ಹೈ.ಕ ವಿವಿಧೆಡೆ ಪ್ರತಿಭಟನೆ, ಬಂಧನ,ಬಿಡುಗಡೆ

ಬಗರ್‌ಹುಕಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟ ನೀಡುವಂತೆ

ಕರ್ನಾಟಕ ಪ್ರಾಂತ ರೈತ ಸಂಘ ಇಂದು ರಾಯಚೂರಿನಲ್ಲಿ ತಹಶೀಲ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತ್ತು™. ಹಲವಾರು ವರ್ಷಗಳಿಂದ ಕಂದಾ ಯ ಭೂಮಿಯಲ್ಲಿ ಬಗರ್‌ಹುಕಂ ಸಾಗುವಳಿ ಮಾಡುತ್ತಿರುವವರಿಗೆ ಅರಣ್ಯ ಪ್ರದೇಶದಲ್ಲಿ ಭೂಹೀನರಿಗೆ ಮಾಡುತ್ತಿರುವ

ಸಾಗುವಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ವ್ಯಾಪ್ತಿ ನಡೆಸಿದ ಅಂಗವಾಗಿ ರಾಯಚೂರು ನಲ್ಲಿ ತಹಶೀಲ್‌ ಕಚೇರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು. ಕಳೆದ ಹಲವಾರು ವರ್ಷಗಳಿಂದ ತಮ್ಮ ಈ ಬೇಡಿಕೆ ಈಡೇರಿಸಲು ಒತ್ತಾ ಯಿಸಿ ಮನವಿ ಸಲ್ಲಿಸಿದ್ದರೂ ಅದಕ್ಕೆ ಸ್ಪಂದಿಸದ ರಾಜ್ಯ ಸರಕಾರ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದ ರೈತ

ಸಂಘಟನೆ ಮುಖಂಡರು ತಮ್ಮ ಬೇ ಡಿಕೆ ಈಡೇರಿಸಲು ಒತ್ತಾಯಿಸಿದರು. ನಿವೇಶನ ರಹಿತರಿಗೆ ನಿವೇಶನ, ಬಡವರಿಗೆ ಸಮರ್ಪಕವಾಗಿ ಆಹಾರ ವಿತರಣೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸಂಘ ದ ಜಿಲ್ಲಾ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಲಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೆ.ಜಿ.ವಿರೇಶ, ರಂಗಪ್ಪ , ಶರಣಪ್ಪ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದರು.

No Comments to “ಹೈ.ಕ ವಿವಿಧೆಡೆ ಪ್ರತಿಭಟನೆ, ಬಂಧನ,ಬಿಡುಗಡೆ”

add a comment.

Leave a Reply

You must be logged in to post a comment.