು ನೀಡಲಾಗಿದೆ ಎಂದರು.
ಮಹಾನಗರ ಪಾಲಿಕೆಗೆ ೨ ನೇ
ಹಂತದಲ್ಲಿ

ಮಂಜೂರಾಗಿರುವ ೧೦೦
ಕೋಟಿ ರೂ ಅನುದಾನದಡಿ ಶೀಘ್ರವಾಗಿ
ಕಾಮಗಾರಿಗಳನ್ನು ಕೈಗೊಳ್ಳಲು
ಕ್ರಮಕೈಗೊಳ್ಳಲಾಗುವುದು.
ಮಹಾ ನಗರ ಪಾಲಿಕೆ, ನಗರ
ಪಾಲಿಕೆ, ಪುರ ಸಭೆ ಹಾಗೂ ಪಟ್ಟಣ
ಪಂಚಾಯತ್‌ಗಳಲ್ಲಿ ಪರಿಶಿಷ್ಟರ
ಕಲ್ಯಾಣಕ್ಕಾಗಿ ಅನುದಾನ ಮಂಜೂ
ರಾಗಿದ್ದು, ಎಲ್ಲಾ ಸ್ಥಳೀಯ ಸಂಸ್ಥೆಗಳು
ಶೀಘ್ರವಾಗಿ ಕ್ರಿಯಾ ಯೋಜನೆ ರೂಪಿಸಿ
ಅನುಷ್ಠಾನಗೊಳಿ ಸಬೇಕು ಎಂದರು.
ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್‌ ,
ಜಿಲ್ಲೆಯಲ್ಲಿ ಪ್ರಸ್ತುತವಾಗಿ ಕುಡಿಯುವ
ನೀರು ಮತ್ತು ಜಾನುವಾರುಗಳಿಗೆ
ಮೇವಿನ ಸಮಸ್ಯೆ ಇಲ್ಲ. ಕುಡಿಯುವ
ನೀರಿನಲ್ಲಿ ಫ್ಲೋರೈಡ್‌ ಸಮಸ್ಯೆ ಇದೆ.
ಶಾಶ್ವತ ಪರಿಹಾರಕ್ಕೆ ಯೋಜನೆಗಳನ್ನು
ಅನುಷ್ಠಾನಗೊಳಿಸಲಾಗುತ್ತಿದೆ.
ಮುಂಜಾಗ್ರತಾ ಕ್ರಮ ಕೈಗೊಂಡು
ಕಾಮಗಾರಿಗಳನ್ನು ಅನುಷ್ಠಾನಗೊಳಿ
ಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ನೇಮಿರಾಜ
ನಾಯ್ಕ್‌, ಚಂದ್ರಾನಾಯ್ಕ ಅವರು ತಮ್ಮ
ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಜಿ.ಪಂ. ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ,
ಉಪಾಧ್ಯಕ್ಷ ಚೆನ್ನಬಸವನಗೌಡ,
ಮೇಯರ್‌ ಪಾರ್ವತಿ, ಉಪಮೇ
ಯರ್‌ ಶಶಿಕಲಾ, ವಿಧಾನ ಪರಿಷತ್‌
ಸದಸ್ಯ ಮೃತ್ಯುಂಜಯ ಜಿನಗಾ,
ಮುಖ್ಯಕಾರ್ಯನಿರ್ವಹಣಾಧಿಕಾರಿ
ಮಂಜುನಾಥ ನಾಯ್ಕ ಮತ್ತಿತರರು
ಉಪಸ್ಥಿತರಿದ್ದರು.
ಹಂಪಿ ಉತ್ಸವ ಜನವರಿಯಲ್ಲಿ:
ರಾಜ್ಯ ಹಾಗೂ ಜಿಲ್ಲೆಯಲ್ಲಿ ತಲೆದೋ
ರಿರುವ ಬರಗಾಲದ ಹಿನ್ನೆಲೆಯಲ್ಲಿ ಹಂಪಿ
ಉತ್ಸವವನ್ನು ಈ ಬಾರಿಯೂ ಜನವ
ರಿಯಲ್ಲಿಯೇ ನಡೆಸಲಾಗುವುದು
ಎಂದು ಸಚಿವರು ತಿಳಿಸಿದರು.

No Comments to “ಬರ ಪರಿಹಾರ ಕಾರ್ಯ ಚುರುಕುಗೊಳಿಸಲು ಸಚಿವ ಜಾರಕಿಹೊಳಿ ಸೂಚನೆ”

add a comment.

Leave a Reply