ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು viagra sans ordonnance ಅರ್ಹತೆ ಹೊಂದಿದ್ದರೂ ಸಹಿತ ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೋಬಳಿ ಕೇಂದ್ರವಾಗಿಯೇ ಉಳಿದಿದ್ದ ಕಂಪ್ಲಿ ಪಟ್ಟಣವನ್ನು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಇಂದು ತಮ್ಮ ಪ್ರಥಮ ಆಯ&ವ್ಯಯದಲ್ಲಿ ರಾಜ್ಯದ ೪೩ ಪಟ್ಟಣ ಗಳನ್ನು ಅದರಲ್ಲೂ ಮುಖ್ಯವಾಗಿ ಐತಿಹಾಸಿ ಕವಾಗಿ ವಿಶೇಷ ಸ್ಥಾನವನ್ನು ಪಡೆದ ಕಂಪ್ಲಿ ಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೊಷಣೆ ಮಾಡುವ ಮೂಲಕ ಅನೇಕ ವರ್ಷಗಳ ಕಂಪ್ಲಿ ಜನತೆಯ ಕನಸನ್ನು ನನಸು ಮಾಡಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬಜೆಟ್ಟಿನಲ್ಲಿ ನೂತನ ತಾಲೂಕುಗಳ ಘೊಷಣೆಯಾ ಗುತ್ತಿದ್ದಂತೆಯೇ ಕಂಪ್ಲಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಅರವಿ ಬಸವನಗೌಡ ಮತ್ತು ಸಮಿತಿಯ ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ಸಂಘ&ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸಮಾವೇಶಗೊಂಡು ಪಟಾಕಿಗಳನ್ನು ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಣೆ ಮಾಡಿದರು. ನಂತರ ಮಾತನಾಡಿದ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಅರವಿ ಬಸವನಗೌಡ ಅವರು ಬಳ್ಳಾರಿ ಜಿಲ್ಲೆಯ ಅತ್ಯಂತ ಪ್ರಮುಖ ವಾಣಿಜ್ಯ ಕೇಂದ್ರ ವಾಗಿರುವ ಕಂಪ್ಲಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ರಚನೆ ಮಾಡಬೇಕೆಂದು ಮೂರು ಭಾರಿ ನಿರಂತರವಾಗಿ ಹೋರಾಟ ಗಳನ್ನು ಮಾಡಲಾಗಿತ್ತು. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಗಳಾ ಗಿದ್ದಾಗ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಲಾಗಿತ್ತು, ಆದರೆ ಅದು ಕನಸಾಗಿಯೇ ಉಳಿದಿತ್ತು. ಆದರೆ ನಂತರ ಪುನಃ ಹೋರಾಟ ವನ್ನು ಮಾಡಿ ಸರಕಾರದ ಗಮನ ಸೆಳೆಯ ಲಾಗಿತ್ತು.  ಆದರೆ ಕಳೆದ ನವೆಂಬರ್‌ ತಿಂಗಳಲ್ಲಿ ಕಂಪ್ಲಿ ಶಾಸಕರಾದ ಟಿ.ಹೆಚ್‌.ಸುರೇಶಬಾಬು ನೇತೃತ್ವದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿಯಾಗಿ ಐತಿಹಾಸಿ ಕವಾಗಿ ಪ್ರಸಿದ್ದಿಯನ್ನು ಪಡೆದ ಕಂಪ್ಲಿಯನ್ನು ತಾಲೂಕು ಕೇಂದ್ರವಾಗಿ ಘೊಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು ಹಾಗೂ ಸ್ವತಃ ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ ಕಂಪ್ಲಿಯನ್ನು ತಾಲೂಕು ಕೇಂದ್ರವನ್ನಾಗಿ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಎಲ್ಲಾ ಕಾರಣಗಳಿಂದ ಇಂದು ಕಂಪ್ಲಿ ಪಟ್ಟಣವನ್ನು ನೂತನ ತಾಲೂಕು ಕೇಂದ್ರವಾಗಿ ಮತ್ತು ನೂತನ ತಾಲೂಕುಗಳ ಅಭಿವೃದ್ದಿಗೆ ೨ ಕೋಟಿ ರೂಗಳನ್ನು ಮಂಜೂರು ಮಾಡುವ ಮೂಲಕ ಕಂಪ್ಲಿ ಭಾಗದ ಜನತೆ ದಶಕಗಳ ಕನಸನ್ನು ನನಸು ಮಾಡಿದ್ದಾರೆ.

One Comment to “”

Leave a Reply

You must be logged in to post a comment.