ಗಂಗಾ ಕಲ್ಯಾಣ ನಿರ್ಲಕ್ಷ್ಯ; ಜೆಸ್ಕಾಂ ಅಭಿಯಂತರ ಸಸ್ಪೆಂಡ್‌

ರಾಯಚೂರು,ಅ.೧೭ ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷ್ಯ ತೋರಿದ ಜೆಸ್ಕಾಂನ ಕಾರ್ಯಪಾಲನಾ ಅಭಿಯಂತ ಸೇರಿದಂತೆ ಎಲ್ಲಾ ಸಹಾಯಕರ ಕಾರ್ಯಪಾಲನಾ ಅಭಿಯಂತ ರನ್ನು ಸಸ್ಪೆಂಡ್‌ ಮಾಡಲು ಸಮಾಜ ಕಲ್ಯಾಣ ಸಚಿವ ಎ. ನಾ ರಾ ಯ ಣಸಾ ್ವ ಮಿಆದೆಶ ನೀಡಿದರು. ಇಂದು ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಗಂಗಾಕಲ್ಯಾಣ ಯೋಜನೆಗೆ ಕಳೆದ ಹತ್ತು ವರ್ಷದಿಂದ ವಿದ್ಯುತ್‌ ಸಂಪರ್ಕ ಕಲ್ಪಿಸದೆ ಸುಮಾರು ೩ ಸಾವಿರಕ್ಕಿಂತ

ಹೆಚ್ಚು ಕೊಳವೆಬಾವಿಗಳು ಉಪಯೋಗಕ್ಕೆ ಇಲ್ಲದಂತಾಗಿವೆ ಎಂದು ನಿಗಮದ ಅಧಿ ಕಾರಿಗಳು ನೀಡಿದ ಮಾಹಿತಿಯಿಂದ ಕುಪಿತರಾದ ಸಚಿವ ನಾರಾಯಣಸ್ವಾಮಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಕಳೆದ ೧೦ ವರ್ಷದಲ್ಲಿ ಕಾರ್ಯಾಪಾಲನಾ ಅಭಿಯಂತರು ಮತ್ತು ಸಹಾಯಕ ಅಭಿಯಂತರಾಗಿ ಕಾರ್ಯ ನಿರ್ವಹಿಸಿದ ಅಭಿಯಂತರನ್ನು ಸಸ್ಪೆಂಡ್‌ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಹಾಗೂ ಜಿಲ್ಲಾಧಿಕಾರಿಗೆ ಸಭೆಯಲ್ಲಿ ಸೂಚನೆ ನೀಡಿದರು. ಸಭೆಗೆ ಬಂದು ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ ಕಾರಣ ಅಭಿಯಂತರು ಸಸ್ಪೆಂಡ್‌ ಮಾಡುವುದು ಅನಿವಾರ್ಯ ಎಂದ ಅವರು ಜಿಲ್ಲಾಧಿಕಾರಿ ಒಂದು ಬಾರಿ ಅವಕಾಶ ಕೋರಿದರೂ ಸಚಿವರು ಅದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ.

No Comments to “ಗಂಗಾ ಕಲ್ಯಾಣ ನಿರ್ಲಕ್ಷ್ಯ; ಜೆಸ್ಕಾಂ ಅಭಿಯಂತರ ಸಸ್ಪೆಂಡ್‌”

add a comment.

Leave a Reply