ಸರ್ಕಾರದ ಯೋಜನೆ ಜಾರಿ ಮಾಡದ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆ ಗಳಿಗೆ ಸಟಛಿಳೀಯ ಮಟ್ಟದಲ್ಲೇ ಪರಿಹಾರ ದೊರಕಿಸಿಕೊಡಬೇಕೆಂದು ಆದೇಶಿರುವ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಅಧಿ ಕಾರಿ ವರ್ಗಕ್ಕೆ ಆದೇಶ ಮಾಡಿದ್ದಾರೆ. ಆಡಳಿತ ಯಂತ್ರಕ್ಕೆ ಚುರುಕುಮು ಟ್ಟಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾ ಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಬಗೆಹರಿಯಬೇಕು. ಅಧಿಕಾರಿಗಳ ವರ್ತನೆ ಯಿಂದ ಸಮಸ್ಯೆಗಳು ಹೆಚ್ಚು ಬೆಳೆಯು ವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿ ಸಿದರು. ಬಜೆಟ್‌ನಲ್ಲಿ ಹಲವು ಕಾರ್ಯಕ್ರಮಗಳ ನ್ನು ಘೊಷಿಸಿದ್ದು, ಅವುಗಳ ಅನುಷ್ಠಾನಕ್ಕೆ ಸಾಕಷ್ಟು ಅನುದಾನವೂ ಸಹ ಇದೆ. ಅಧಿ ಕಾರಿಗಳು ಹಣಕಾಸಿನ ಸಮಸ್ಯೆಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸರ್ಕಾರದ ಯೋಜ ನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶ್ರಮಿಸಬೇಕೆಂದು ಕಿವಿ ಮಾತು

ಹೇಳಿದರು. ಅಧಿಕಾರಿಗಳು ಈ ಹಿಂದೆ ಉತ್ತಮ ಕೆಲಸ ಮಾಡಿದ್ದು, ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಇನ್ನು ಮುಂದೆ

ಸರ್ಕಾರಕ್ಕೆ ಉತ್ತಮ ಹೆಸರಲು ತರಲು ಶ್ರಮಿಸಿ ಎಂದರು. ಜನಸಾಮಾನ್ಯರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಇತ್ಯರ್ಥಗೊಳ್ಳುತ್ತಿಲ್ಲ. ವಿಧಾನಸೌಧಕ್ಕೆ ಜನತೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಜನತೆ ವಿಧಾನಸೌಧಕ್ಕೆ ಬರದಂತೆ ನೋಡಿಕೊಳ್ಳಬೇ ಕು. ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು. ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಜನಪರ ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಜನ ತಮ್ಮನ್ನು ಮುತ್ತಿಕೊಂಡು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುತ್ತಾರೆ. ಹೀಗಿದ್ದರೆ ಅಧಿಕಾರಿಗಳು ಏನು ಮಾಡುತ್ತಿ ದ್ದಾರೆ ಎನ್ನುವುದೇ ಅರ್ಥವಾಗುವುದಿಲ್ಲ. ಇದು ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಂತೆ ಗೋಚರಿಸುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿ ದರು. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಮುಂದುವರಿದಿದೆ.ಬರ ಪರಿಹಾರ ಕಾಮಗಾ ರಿಯ ವಿಷಯ ಬಂದರೆ ಕೆಲವು ಜಿಲ್ಲೆಗಳಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಇನ್ನು ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಕೆಲಸ ನಡೆದಿಲ್ಲ. ಬರಪರಿಹಾರ ವಿಚಾರದಲ್ಲಿ ನಿರ್ಲಕ್ಷ್ಯ ಇರ ಬಾರದು. ಸಂಕಷ್ಟದಿಂದ ಜನ ನೊಂದು ಕೊಂಡರೆ ಅದರಿಂದ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು. ಮರಳು ಸಾಗಿಸುವ ಲಾರಿಗಳ ಮೇಲೆ ೨೫ ರಿಂದ ೩೦ ಮೂವತ್ತು ಸಾವಿರ ರೂ ದಂಡ ವಿಧಿಸಲಾಗುತ್ತಿದೆ. ಕೆಲವೆಡೆ ಆಕ್ರಮವಾಗಿ ಮರಳು ಸಾಗಿಸುತ್ತಿದ್ದರೂ ಕೇಳದಂತಹ ಪರಿಸಿಟಛಿತಿ ಇದೆ. ಮತ್ತೆ ಹಲವೆಡೆ ವಿನಾಕಾರಣ ಲಾರಿಗಳನ್ನು ವಶಕ್ಕೆ ಪಡೆದು ಕಿರುಕುಳ ಕೊಡಲಾಗುತ್ತಿದೆ. ಇಂತಹ ಸಮಸ್ಯೆ ತಪ್ಪಿಸಲು ಮರಳು ಸಾಗಣೆ ಕುರಿತು ಕಾಯ್ದೆ ಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾ ಗುತ್ತಿದೆ ಎಂದು ಹೇಳಿದರು. ಮರಳು ಕೇವಲ ಒಂದು ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ ವಿಷಯವಲ್ಲ,ಐದು ಇಲಾಖೆಗಳ ವ್ಯಾಪ್ತಿಗೆ ಬರುವ ವಿಷಯವಾಗಿ ದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಪ್ರಮುಖರು ಸೇರಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕೆಂದು ಹೇಳಿದರು. ಸರ್ಕಾರದ ವಿವಿಧ ಇಲಾಖೆಗಳ ವಿಷಯ ನ್ಯಾಯಾಲಯದಲ್ಲಿದ್ದರೆ ಅದನ್ನು ಸರಿಯಾಗಿ ನಿರ್ವಹಿಸುವ ಕೆಲಸ ನಡೆಯು ತ್ತಿಲ್ಲ. ವಕೀಲರು ಸರಿಯಾದ ಮಾಹಿತಿ ಕೊಡದ ಪರಿಣಾಮವಾಗಿ ನ್ಯಾಯಾಲಯಗ

ಳಲ್ಲಿ ಸರ್ಕಾಕ್ಕೆ ಹಿನ್ನೆಡೆಯಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ತೋರುವ ಅಧಿ ಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ.ಇದು ಸಾಧ್ಯವಾ ಗದ ಕಾರಣದಿಂದ ಯಾವುದಾದರೂ ಒಂದು ಯೋಜನೆಯನ್ನು ಜಾರಿಗೊಳಿಸಬೇ ಕೆಂದರೆ ವಿನಾಕಾರಣ ವಿಳಂಬವಾಗುತ್ತಿದೆ. ಒಂದು ಯೋಜನೆಯ ಜಾರಿಗೆ ಆರು ತಿಂಗಳು ವಿಳಂಬವಾದರೆ ಅದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದರು. ಒಂದು ರಸ್ತೆ ನಿರ್ಮಾಣವಾಗಬೇ ಕೆಂದರೆ ಬಿಎಸ್‌ಎನ್‌ಎಲ್‌ನವರಿಂದ ಹಿಡಿದು ಹಲವು ಇಲಾಖೆಗಳ ಸಹಕಾರ ಬೇಕಾಗು ತ್ತದೆ.ಇಂತಹ ಸಂದರ್ಭದಲ್ಲಿ ಮೇಲಾಧಿ ಕಾರಿಗಳು ಶ್ರದೆಟಛಿ ವಹಿಸಿ,ಪರಸ್ಪರ ಚರ್ಚೆ ನಡೆಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು. ಸಮ್ಮೇಳನದಲ್ಲಿ ಸರ್ಕಾರದ ಉಪಮು ಖ್ಯಮಂತ್ರಿ ಆರ್‌.ಅಶೋಕ್‌,ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ,ವೈದ್ಯಕೀ ಯ ಶಿಕ್ಷಣ ಸಚಿವ ಎ.ರಾಮದಾಸ್‌,ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌

No Comments to “ಸರ್ಕಾರದ ಯೋಜನೆ ಜಾರಿ ಮಾಡದ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ”

add a comment.

Leave a Reply

You must be logged in to post a comment.